ಕರಾವಳಿ

ಅಮ್ಮನನ್ನು ನೋಡಲು ನಾಳೆ ಪರೋಲ್ ಮೇಲೆ ಉಡುಪಿಗೆ ಬರುತ್ತಿದ್ದಾನೆ ಡಾನ್ ಬನ್ನಂಜೆ ರಾಜಾ!

Pinterest LinkedIn Tumblr

ಉಡುಪಿ: ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ತಾಯಿಯನ್ನು ಭೇಟಿಯಾಗಲು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜಾ ಜುಲೈ 8ರಂದು ಭಾನುವಾರ ಉಡುಪಿಗೆ ಆಗಮಿಸಲಿದ್ದಾನೆ.

ತಾಯಿಯನ್ನು ನೋಡಬೇಕೆಂಬ ಬಗ್ಗೆ ಬನ್ನಂಜೆ ರಾಜಾ ನ್ಯಾಯಾಲಯದ ಮುಂದೆ ಅನುಮತಿ ಕೋರಿದ್ದ. ಆತನಿಗೆ ನ್ಯಾಯಾಧೀಶರು ವಿಶೇಷ ಅನುಮತಿ ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದಿರುವ ಬನ್ನಂಜೆ ರಾಜಾ ಜುಲೈ 8ರಂದು ಉಡುಪಿಯ ಮಲ್ಪೆಗೆ ಬರಲಿದ್ದಾನೆ ಎಂದು ತಿಳಿದು ಬಂದಿದೆ.

ಭೂಗತ ಪಾತಕಿ ಬನ್ನಂಜೆ ರಾಜಾನನ್ನು 2015ರ ಫೆಬ್ರವರಿ 10ರಂದು ಸೌತ್ ಆಫ್ರಿಕಾದ ಮೊರೆಕ್ಕಾದಲ್ಲಿ ಬಂಧಿಸಲಾಗಿತ್ತು. ಸುಮಾರು 15 ಪ್ರಕರಣಗಳನ್ನು ಉಲ್ಲೇಖಿಸಿ ಮೊರೆಕ್ಕೋದಿಂದ ಬಂಧಿಸಿ ಉಡುಪಿಗೆ ಕರೆ ತರಲಾಗಿತ್ತು. ಸದ್ಯ ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾನ ವಿಚಾರಣೆ ವಿಡೀಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದೆ. ಕೊಲೆ, ದರೋಡೆ, ಶೂಟೌಟ್ ಸೇರಿದಂತೆ ಸುಮಾರು ಹದಿನಾರು ಪ್ರಕರಣಗಳು ಬನ್ನಂಜೆ ಮೇಲಿದೆ.

ಬನ್ನಂಜೆ ರಾಜಾ ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಹೆಚ್ಚುವರಿ ಭದ್ರತೆಯನ್ನು ಕೂಡಾ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು ಬನ್ನಂಜೆ ಸಹಚರರು ಈ ಸಂದರ್ಭ ಆಗಮಿಸುವ ಸಾಧ್ಯತೆಯೂ ಹೆಚ್ಚಿದೆ.

Comments are closed.