ಕರಾವಳಿ

ಗೃಹರಕ್ಷಕ ದಳದಿಂದ ವನಮಹೋತ್ಸವ :ಪರಿಸರ ರಕ್ಷಣೆಗೆ ಆದ್ಯತೆ ನೀಡುವಂತೆ ಡಾ| ಚೂಂತಾರು ಕರೆ

Pinterest LinkedIn Tumblr

ಮಂಗಳೂರು ಜುಲೈ 14: ಜಿಲ್ಲಾ ಗೃಹರಕ್ಷಕ ದಳದ ಬೆಳ್ತಂಗಡಿ ಘಟಕದ ವತಿಯಿಂದ ಶುಕ್ರವಾರ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ| ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಗಿಡ ನೆಡುವುದು, ಕಾಡು ಸಂರಕ್ಷಿಸುವುದು ಸೇವೆ ಕೊಡುಗೆಯ ಒಂದು ಭಾಗವಾಗಿದೆ. ಒಬ್ಬಾತ ವರ್ಷಕ್ಕೆ ಒಂದು ಗಿಡ ನೆಟ್ಟರೂ ಅದು ಬಹು ದೊಡ್ಡ ಕೊಡುಗೆ ಆಗಲಿದ್ದು, ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಪ್ರತಿವರ್ಷ ವನಮಹೋತ್ಸವ ಆಚರಿಸುತ್ತೇವೆ. ಆ ಬಳಿಕ ಆ ಗಿಡ ಏನಾಗಿದೆ ಎಂದು ನೋಡುವವರು ವಿರಳ, ನೆಟ್ಟ ಗಿಡಗಳನ್ನು ಪೋಷಣೆ ಮಾಡುವ ಮೂಲಕ ವನಮಹೋತ್ಸವವನ್ನು ಸಾರ್ಥಕಗೊಳಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೃಹರಕ್ಷಕರಿಗೆ ಸಸಿಯನ್ನು ವಿತರಿಸಲಾಯಿತು ಹಾಗೂ ಬೆಳ್ತಂಗಡಿ ಘಟಕದ ಗೃಹರಕ್ಷಕ ಅಪ್ಪು ಹಾಗೂ ಬಾಬು ರವರಿಗೆ ಸೆಕ್ಷನ್ ಲೀಡರ್ ಹುದ್ದೆಗೆ ಹಾಗೂ ಡೆನ್ನೀಸ್ ಡಿಸೋಜ, ಚಾಕೋ, ಬಾಸ್ಕರ್ ಪೂಜಾರಿ ಇವರಿಗೆ ಅಸಿಸ್ಟೆಂಟ್ ಸೆಕ್ಷನ್ ಲೀಡರ್ ಹುದ್ದೆಗೆ ಬಡ್ತಿ ನೀಡಿದ ಆದೇಶದ ಪ್ರತಿಯನ್ನು ಸದರಿಯವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ್ ಹಾಗೂ ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಹಾಗೂ ಬೆಳ್ತಂಗಡಿ ಘಟಕದ ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಉಪಸ್ಥಿತರಿದ್ದರು.

Comments are closed.