ಕರಾವಳಿ

ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಆಕಳಿಕೆ ಬಗ್ಗೆ ಕೆಲವು ವಿಚಿತ್ರವಾದ ಸಂಗತಿಗಳು

Pinterest LinkedIn Tumblr

ನಾವು ದಿನದಲ್ಲಿ ಒಂದಲ್ಲ ಒಂದು ಸಲ ಆದ್ರೂ ಆಕಳಿಸ್ತೇವೆ. ಎಲ್ಲರಿಗೂ ಗೊತ್ತಿರುವ ಹಾಗೆ ನಿದ್ರೆ ಕಡಿಮೆ ಆದಾಗ, ಆಯಾಸ ಇದ್ದಾಗ, ಬೋರ್ ಆದಾಗ ಆಕಳಿಕೆ ಬರುವುದು ಸಾಮಾನ್ಯ ಬಿಡಿ. ಆದ್ರೆ ಆಕಳಿಕೆ ಬೇರೆ ಕಾರಣಕ್ಕೂ ಬರತ್ತದೆ ಅನ್ನೋ ಸಂಗತಿ ನಿಮಗೆ ಗೊತ್ತಿಲ್ಲದೆ ಇರಬಹುದು. ಆಕಳಿಕೆ ಒಂದು ಸಾಮಾಜಿಕ ವಿಷಯ ನಮ್ಮ ದೇಹಕ್ಕೂ ಅದಕ್ಕೂ ಏನೂ ಸಂಬಂಧವಿಲ್ಲ ಎನ್ನುವವರೂ ಇದ್ದಾರೆ. ಯಾಕೆಂದ್ರೆ ನಮಗೆ ಸುಸ್ತು ಆಗಿಲ್ಲದೆ ಇರುವಾಗ, ನಿದ್ದೆ ಬರದೆ ಇರುವಾಗಲೂ ಆಕಳಿಕೆ ಬರುತ್ತದೆ.

ಆಕಳಿಕೆ ಯಾಕೆ ಬರುತ್ತದೆ?
ಆಕಳಿಕೆ ಯಾಕೆ ಬರುತ್ತದೆ ಎಂಬುದಕ್ಕೆ ನಿರ್ದಿಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಹಲವು ಸಂಶೋಧನೆಗಳು ರಕ್ತದಲ್ಲಿ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಹೆಚ್ಚಾದಾಗ ಆಕಳಿಕೆ ಬರುತ್ತದೆ ಎಂದು ಹೇಳಿವೆ. ಅಂದರೆ ರಕ್ತಕ್ಕೆ ಇನ್ನಷ್ಟು ಆಮ್ಲಜನಕ ಸರಬರಾಜು ಆಗಬೇಕು ಎಂಬುದು ಆಕಳಿಕೆಯ ಸಂಕೇತ.

ಇನ್ನು ಕೆಲವು ಸಂಶೋಧನೆಗಳ ಪ್ರಕಾರ, ಮೆದುಳಿನ ಹೈಪೋಥಲಮಸ್‌ (ಮಸ್ತಿಷ್ಕ)ಕ್ಕೆ ಆಮ್ಲಜನಕದ ಕೊರತೆಯಾದಾಗ ಮತ್ತು ತೀರಾ ಆಯಾಸಗೊಂಡಾಗ ಅಲ್ಲಿ ಬಿಡುಗಡೆಯಾಗುವ ಕೆಲವು ರಾಸಾಯನಿಕಗಳು ಆಕಳಿಕೆ ಇಡುವಂತೆ ಪ್ರೇರೇಪಿಸುತ್ತದೆ. ಇನ್ನು ಕೆಲವು ಸಂಶೋಧನೆಗಳು, ರಾತ್ರಿ ಮತ್ತು ಬೆಳಗ್ಗೆ ಎಚ್ಚರವಾಗುವುದಕ್ಕೆ ಸ್ವಲ್ಪ ಮೊದಲು ಮಸ್ತಿಷ್ಕದಲ್ಲಿ ಡೊಪಾಮಿನ್‌, ಗ್ಲೈಸಿನ್‌, ಆಕ್ಸಿಟೋಸಿನ್‌ ಮತ್ತು ಆಂಡ್ರೆನೊಕೊರ್ಟಿಕೋಟ್ರೋಪಿಕ್‌ ಹಾರ್ಮೋನ್‌ಗಳ ಮೂಲಕ ಸೃಷ್ಟಿಯಾಗುವ ರಾಸಾಯನಿಕ ಸಂದೇಶ ರವಾನೆಯಾಗಿ ಆಕಳಿಕೆ ಬರುವಂತೆ ಮಾಡುತ್ತದೆ ಎಂದು ಹೇಳಿವೆ.

