
(ಕಡತ ಚಿತ್ರ)
ಮಂಗಳೂರು ಜುಲೈ 27 : ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವು (ಇಂದು) ಜುಲೈ 27 ರಾತ್ರಿ ಮತ್ತು 28ರಂದು ರಾತ್ರಿ ಮುಂಜಾನೆ ಸಂಭವಿಸಲಿದೆ. ಜುಲೈ 27ರ ರಾತ್ರಿ 11.54ಕ್ಕೆ ಚಂದ್ರಗ್ರಹಣವು ಆರಂಭವಾಗಲ್ಲಿದ್ದು ಮಧ್ಯರಾತ್ರಿ 1 ಗಂಟೆಯಿಂದ 2.43ರವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಜು. 28 ಮುಂಜಾನೆ 3.49ಕ್ಕೆ ಗ್ರಹಣವು ಬಿಡಲಿದ್ದು ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಬಹುದು. ಭೂಮಿಯ ವಾತಾವರಣದಲ್ಲಿ ಹಾದುಹೋಗುವ ಸೂರ್ಯನ ಕಿರಣಗಳ ಚದುರುವಿಕೆಯಿಂದ ಚಂದ್ರನು ರಕ್ತವರ್ಣದಲ್ಲಿ ಕಂಡುಬರುತ್ತಾನೆ.
ಇದರೊಂದಿಗೆ ಕಳೆದ 15 ವರ್ಷದ ಅವಧಿಯಲ್ಲೇ ಭೂಮಿಗೆ ಮಂಗಳ ಗ್ರಹ ಹತ್ತಿರದಲ್ಲಿದ್ದು , ಜುಲೈ 27ರಂದು ಸೂರ್ಯ , ಭೂಮಿ ಮತ್ತು ಮಂಗಳ ಒಂದೇ ಸಾಲಿನಲ್ಲಿ ಬರಲಿವೆ. ಭೂಮಿ ಹಾಗು ಮಂಗಳ ಗ್ರಹಗಳ ನಡುವಿನ ಅಂತರ ಜುಲೈ 31ನೇ ತಾರೀಖಿನಂದು ಕಡಿಮೆ ಇರಲಿದ್ದು ಆ ದಿನ ಮಂಗಳ ಗ್ರಹ ಪ್ರಕಾಶಮಾನವಾಗಿರುತ್ತದೆ.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಲ್ಲಿ ರಾತ್ತಿ 11.30 ರಿಂದ 3.30ರ ವರೆಗೆ ಈ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ದೂರದರ್ಶಕ ಮತ್ತು ದುರ್ಬೀನುಗಳ ವ್ಯವಸ್ಥೆ ಮಾಡಲಾಗಿದೆ. ಮೋಡಗಳ ಅಡಚಣೆ ಇಲ್ಲದಿದ್ದಲ್ಲಿ ಆಸಕ್ತ ವೀಕ್ಷಕರು ಇದರ ಸದುಪಯೋಗ ಪಡೆಯಬಹುದಾಗಿದೆ. ನಿರ್ದೇಶಕ ಡಾ ಕೆ ವಿ ರಾವ್ ತಿಳಿಸಿದ್ದಾರೆ.

(ಕಡತ ಚಿತ್ರ)
ಬ್ಲಡ್ ಮೂನ್ : ತುಂಬಾ ಅಪರೂಪದ ವಿದ್ಯಮಾನ
ಶತಮಾನದ ಅತೀ ದೀರ್ಘ ಚಂದ್ರ ಗ್ರಹಣ ಇಂದು ನಡೆಯಲಿದೆ. ಇದನ್ನು ವರ್ಷದ ಎರಡನೇ ಅತಿ ದೊಡ್ಡ ಗ್ರಹಣ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಇದೇ ದಿನವೇ ಗುರುಪೂರ್ಣಿಮೆ ಬಂದಿರುವುದು. ಚಂದ್ರಗ್ರಹಣವು 27ರ ರಾತ್ರಿ 11:54 ರಿಂದ 28ರ ಬೆಳಿಗ್ಗೆ 3:55ರ ತನಕ ಇರುವುದು.
ಇನ್ನು ಈ ಚಂದ್ರಗ್ರಹಣವು ಶತಮಾನದ ಅತೀ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದೆ ಮತ್ತು ಈ ವೇಳೆ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಇದು ತುಂಬಾ ಅಪರೂಪದ ವಿದ್ಯಮಾನ. ಜುಲೈ 27 ಮತ್ತು ಜುಲೈ 28ರ ರಾತ್ರಿಗಳಲ್ಲಿ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಜುಲೈ 27ರಂದು ನಡೆಯಲಿರುವ ಚಂದ್ರಗ್ರಹಣವು ಸುಮಾರು ಒಂದು ಗಂಟೆ ಮತ್ತು 43 ನಿಮಿಷಗಳ ಕಾಲ ಸುದೀರ್ಘವಾಗಲಿದೆ.
Comments are closed.