ಕರಾವಳಿ

ನಟ ಶಿವಣ್ಣನನ್ನು ಭೇಟಿಯಾದ ಮೇಲ್ಮನೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಬೆಂಗಳೂರು: ವಿಧಾನಪರಿಷತ್ (ಮೇಲ್ಮನೆ) ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಚಲನಚಿತ್ರ ನಟ ಡಾ. ಶಿವರಾಜಕುಮಾರ್ ಅವರನ್ನು ಬುಧವಾರ ಭೇಟಿಯಾದರು. ಈ ಸಂದರ್ಭ ಕುಂದಾಪುರ ವಕ್ವಾಡಿ ಮೂಲದ ಉದ್ಯಮಿ ವಿ.ಕೆ. ಮೋಹನ್, ಬಿಜೆಪಿ ಮುಖಂಡ ಪ್ರವೀಣ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.

ಇದೇ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳ ಬಗೆಗಿನ ಪುಸ್ತಕವನ್ನು ನಟಸಾರ್ವಭೌಮ ಶಿವರಾಜ ಕುಮಾರ್ ಅವರಿಗೆ ಶ್ರೀನಿವಾಸ ಪೂಜಾರಿಯವರು ನೀಡಿ, ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿಯನ್ನು ವಿವರಿಸಿದರು.

ಚಲನಚಿತ್ರವೊಂದರ ಚಿತ್ರೀಕರಣದ ವೇಳೆಯೇ ವಿಪಕ್ಷ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಿವಣ್ಣ ಕೆಲಹೊತ್ತು ಅವರ ಜೊತೆ ಮಾತುಕತೆ ನಡೆಸಿದ್ದಾರೆ.

(ಯೋಗೀಶ್ ಕುಂಭಾಸಿ, ಉಡುಪಿ)

Comments are closed.