ಕ್ರೀಡೆ

ಫಿಫಾ ಫುಟ್ಬಾಲ್ ವಿಶ್ವಕಪ್ ಗೆದ್ದ ಫ್ರಾನ್ಸ್‌ಗೆ ಸಿಕ್ಕ ಬಹುಮಾನ ಹಣ ಕೇಳಿದ್ರೆ ನೀವೇ ಶಾಕ್ ಆಗ್ತೀರಾ…?

Pinterest LinkedIn Tumblr

ಮಾಸ್ಕೋ(ರಷ್ಯಾ): 2018ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಚಾಂಪಿಯನ್ ತಂಡಕ್ಕೆ ಬಹುಮಾನವಾಗಿ ಸಿಗುವ ಹಣದ ಮೊತ್ತ ಎಷ್ಟು ಗೊತ್ತ.

ಹೌದು ಕಾಲ್ಜೆಂಡಿನ ಮಹಾಕಾಳಗದಲ್ಲಿ ಗೆದ್ದ ಫ್ರಾನ್ಸ್ ತಂಡ ಬರೋಬ್ಬರಿ 38 ಮಿಲಿಯನ್ ಡಾಲರ್(ಅಂದಾಜು 260 ಕೋಟಿ ರುಪಾಯಿ) ಬಹುಮಾನ ಪಡೆಯಲಿದೆ. ಇನ್ನು ರನ್ನರ್ ಅಪ್ ಆಗಿರುವ ಕ್ರೊವೇಶಿಯಾ 28 ಮಿಲಿಯನ್ ಡಾಲರ್(ಅಂದಾಜು 191 ಕೋಟಿ ರುಪಾಯಿ) ಮೊತ್ತದ ಬಹುಮಾನ ಪಡೆಯಲಿದೆ.

ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಫ್ರಾನ್ಸ್ 4-2 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಫ್ರಾನ್ಸ್ ಪರ ಮಾರಿಯೋ ಮಾಂಡ್ಜುಕಿಕ್, ಆಂಟೊಯಿನ್ ಗ್ರೀಜ್ಮನ್, ಪಾಲ್ ಪೋಗ್ಬಾ, ಕ್ಲೈನ್ ಮೆಬ್ಯಾಪ್ ತಲಾ ಒಂದು ಗೋಲು ಬಾರಿಸಿದ್ದಾರೆ.

1998ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿದ್ದ ಫ್ರಾನ್ಸ್ 20 ವರ್ಷಗಳ ಬಳಿಕ ಇದೀಗ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Comments are closed.