ಕರಾವಳಿ

ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಗೋಸ್ವರ್ಗ ಸಂವಾದ ಕಾರ್ಯಕ್ರಮ

Pinterest LinkedIn Tumblr

ಮುಂಬಯಿ: ಹೊಸ ನಗರ ಶ್ರೀ ರಾಮಚಂದ್ರ ಮಠದ ಶ್ರೀ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಇವರಿಂದ ಗೋಸ್ವರ್ಗ ಸಂವಾದ ದೇಸಿ ಗೋವುಗಳ ಸಂವರ್ಧನ ಮಹಾ ಅಭಿಯಾನ ಕುರಿತು ಜಾಗೃತಿ ಕಾರ್ಯಕ್ರಮವು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ಜರಗಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಆರ್ಗಾನಿಕ್‌ ಇಂಡಸ್ಟೀಸ್ ಲಿಮಿಟೆಡ್‌ ಇದರ ಮುಖ್ಯ ಆಡಳಿತ ನಿರ್ದೇಶಕ ಆನಂದ ಶೆಟ್ಟಿ, ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಡಾ| ಮನೋಹರ ಹೆಗ್ಡೆ, ಉದ್ಯಮಿ ಬೊಳ್ನಾಡುಗುತ್ತು ಚಂದ್ರಹಾಸ ರೈ, ಬಂಟರ ಸಂಘ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಠಲ್‌ ಆಳ್ವ, ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಜಯಪ್ರಕಾಶ್‌ ಶೆಟ್ಟಿ, ನವೀನ್‌ ಶೆಟ್ಟಿ ಇನ್ನಬಾಳಿಕೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ, ಮುಂಬಯಿಯ ವಿವಿಧ ಜಾತೀಯ ಸಂಘ-ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ದಿಕ್ಸೂಚಿ ಭಾಷಣ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕರ್ನಾಟಕದ ಹೆಸರಾಂತ ಗಾಯಕ, ನಿರ್ದೇಶಕ ಶ್ರೀ ಶಂಕರ ಶಾನುಭಾಗ್‌ ಅವರಿಂದ, ಕಲಾಸೌರಭದ ಸಂಯೋಜನೆಯಲ್ಲಿ ಭಕ್ತಿ ಸಂಗೀತ ರಸಧಾರೆ ನಡೆಯಿತು.

ಶ್ರೀ ರಾಮಚಂದ್ರಾಪುರ ಮಠ ಮುಂಬಯಿ ವಲಯದ ಪ್ರಕಾಶ್‌ ಭಟ್‌, ಈಶ್ವರಿ ಭಟ್‌, ಉಷಾ ಭಟ್‌, ಮನೋರಂಜನಿ ರಮಣ ಭಟ್‌, ಬಾಲಕೃಷ್ಣ ಭಂಡಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಪ್ರಕಾಶ್ ಭಟ್ ಸ್ವಾಗತಿಸಿದರು. ದಯಾಸಾಗರ ಚೌಟ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಮಾಡಿದರು.

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

Comments are closed.