ಕರಾವಳಿ

ಬಿಕ್ಕಳಿಕೆ ಹೇಗೆ ಬರುತ್ತೆ….. ಯಾವೆಲ್ಲಾ ಕಾರಣಕ್ಕೆ ಬರುತ್ತೆ ಗೋತ್ತೆ..?

Pinterest LinkedIn Tumblr

ನಮಗೆ ಬಿಕ್ಕಳಿಗೆ ಬಂದಾಗಲೆಲ್ಲ ಯಾರೋ ನಿನ್ನ ನೆನಪು ಮಾಡಿಕೊಳ್ತಿದ್ದಾರೆ ಅಂತಾ ಅಮ್ಮ ಅಜ್ಜಿ ಹೇಳಿದ್ದನ್ನ ಹಾಗೂ ಹಲವಾರು ಹೇಳಿದ್ದನ್ನ ಕೇಳಿರುತ್ತೇವೆ, ನಾವು ಈಗಲೂ ಅದನ್ನೇ ಪಾಲಿಸುತ್ತ ಇದ್ದೇವೆ, ಆದರೆ ಅಸಲಿಗೆ ಕಾರಣವೆ ಬೇರೆ ಇದೆ ಎಂಬುದು ಹಲವರಿಗೆ ತಿಳಿದಿಲ್ಲ, ಬಿಕ್ಕಳಿಕೆ ಬಂದರೆ ಸಾಕು ಯಾರೋ ನೆನೆಸಿಕೊಳ್ಳುತ್ತಾ ಇದ್ದಾರೆ, ಇಲ್ಲವೇ ಯಾರೋ ಬೈಕೊಳ್ಳುತ್ತ ಇದ್ದಾರೆ ಎಂದುಕೊಳ್ಳುತೇವೆ, ಇದು ನಮ್ಮ ಹಿರಿಯರು ಮಾಡಿರುವ ಕಾರಣ, ಆದರೆ ಇದಕ್ಕೆ ವೈಜ್ಞಾನಿಕವಾಗಿ ಕಾರಣ ಬೇರೇನೇ ಇದೆ.

ಸ್ನಾಯು ಹೊಟ್ಟೆಯಿಂದ ಎದೆಯ ಗೂಡನ್ನೂ ಬೇರ್ಪಡಿಸಿದಾಗ ಅದಕ್ಕೆ ಒಂದು ರೀತಿಯಾ ತೊಂದರೆ ಉಂಟಾದಾಗ ಈ ರೀತಿ ಶಬ್ಧ ಮಾಡುತ್ತದೆ. ಕೇವಲ ಇದೊಂದೇ ಕಾರಣವಲ್ಲ, ಅತ್ಯಂತ ವೇಗವಾಗಿ ಏನನ್ನಾದ್ರೂ ತಿಂದ್ರೆ, ಕುಡಿದ್ರೆ, ಅತಿಯಾದ ಆಸಕ್ತಿ ಅಥವಾ ಥ್ರಿಲ್ ಇದ್ರೆ, ಹೊಟ್ಟೆಯಲ್ಲಿ ಒಂದು ರೀತಿಯ ಕಿರಿಕಿರಿ ಇದ್ದರೆ ಬಿಕ್ಕಳಿಕೆ ಬರುತ್ತದೆ. ಪಾರ್ಶ್ವಶೂಲೆ, ನ್ಯುಮೋನಿಯಾ, ಹೊಟ್ಟೆ ಅಥವಾ ಅನ್ನನಾಳ ಸಮಸ್ಯೆ, ಮದ್ಯಪಾನ ಮತ್ತು ಹೆಪಟೈಟಿಸ್ ನಂತಹ ಅಸ್ವಸ್ಥತೆಯಿಂದಲೂ ಬಿಕ್ಕಳಿಕೆ ಬರುವ ಸಾಧ್ಯತೆ ಇರುತ್ತದೆ.

ದೊಡ್ಡ ಪ್ರಮಾಣದ ಆಹಾರವನ್ನು ಒಂದೆ ಸಲ ನುಂಗಲು ಪ್ರಯತ್ನಿಸಿದಾಗ, ಅಥವಾ ಅತಿಯಾಗಿ ತಿನ್ನುತ್ತಿರುವಾಗ ಅದು ನಮ್ಮ ನ್ಯೂಮೋಗ್ಯಾಸ್ಟ್ರಿಕ್ ನರವನ್ನು ಕಿರಿಕಿರಿಗೊಳಿಸುತ್ತದೆ.ಇದರಿಂದಾಗಿ ಬಿಕ್ಕಳಿಕೆ ಬರುತ್ತದೆ.ಕೆಲವೊಮ್ಮೆ ಅವಸರದಲ್ಲಿ ತಿನ್ನುತ್ತ ಬಿಕ್ಕಳಿಕೆ ಬಂದಾಗ ತಿಂದಿದ್ದು ನೆತ್ತಿಗೇರಿತು,ನೀರು ಕುಡಿ ಎಂದು ನಮ್ಮ ಮನೆಯ ಹಿರಿಯರು ಹೇಳಿದ್ದು ನೆನಪು ಇದೆ ತಾನೆ ? ಆದುದರಿಂದ ಎಷ್ಟೆ ಅವಸರದಲ್ಲಿದ್ದರು ನಿಧಾನವಾಗಿ ತಿನ್ನಿ ಇದರಿಂದ ದೀರ್ಘ ಸಮ್ಯದವರೆಗೆ ಬರುವ ಬಿಕ್ಕಳಿಕೆಯ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದು.ಇದ್ದಲ್ಲದೆ ತೀವ್ರವಾದ ಭಾವನೆಗಳಾದ ಭಯ, ಆತಂಕ, ಉತ್ಸಾಹವಿದ್ದಾಗಲೂ ಬಿಕ್ಕಳಿಕೆ ಬರುತ್ತದೆ.ಮೆದುಳಿನ ಮೇಲೆ ಪೆಟ್ಟು ಬಿದ್ದಾಗ,ಜಠರ ಬೇರೆ ಅಂಗಾಂಗಕ್ಕೆ ರಭಸವಾಗಿ ತಾಗಿದಾಗ,ಹೊಟ್ಟೆಯೊಳಗೆ ಗಾಳಿ ಶೇಖರಣೆಯಾದಗಲೂ ಬಿಕ್ಕಳಿಕೆ ಬರುತ್ತದೆ.

ಈ ಬಿಕ್ಕಳಿಕೆಯನ್ನು ಕಡಿಮೆ ಮಾಡುವ ಉಪಾಯ ಇಲ್ಲಿದೆ ನೋಡಿ. ಬಿಕ್ಕಳಿಕೆ ಬಂದಾಕ್ಷಣ ಗಾಬರಿಯಾಗುವ ಅಗತ್ಯವಿಲ್ಲ. ಒಂದು ಚಮಚ ಸಕ್ಕರೆ ಅಥವಾ ಜೇನುತುಪ್ಪ ತಿಂದು ನೀರು ಕುಡಿಯಿರಿ. ಇದರಿಂದ ನರಗಳ ಒತ್ತಡ ಕಡಿಮೆಯಾಗಿ ಸಡಿಲಗೊಳ್ಳುತ್ತವೆ.

Comments are closed.