ಅದೇನೇ ಇರಲಿ, ಆಕಳಿಕೆ ಬಗ್ಗೆ ಕೆಲವು ವಿಚಿತ್ರವಾದ ಸಂಗತಿಗಳನ್ನು ನಿಮಗೋಸ್ಕರ ಕೊಟ್ಟಿದೀವಿ, ಓದಿ…

ಹೊಟ್ಟೇಲಿರೋ ಮಗು ಕೂಡ ಆಕಳಿಸುತ್ತೆ:
ಇದು ಆರೋಗ್ಯದ ಲಕ್ಷಣ. ಮಿದುಳು ಸರಿಯಾಗಿ ಕೆಲಸ ಮಾಡ್ತಾ ಇದೆ ಅನ್ನೋದರ ಒಂದು ಗುರುತಂತೆ. ಹಾಗೇ ಭ್ರೂಣದ ಬೆಳವಣಿಗೆ ಕೂಡ ಒಳ್ಳೆ ರೀತಿಯಲ್ಲಿ ಆಗ್ತಾ ಇದೆ ಅಂತ ತಿಳ್ಕೊಳ್ಳಬಹುದು.

ಯಾರಾದಾರೂ ಜೊತೆ ಇದ್ದಾಗ ಜಾಸ್ತಿ ಆಕಳಿಕೆ:
ಆಕಳಿಕೆ ಸಾಂಕ್ರಾಮಿಕ ಅನ್ನೋದಕ್ಕೆ ಇದೊಂದು ಉದಾಹರಣೆ . ಸಂಶೋಧನೆಗಳ ಪ್ರಕಾರ ನಿಮ್ಮ ಸ್ನೇಹಿತರ ಜೊತೆ ಇದ್ದಾಗ ಯಾರಾದ್ರೂ ಆಕಳಿಸಿದ್ರೆ , ಅದು ನಿಮ್ಗೂ ಬಂತು ಅಂತಾನೇ ಅರ್ಥ. ಆ ತರ ಏನಾದ್ರೂ ನೀವು ಆಕಳಿಸಿದ್ರೆ ಆ ನಿಮ್ಮ ಗೆಳೆಯನಿಗೂ ನಿಮಗೂ ಭಾವನಾತ್ಮಕ ಸಂಬಂಧ ಇನ್ನೂ ಗಟ್ಟಿಯಾಗತ್ತೆ. ಇದರಲ್ಲಿ ಅನುವಂಶೀಯವಾಗಿಯೂ ಮತ್ತೆ ಭಾವನಾತ್ಮಕವಾಗೀಯೂ ಸಂಬಂಧವಿದೆ.

ತುಂಬಾ ಆಕಳಿಕೆ ಬರ್ತಿದ್ರೆ ಅದು ಕಾಯಿಲೆಯ ಮುನ್ಸೂಚನೆ:
ನೀವು ತುಂಬಾ ಆಕಳಿಸ್ತಾ ಇದ್ರೆ ಅದು ಒಳ್ಳೆಯದಲ್ಲ. ಏನೋ ನಿದ್ದೆ ಇಲ್ಲ ಅಷ್ಟೆ ಅಂತ ಸುಮ್ಮನಾಗುವುದು ಸರಿಯಿಲ್ಲ. ನಿದ್ದೆ ಕೆಟ್ಟರೆ ಹೊಟ್ಟೆ ಕೆಡುತ್ತದೆ ಹಾಗೆ ಹೊಟ್ಟೆಯಿಂದ ತಲೆ ತನಕ ಹೋಗೋ ನರಗಳಿಗೂ ತೊಂದರೆಯಾಗುತ್ತದೆ. ಈ ನರಗಳಿಗೆ “ವೇಗಸ್ ನರ” ಎನ್ನುತ್ತಾರೆ. ಇದರಿಂದ ಹೃದಯಕ್ಕೂ ತೊಂದರೆ ಆಗುವ ಸಾಧ್ಯತೆಗಳಿವೆ. ಮೆದುಳಿಗೆ ಸಂಬಂಧಪಟ್ಟ ಸಮಸ್ಯೆಗಳೂ ಹುಟ್ಟಿಕೊಳ್ಳಬಹುದು.

