ಕರಾವಳಿ

ಮಂಗಳೂರು ಮಹಾನಗರ ಪಾಲಿಕೆಗೆ “ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ”

Pinterest LinkedIn Tumblr

ಮಂಗಳೂರು : ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2017- 18ನೇ ಸಾಲಿನ ‘ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ- 2018’ ಮಂಗಳೂರು ಮಹಾನಗರ ಪಾಲಿಕೆಗೆ ಲಭಿಸಿದೆ ಎಂದು ಮಂಗಳೂರು ಮೇಯರ್‌ ಭಾಸ್ಕರ್‌ ಕೆ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 3-10 ಲಕ್ಷ ಜನ ಸಂಖ್ಯೆಯಡಿಯಲ್ಲಿ ‘ಘನತಾಜ್ಯ ನಿರ್ವಹಣೆಯಲ್ಲಿ- ಉತ್ತಮ ನಗರವೆಂದು’ ಪ್ರಶಸ್ತಿ ಪಡೆದಿದೆ. ಪಾಲಿಕೆಗೆ ಪ್ರಶಸ್ತಿ ಸಿಗಲು ಸಾರ್ವಜನಿಕರು, ಪೌರಕಾರ್ಮಿಕರು, ಆ್ಯಂಟನಿ ವೇಸ್ಟ್‌ ಸಂಸ್ಥೆ, ಪಾಲಿಕೆ ಸಿಬಂದಿ, ಪಾಲಿಕೆ ಸದಸ್ಯರು ಕಾರಣ ಎಂದು ಹೇಳಿದ್ದಾರೆ.

ಇದೇ ವೇಳೆ ಮೇಯರ್ ಪ್ರಶಸ್ತಿ ಜೊತೆ ಫೋಟೋ ತೆಗೆಸಿಕೊಂಡರು. ಈ ವೇಳೆ ಉಪಮೇಯರ್‌ ಮಹಮ್ಮದ್‌ ಮರಕಡ, ಸಚೇತಕ ಶಶಿಧರ ಹೆಗ್ಡೆ, ಸದಸ್ಯರಾದ ನವೀನ್‌ ಡಿ’ಸೋಜಾ, ಪ್ರವೀಣ್‌ಚಂದ್ರ ಆಳ್ವ, ಲತಾ ಸಾಲ್ಯಾನ್‌, ಪಾಲಿಕೆ ಕಮಿಷನರ್‌ ಮಹಮ್ಮದ್‌ ನಝೀರ್‌, ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ, ಪರಿಸರ ಅಧಿಕಾರಿಗಳಾದ ಮಧು, ದೀಪ್ತಿ ಉಪಸ್ಥಿತರಿದ್ದರು.

Comments are closed.