ಕರಾವಳಿ

ಮಂಗಳೂರು : ಅಧುನಿಕ ವಿನ್ಯಾಸದ ನೂತನ ವಸ್ತ್ರಮಳಿಗೆ “ಮೈ ಬ್ರಾಂಡ್” ಶುಭಾರಂಭ

Pinterest LinkedIn Tumblr

ಮಂಗಳೂರು : “ಮೈ ಬ್ರಾಂಡ್” ಹೆಸರಿನ ಪುರುಷರ ಅಧುನಿಕ ವಿನ್ಯಾಸದ ನೂತನ ಬಟ್ಟೆ ಮಳಿಗೆ ಬುಧವಾರ ಸಂಜೆ ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಶುಭಾರಂಭಗೊಂಡಿತ್ತು

ನಗರದ ಯುವ ಉದ್ಯಮಿ ಹೃದಯ್ ಪೈ ಮಾಲಕತ್ವದ ಈ ನೂತನ ವಸ್ತ್ರಮಳಿಗೆಯನ್ನು ಹೃದಯ್ ಪೈ ಅವರ ಮಾತೃ ಶ್ರೀಯವರಾದ ಶ್ರೀಮತಿ ಸವಿತಾ ಪೈ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಮಂಗಳೂರು ಮೇಯರ್ ಕೆ. ಭಾಸ್ಕರ್ ಮೊಯ್ಲಿ ಇವರು ದೀಪ ಬೆಳಗಿಸುವ ಮೂಲಕ ನೂತನ ಸಂಸ್ಥೆಗೆ ಚಾಲನೆ ನೀಡಿ ಶುಭಾ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಗರದ ಖ್ಯಾತ ಉದ್ಯಮಿಗಳಾದ ಪ್ರದೀಪ್ ಪೈ, ಅಶೋಕ್ ಚೌಟ, ನರೇಶ್ ಶೆಣೈ, ಸ್ಪಂದನ ವಾಹಿನಿ ಹಾಗೂ ಹನುಮಾನ್ ಮೋಟರ್‍ಸ್ ನ ಮಾಲಕ ವಿಲಾಸ್ ನಾಯಕ್, ಅನ್ನು ಮಂಗಳೂರು, ಮೊದಲಾದವರು ನೂತನ ಸಂಸ್ಥೆಯ ಯಶಸ್ಸಿಗೆ ಶುಭಾ ಕೋರಿದರು.

ಸಮಾರಂಭದಲ್ಲಿ ಹೃದಯ್ ಪೈ ಅವರ ಬಂಧು ಮಿತ್ರರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಸ್ಥೆಯ ಮಾಲಕ ಹೃದಯ್ ಪೈ ಅವರಿಗೆ ಶುಭಹಾರೈಸಿದರು.

ಮೊದಲ ಗ್ರಾಹಕರಿಗೆ ವಿಶೇಷ ಕೊಡುಗೆ:

“ಮೈ ಬ್ರಾಂಡ್” ವಸ್ತ್ರಮಳಿಗೆಯ ಮೊದಲ ಗ್ರಾಹಕರಾಗಿ ವಿಶೇಷ ವಿನ್ಯಾಸದ ಅಧುನಿಕ ಶೈಲಿಯ ಉಡುಪು ಖರೀದಿಸಿದ ಸ್ಪಂದನ ವಾಹಿನಿ ಮುಖ್ಯಸ್ಥ ವಿಲಾಸ್ ನಾಯಕ್ ಅವರಿಗೆ ಸಂಸ್ಥೆಯ ವತಿಯಿಂದ ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು.

__ ಸತೀಶ್ ಕಾಪಿಕಾಡ್

Comments are closed.