ಆಕಳಿಕೆಯಿಂದ ಮೆದುಳು ತಂಪಾಗುತ್ತದಂತೆ:
ಇದು ಎಶ್ಟರ ಮಟ್ಟಿಗೆ ನಿಜ ಆ ದೇವರೇ ಬಲ್ಲ. ತಲೆ ಬಿಸಿಯಾದಾಗ ಆಕಳಿಸಿದವರನ್ನು ಕಂಡವರಿಲ್ಲ. ಚಳಿಗಾಲದಲ್ಲಿ ಆಕಳಿಕೆ ಹೆಚ್ಚು ಎಂಬುದು ಸತ್ಯ. ಆದರೆ ಇದಕ್ಕಾವ ಪಕ್ಕಾ ಕಾರಣವೂ ಇಲ್ಲ. ಕ್ರೀಡಾಪಟುಗಳು ಸ್ಪರ‍್ದೆಗೆ ಮುನ್ನ ಹೆಚ್ಚು ಆಕಳಿಸುತ್ತಾರಂತೆ. ಇದರಿಂದ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ದೇಹವನ್ನು ಸೇರಿ ಪಂದ್ಯಕ್ಕೆ ಅಣಿಯಾಗುವುದು ಸುಲುಬವಂತೆ. ಆಕಳಿಕೆ ಕ್ರೀಡಾಪಟುಗಳ ಮೆದುಳನ್ನು ತಂಪಾಗಿಸುವುದರಿಂದ ಮಾನಸಿಕವಾಗಿ ತಾವು ನಿರ‍್ವಹಿಸಬೇಕಿರುವ ಆಟದ ಬಗ್ಗೆ ಸಂಪೂರ‍್ಣ ಗಮನವನ್ನು ಕೇಂದ್ರೀಕರಿಸಲು ಸಹಕಾರಿಯಂತೆ

ಆಕಳಿಕೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತೆ:
ಒಂದು ಅಧ್ಯಯನದ ಪ್ರಕಾರ 50 % ಜನರು ಇನ್ನೊಬ್ಬರನ್ನ ನೋಡಿಯೆ ಆಕಳಿಸುತ್ತಾರಂತೆ. ಯಾರಾದ್ರೂ ಆಕಳಿಸುವ ವೀಡಿಯೋ ತೋರಿಸಿದ್ರೆ ನೀವು ಆಕಳಿಸಿ ಬಿಡ್ತೀರಿ. ಇದು ನಮಗೆ ಮಾತ್ರವಲ್ಲ ಪ್ರಾಣಿಗಳಿಗೂ ಅನ್ವಯವಾಗತ್ತಂತೆ. ಅದರಲ್ಲೂ ನಿಮ್ಮ ಸಾಕು ನಾಯಿಗೆ!

ಒಂದೇ ಬಾರಿಗೆ ಅಂದಾಜು 6 ಸೆಕೆಂಡ್ ಆಕಳಿಕೆ ಬರತ್ತೆ:
ಅಧ್ಯಯನದ ಪ್ರಕಾರ ಒಂದು ಸಲ ಆಕಳಿಸೋಕೆ 6 ಸೆಕೆಂಡುಗಳ ಕಾಲಾವಧಿ ಬೇಕಂತೆ. ಕೆಲವೊಮ್ಮೆ ಇದು ನಮ್ಮ ಧೀರ್ಘ ಉಸಿರಾಟದ ಮೇಲೆ ಬದಲಾಗುತ್ತಾ ಇರುತ್ತದೆ. ಜೊತೆಗೆ ದೇಹದಲ್ಲಾಗುವ ಬದಲಾವಣೆಗಳಿಗೆ ಅನುಗುಣವಾಗಿಯೂ ಇದು ಬದಲಾಗುತ್ತದೆ.

ಆಕಳಿಕೆ ಬಗ್ಗೆ ಒದೋಕೆ ಶುರು ಮಾಡಿದಾಗ ಆಕಳಿಕೆ ಬರತ್ತೆ, ಯೋಚನೆ ಮಾಡ್ತಾ ಇದ್ದಾಗ್ಲೂ ಕೂಡಾ ಆಕಳಿಕೆ ಬರುತ್ತೆ. ನೋಡಿ ನೋಡಿ ಈಗ ಆಕಳಿಕೆ ಬಂತು ತಾನೆ?

Comments are closed.