ಕರಾವಳಿ

ಚಂಡು ಹೂ ಅಲಂಕಾರಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಸೈ

Pinterest LinkedIn Tumblr

ಮೆಕ್ಸಿಕನ್ ಮೂಲದ ಈ ಮೂಲಿಕೆಯ ಆಗಮನ ಭಾರತಕ್ಕೆ ಎಂದಾಯಿತೆಂದು ಖಚಿತವಾಗಿ ಹೇಳಲಾಗದಿದ್ದರೂ ಪ್ರೊ. ಬಿ.ಜಿ.ಎಲ್.ಸ್ವಾಮಿಯವರು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ಬಂದಂತೆ ತೋರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಈ ಗಿಡವು ಪೊದೆಯಂತೆ ಬೆಳೆಯುತ್ತದೆ. ಸರಳವಾದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಎಲೆಗಳಿಗೆ ವಾಸನೆಯಿರುತ್ತದೆ. ಸರಳವಾದ ಎಲೆಗಳು ಸೀಳುವುದರಿಂದ ಸಂಯುಕ್ತ ಎಲೆಯಂತೆ ಕಾಣುತ್ತದೆ. ಎಲೆಯ ಸೀಳುಗಳ ಉದ್ದ 1-5 ಸೆ.ಮೀ. ಇರುತ್ತದೆ. ಹಳದಿ ಅಥವಾ ಕಿತ್ತಳೆ ಬಣ್ಣದ ಹೂಗಳು ಚೆಂಡು ಪುಷ್ಪಮಂಜರಿಯಲ್ಲಿ ಒತ್ತಗಿ ಜೋಡಣೆಯಾಗಿರುತ್ತವೆ. ಚೆಂಡು ಪುಷ್ಪಮಂಜರಿ ಅಗಲ ಸಾಧಾರಣವಾಗಿ 5-1 ಸೆ.ಮೀ. ಇರುತ್ತದೆ.

ನಾವು ವಿಶೇಷ ಸಂದರ್ಭಗಳಲ್ಲಿ, ಹಬ್ಬ ಹರಿ ದಿನಗಳಲ್ಲಿ, ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಅಲಂಕಾರಕ್ಕೆ ಬಳಸುವುದು ಚಂಡು ಹೂ. ಈ ಹೂವಿನಿಂದ ಅಲಂಕಾರ ಮಾಡಿದರೆ ಮೆರಗು ಹೆಚ್ಚುತ್ತದೆ. ಆದರೆ ಈ ಚಂಡು ಹೂ ಅಲಂಕಾರಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಸಹ ಉತ್ತಮವಾಗಿ ಬಳಕೆಯಾಗುತ್ತದೆ. ಇದರಿಂದಾಗುವ ಆರೋಗ್ಯಕರ ಲಾಭಗಳು ಇಲ್ಲಿವೆ ನೋಡಿ.

ಹಲವು ಬಾಷೆಗಳಲ್ಲಿ ಇದರ ಹೆಸರು ಈ ರೀತಿ ಇವೆ
ಸಂಸ್ಕೃತ.-ಸ್ಥೂಲಪುಷ್ಪ, ಜಂಡುಗ, ಗಂದುಗ,
ಹಿಂದಿ.-ಗೆಂಡೆ, ಗಿಟ್ಟೇರ,
ತಮಿಳು.-ತುರುಕ್ಕಸಮಂಡಿ,
ತೆಲುಗು.-ಬಂಟಿ, ಬಂಟಿಚೆಟ್ಟು.
ಇಂಗ್ಲಿಷ್.-ಆಫ್ರಿಕನ್ ಮೆರ್ರೆಗೋಲ್ಡ್.

* ಚಂಡು ಹೂವಿನ ಪಾಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು, ಹಾಗೂ ಮೊಡವೆಯಿಂದಾದ ಕಲೆಗಳು ಮಾಯವಾಗುತ್ತವೆ. ಮತ್ತು ಸನ್ ಬರ್ನ್ ಕೂಡ ಕಡಿಮೆಯಾಗುತ್ತದೆ.
* ಚಂಡು ಹೂವನ್ನ ಒಣಗಿಸಿ ಅದರ ಪುಡಿಯ ಸಹಾಯದಿಂದ ಚಹವನ್ನ ಮಾಡಿ ಕುಡಿದರೆ ಮಹಿಳೆಯರಿಗೆ ಆ ದಿನದಲ್ಲಿ ಕಾಡುವ ಹೊಟ್ಟೆ ನೋವು, ಸ್ನಾಯುಗಳ ಸೆಳೆತ ಇವೆಲ್ಲವೂ ಕಡಿಮೆಯಾಗುತ್ತವೆ.
* ಚಂಡು ಹೂವನ್ನ ನೀರಿನಲ್ಲಿ ಹಾಕಿ ನೆನೆಸಿ 2-3 ಗಂಟೆಗಳ ಬಳಿಕ ಆ ನೀರನ್ನ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಗಳು ಮಾಯವಾಗುತ್ತವೆ.
* ಚಂಡು ಹೂವಿನ ಎಣ್ಣೆ ಹಾಗೂ ಹೂವಿನ ರಸ ಬೆರೆಸಿ ಗಾಯಗಳ ಮೇಲೆ ಹಚ್ಚಿದರೆ ಗಯಾ ಬೇಗ ವಾಸಿಯಾಗುತ್ತದೆ.
* ಚಂಡು ಹೂವಿನ ಟಿಂಚರ್ ಬಳಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
* ಹೂದಳದ ರಸ ಕುಡಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.

ಹೂದಳಗಳ ರಸ, ಕಬ್ಬಿಣದ ಅದಿರು ಮತ್ತು ಎಳ್ಳೆಣ್ಣೆ ಸೆರಿಸಿ ಕಬ್ಬಿಣದ ಪಾತ್ರೆಯಲ್ಲಿಟ್ಟು ಬಾಯಿ ಸೀಲು ಮಾಡಿ ಭೂಮಿಯಲ್ಲಿ ಒಂದು ತಿಂಗಳು ಕಾಲ ಹುಗಿದಿಟ್ಟು ನಂತರ ತೆಗೆದು ಈ ಮಿಶ್ರಣವನ್ನು ಚೆನ್ನಾಗಿ ಅರೆದು ಸೋಸಿ ಬಿಸಿಲಿನಲ್ಲಿಟ್ಟು ನೀರನ್ನು ಹಿಂಗಿಸಿ ಬರಿತೈಲವನ್ನು ಉಳಿಸಿಕೊಂಡು ಬಟಲ್ನಲ್ಲಿ ಸಂಗ್ರಹಿಸಿಟ್ಟುಕೊಂಡು ಕೂದಲಿಗೆ ಹಚ್ಚುವುದು ಕೂದಲಿಗೆ ವರ್ಣವುಂಟಾಗುತ್ತದೆ.
ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬೆಳೆಸುವ ಈ ಹೂವನ್ನು ಹಾರಕ್ಕಾಗಿ, ವೇದಿಕೆ ಅಲಂಕರಣ, ಬಣ್ಣ ತಯಾರಿಕೆ ಮತ್ತಿತರ ಉದ್ದೇಶಗಳಿಗೆ ಕೂಡ ಬಳಸುತ್ತಾರೆ.

Comments are closed.