ಕರಾವಳಿ

ಈ ಸ್ಪ್ರೇಯನ್ನ ಬಳಸಿ ಸೊಳ್ಳೆ ಕಡಿತದಿಂದ ಪಾರಾಗಿ..

Pinterest LinkedIn Tumblr

ಈ ಸೊಳ್ಳೆಗಳಿಂದ ಅದೇನೆ ಮಾಡಿದರೂ ಪರಿಹಾರ ಮಾತ್ರ ಸಿಗುವುದಿಲ್ಲ. ಅಂಗಡಿಗಳಲ್ಲಿ ಸಿಗುವ ಸೊಳ್ಳೆ ಬತ್ತಿ ಅಥವಾ ಇತರ ವಸ್ತುಗಳನ್ನು ಬಳಸಿದರೆ ಅದು ನಮ್ಮ ಆರೋಗ್ಯಕ್ಕೆ ಹಾನಿಯುಂಟು ಆಡಬಹುದು ಎಂಬ ಭಯ ಬೇರೆ. ಅಲ್ಲದೆ, ಈಗ ಸೊಳ್ಳೆಗಳಿಂದ ಹರಡುವ ರೋಗಗಳು ಭಯ ಮೂಡಿಸುತ್ತವೆ.

ಅದಕ್ಕೆ ನಾವಿಲ್ಲಿ ಹೆಚ್ಚು ಹಾನಿಕರಕವಲ್ಲದ ಕೆಲವು ಸ್ಪ್ರೇಗಳನ್ನು ಮನೆಯಲ್ಲೇ ಮಾಡಿ ಹೇಗೆ ಬಳಸಬಹುದೆಂದು ತಿಳಿಸಿಕೊಡುತ್ತೇವೆ ಬನ್ನಿ. ಒಂದು ಬಾಟಲಿಯಲ್ಲಿ ನಾವು ಹೇಳಿದ ಈ ವಸ್ತುಗಳನ್ನು ಹಾಕಿ ಸ್ಪ್ರೇ ಮಾಡುವ ಸಣ್ಣ ಕೊಳವೆಗಳನ್ನು ಫಿಕ್ಸ್ ಮಾಡಿದರೆ ಸಾಕು. ಆದರೆ ಈ ಸ್ಪ್ರೇಯನ್ನು ನಿಮ್ಮ ಮುಖಕ್ಕೆ ಹೊಡೆಯದಂತೆ ಎಚ್ಚರ ವಹಿಸಿ.

ಈ ಸ್ಪ್ರೇ ಬಳಸಿದರೆ ಸೊಳ್ಳೆ ಕಡಿತದಿಂದ ಪಾರಾಗಬಹುದು
ಒಂದು ಬಾಟಲಿಗೆ 30ಎಂಎಲ್ ತೆಂಗಿನೆಣ್ಣೆ ಮತ್ತು 10 -12 ಹನಿ ಬೇವಿನೆಣ್ಣೆ ಸೇರಿಸಿ ಮಿಕ್ಸ್ ಮಾಡಿ ಸ್ಪ್ರೇ ಯಾಗಿ ಬಳಸಿಕೊಳ್ಳಿ. ಇದನ್ನು ನಿಮ್ಮ ದೇಹಕ್ಕೆ ಸಿಂಪಡಿಸಿದರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ.

ಸೊಳ್ಳೆ ಕಡಿತದಿಂದ ಪಾರು ಮಾಡುವ ಸ್ಪ್ರೇ
3 -4 ಹನಿ ವೆನಿಲ್ಲಾ ಎಕ್ಟ್ರಾಕ್ಟ್, 9 – 10 ಹನಿ ಲ್ಯಾವೆಂಡರ್ ಎಣ್ಣೆ, ನಿಂಬೆ ರಸ 3 -4 ಚಮಚ, 1 -2 ಕಪ್ ನೀರು ಮಿಕ್ಸ್ ಮಾಡಿ ಬಾಟಲಿಯಲ್ಲಿ ಹಾಕಿ ನಿಮ್ಮ ಕೈ ಮತ್ತು ಕಾಲುಗಳಿಗೆ ಸಿಂಪಡಿಸಿಕೊಳ್ಳಿ.

ಸೊಳ್ಳೆ ಕಡಿತದಿಂದ ಪಾರು ಮಾಡುವ ಸ್ಪ್ರೇ
30 ಎಂಎಲ್ ತೆಂಗಿನೆಣ್ಣೆ ಮತ್ತು 15 ಹನಿ ಪುದೀನಾ ಎಣ್ಣೆ ಮಿಕ್ಸ್ ಮಾಡಿ ಸ್ಪ್ರೇ ತಯಾರಿಸಬಹುದು.

ಸೊಳ್ಳೆ ಕಡಿತದಿಂದ ಪಾರು ಮಾಡುವ ಸ್ಪ್ರೇ
1ಲೀ ತೆಂಗಿನೆಣ್ಣೆಗೆ 10 ಮಿಲೀ ನೀಲಗಿರಿ ಎಣ್ಣೆ ಮಿಕ್ಸ್ ಮಾಡಿಸಿ ಸಿಂಪಡಿಸಿದರೆ ಸೊಳ್ಳೆ ಕಡಿಯುವುದಿಲ್ಲ.

Comments are closed.