ಕರಾವಳಿ

ಮುಖದ ಅಂದವನ್ನ ಕೆಡಿಸುವ ಮುಖದ ಮೇಲಿನ ಬೇಡವಾದ ಕೂದಲನ್ನ ನಿವಾರಿಸಲು ಸುಲಭ ಉಪಾಯ.

Pinterest LinkedIn Tumblr

ಪ್ರತಿಯೊಬ್ಬ ಮಹಿಳೆಯು ತಾನು ಸುಂದರವಾಗಿ ಕಾಣಲು ಬಯಸುವುದು ಸಹಜ. ತತ್ವಚೆಗೆ ಹೆಚ್ಚಿನ ಅರಿಕೆಯನ್ನ ಮಾಡುತ್ತಾರೆ. ಆದರೆ ಮುಖದ ಅಂದವನ್ನ ಮುಖದ ಮೇಲಿನ ಬೇಡವಾದ ಕೂದಲುಗಳು ಹಾಳುಮಾಡುತ್ತವೆ. ಇಂತಹ ಬೇಡವಾದ ಕೂದಲುಗಳನ್ನ ತೆಗೆಯಲು ಹಲವು ಬಗೆಯ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಇದಕ್ಕೆ ಮನೆಯಲ್ಲೇ ಪರಿಹಾರವಿದೆ ಎಂಬುದನ್ನ ಮರೆತಿರುತ್ತಾರೆ. ಮುಖದಲ್ಲಿನ ಬೇಡವಾದ ಕೂದಲನ್ನ ನಿವಾರಿಸಲು ಇಲ್ಲಿದೆ ನೋಡಿ ಸುಲಭ ಉಪಾಯ.

* ಎರಡು ಚಮಚ ಅರಿಶಿನ ಪುಡಿ ಮತ್ತು ಸ್ವಲ್ಪ ಕಡಲೆಹಿಟ್ಟನ್ನು ಸೇರಿಸಿ ಬಿಸಿ ನೀರಿನಲ್ಲಿ ಕಲೆಸಿ ಮಿಶ್ರ ಮಾಡಿ. ಮುಖದ ಮೇಲೆ ಲೇಪಿಸಿದ ಈ ಮಿಶ್ರಣವು 70 % ಒಣಗುತ್ತಿದ್ದಂತೆಯೇ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. ಈ ಮಿಶ್ರಣದ ಬಳಕೆಯು ನಿಮ್ಮ ಅನಗತ್ಯವಾದ ರೋಮದ ಬೆಳವಣಿಗೆಯನ್ನು ತಡೆಯುತ್ತದೆ.

* ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ಲಿಂಬೆರಸ. ಸಕ್ಕರೆಯನ್ನು ಸಂಪೂರ್ಣವಾಗಿ ಲೀನವಾಗದಂತೆ ಕದಡಿ.
ದೊರಗಾದ ಸಕ್ಕರೆಯ ತುಣುಕುಗಳು ಸ್ಕ್ರಬ್ನಂತೆ ಸಹಾಯ ಮಾಡುವುದು. ಈ ಮಿಶ್ರಣಕ್ಕೆ ಜೇನು ತುಪ್ಪವನ್ನು ಸೇರಿಸಿ, ಅಗತ್ಯ ಭಾಗಗಳಲ್ಲಿ ಮಾತ್ರ ಹಚ್ಚಿರಿ. ೧೦ ನಿಮಿಷಗಳ ಬಳಿಕ ನೇರವಾಗಿ ಸ್ಕ್ರಬ್ ಮಾಡಿಕೊಳ್ಳಿ ವಾರದಲ್ಲಿ ಮೂರು ಬಾರಿಯಾದರೂ ಇ ರೀತಿ ಸ್ಕ್ರಬ್ ಮಾಡಿಕೊಳ್ಳುವುದರಿಂದ ನಿರೀಕ್ಷಿತ ಫಲಿತಾಂಶವನ್ನು ಕಾಣುವಿರಿ.

* ಮುನ್ನಾ ದಿನ ನೆನೆಸಿಟ್ಟ ಕಡಲೆ ಬೇಳೆಯನ್ನು ಅರೆದಿಟ್ಟುಕೊಳ್ಳಿ. ಆಲೂಗಡ್ಡೆ ರಸವನ್ನು ಹಿಂಡಿ ತೆಗೆದು ಆ ರಸವನ್ನು ಕೂಡ ಈ ಹಿಟ್ಟಿಗೆ ಬೆರೆಸಿಕೊಳ್ಳಿ. ಇದಕ್ಕೆ ನಾಲ್ಕು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮುಖ ಹಾಗೂ ಶರೀರದ ಇತರ ಅಗತ್ಯ ಭಾಗಗಳಿಗೆ ಲೇಪಿಸಿ. ಒಣಗಿದ ಬಳಿಕ ಮುಖದ ಪೂರಾ ತಿಕ್ಕಿ ಮಿಶ್ರಣವನ್ನು ಕೆರೆದು ತೆಗೆಯಿರಿ. ಆಲೂಗಡ್ಡೆಯಲ್ಲಿರುವ ನೈಸರ್ಗಿಕ ಬ್ಲೀಚಿಂಗ್ ಗುಣದಿಂದಾಗಿ ಮುಖದ ಕೂದಲಿನ ಬಣ್ಣವು ಕಳೆಗುಂದುವುದರೊಂದಿಗೆ, ಕೂದಲಿನ ಬೆಳವಣಿಗೆಯೂ ಕಡಿಮೆಯಾಗುವುದು.

Comments are closed.