ಕರಾವಳಿ

ಪ್ರತಿಷ್ಠಿತ ಪಂಪ ಪ್ರಶಸ್ತಿ ಪುರಸ್ಕೃತ ನಾಡು ಕಂಡ ಶ್ರೇಷ್ಠ ಕವಿ ಕಯ್ಯಾರರ ಬದುಕು‌ ಅರ್ಥಪೂರ್ಣ : ಡಾ.ಸದನಾಂದ ಪೆರ್ಲ

Pinterest LinkedIn Tumblr

ಮಂಗಳೂರು : ಪ್ರತಿಷ್ಠಿತ ಪಂಪ ಪ್ರಶಸ್ತಿ ಪುರಸ್ಕೃತ ನಾಡುಕಂಡ ಶ್ರೇಷ್ಠ ಕವಿ, ಕರ್ನಾಟಕ‌ಏಕೀಕರಣ ಹೋರಾಟಗಾರ,ಗಾಂಧಿವಾದಿ, ನಾಡೋಜಕಯ್ಯಾರ ಕಿಂಞಣ್ಣ ರೈಯವರ ಬದುಕು ನಿಜಕ್ಕೂ‌ ಅರ್ಥಪೂರ್ಣವಾದದು. ಸಾಹಿತ್ಯ, ಸಮಾಜಸೇವೆ, ಶಿಕ್ಷಣ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನುತಾನು ತೊಡಗಿಸಿ ಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದ ದಿವಂಗತ ಕಯ್ಯಾರರ ಬದುಕು ನಿಜಕ್ಕೂ‌ ಅರ್ಥಪೂರ್ಣವಾದುದು ‌ಎಂದು ಮಂಗಳೂರು ಅಕಾಶವಾಣಿಯಕಾರ್ಯಕ್ರಮ ನಿರೂಪಕ ಡಾ. ಸದನಾಂದ ಪೆರ್ಲ ನುಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕುಘಟಕ ಮತ್ತು ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಗಾಂಧಿನಗರ‌ ಇದರ ಸಹಭಾಗಿತ್ವದಲ್ಲಿ ಗಾಂಧಿ ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ‌ ಏರ್ಪಡಿಸಲಾಗಿದ್ದ ಕಯ್ಯಾರರ ನೆನಪು ಕಾರ್ಯಕ್ರಮದಲ್ಲಿ‌ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ ಎಸ್. ಪ್ರದೀಪಕುಮಾರ ಕಲ್ಕೂರ ಉದ್ಘಾಟಿಸಿ ಮಾತಾನಾಡುತ್ತ, ಕಯ್ಯಾರರ ನೆನಪು ಸಮಾಜದಲ್ಲಿ ಸದಾಚೈತನ್ಯಪೂರ್ಣವಾಗಿದೆ. ಅವರ ಬದುಕು ಬರಹಜೀವನದ ನಡೆನುಡಿಗಳೆಲ್ಲವೂ ಅನುಕರುಣೀಯವಾಗಿತ್ತು‌ಎಂದರು.

ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲೆ ಡಾ. ರೇಣುಕ ಕೆ. ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಕರೆ ಸ್ಪಾಂಡೆಂಟ್‌ ಜಯವಿಕ್ರಮ್, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಕ್ಷಮಾ ಎಂ., ಕಯ್ಯಾರರ ಪುತ್ರ ಡಾ. ಪ್ರಸನ್ನ ರೈ ಉಪಸ್ಥಿತರಿದ್ದರು.

ಇದೇ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ‌ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಬಿ. ಶೆಟ್ಟಿ ಸ್ವಾಗತಿಸಿದರಲ್ಲದೆ ಕಾಲೇಜಿನ ಕನ್ನಡ ಸಂಘವನ್ನು ಉದ್ಘಾಟಿಸಿದರು.

ಶ್ರೀಮತಿ ರತ್ನಾವತಿಜೆ. ಬೈಕಾಡಿ ಕಯ್ಯಾರರ ಹಾಡುಗಳನ್ನು ಹಾಡಿದರು. ಕ.ಸಾ.ಪ ಮಂಗಳೂರು ತಾಲೂಕು ಘಟಕದ ಗೌರವ ಕೋಶಾಧಿಕಾರಿ ಕೃಷ್ಣಮೂರ್ತಿ ಪಿ. ವಂದಿಸಿದರು. ಪ್ರಾಧ್ಯಾಪಕ ಡಾ. ದಿನಕರ‌ ಎಸ್. ಪಚ್ಚನಾಡಿ ಕಾರ್ಯಕ್ರಮ ನಿರೂಪಿಸಿದರು.

Comments are closed.