ಕರಾವಳಿ

ಕಾರ್ಗಿಲ್‌ ವಿಜಯ ದಿವಸ : ಕಾರ್ಗಿಲ್‍ನಲ್ಲಿ ಹುತಾತ್ಮರಾದ ಸೈನಿಕರಿಗೆ ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಕೆ

Pinterest LinkedIn Tumblr

ಮಂಗಳೂರು : ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರೀ ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್‌, ಲಯನ್ಸ್‌ ಜಿಲ್ಲೆ 317-ಡಿ ಮತ್ತು ಸಮಗ್ರ ಕಲಿಕಾ ಕೇಂದ್ರದ ಸಹಯೋಗದಲ್ಲಿ ಗುರುವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.

ಕಾರ್ಗಿಲ್‌ ವಿಜಯ ದಿವಸದ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನದ ಮುಖ್ಯಸ್ಥರಾದ ವಿಜಯನಾಥ ವಿಠ್ಠಲ ಶೆಟ್ಟಿ, ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘದ ನಿಕಟಪೂರ್ವ ಅಧ್ಯಕ್ಷ ನಿಟ್ಟೆಗುತ್ತು ಶರತ್‌ ಭಂಡಾರಿ, ನಿವೃತ್ತ ಹಿರಿಯ ಭೂಸೇನಾಧಿಕಾರಿ ಐ.ಎನ್‌. ರೈ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಐರನ್ ಸಹಿತಾ ಹಲವಾರು ಪ್ರಮುಖರು ಕಾರ್ಗಿಲ್‍ನಲ್ಲಿ ಹುತಾತ್ಮರಾದ ಸೈನಿಕರಿಗೆ ನಗರದ ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಗೌರವ ನಮನವನ್ನು ಸಲ್ಲಿಸಿದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ, ಕಾರ್ಪೊರೇಟರ್‌ ರೂಪಾ ಡಿ. ಬಂಗೇರ, ಖಾಯಂ ಲೋಕ ಅದಾಲತ್‌ನ ಕಿಶೋರ್‌ ಚಂದ್ರ ಹೆಗ್ಡೆ, ಕ್ಯಾ| ಬ್ರಿಜೇಶ್‌ ಚೌಟ, ಗೃಹರಕ್ಷಕದಳ ಕಮಾಡೆಂಟ್‌ ಡಾ| ಮುರಳಿ ಮೋಹನ್‌ ಚೂಂತಾರು, ಕುಸುಮಾಕರ್‌, ಎನ್‌ಸಿಸಿ ಅಧಿಕಾರಿ ಲೆಫ್ಟಿ ನೆಂಟ್‌ ಕರ್ನಲ್‌ ಗ್ರೇಶಿಯನ್‌ ಸಿಕ್ವೇರಾ, ಡಾ| ಆಶಾ ಜ್ಯೋತಿ ರೈ, ಕದ್ರಿ ಠಾಣೆ ಪಿಎಸ್‌ಐ ಮಾರುತಿ, ಸಚಿತಾ ನಂದಗೋಪಾಲ್‌ ಮೊದಲಾದವರು ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments are closed.