ಕರಾವಳಿ

ಹುಲ್ಲು ತರಲು ತೆರಳಿ ನಾಪತ್ತೆಯಾಗಿದ್ದ ಮಹಿಳೆ ಶವ ಹೊಳೆ ದಡದಲ್ಲಿ ಪತ್ತೆ

Pinterest LinkedIn Tumblr

ಕುಂದಾಪುರ: ಕಳೆದೆರಡು ದಿನಗಳ ಹಿಂದೆ ಮನೆಯ ದನಕ್ಕೆ ಹುಲ್ಲು ತರಲು ತೆರಳಿ ಬಳಿಕ ವಾಪಾಸ್ಸಾಗದೇ ನಾಪತ್ತೆಯಾಗಿದ್ದ ಮಹಿಳೆಯ ಶವ ಹೊಳೆ ಸಮೀಪ ಪತ್ತೆಯಾಗಿದ್ದು ನೀರಿಗೆ ಬಿದ್ದು ಮೃತಪಟ್ಟಿದ್ದಾರೆಂದು ಅಂದಾಜಿಸಲಾಗಿದೆ.

ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಕಂಬಳಗದ್ದೆ ನಿವಾಸಿ ಸಾಕು ಮರಕಾಲ್ತಿ (57) ಮೃತ ದುರ್ದೈವಿ.

ಸಾಕು ಅವರು ಜೂ.27ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ ಮನೆಯ ದನ ಕರುಗಳಿಗೆ ಹಸಿ ಹುಲ್ಲು ತರಲು ಗದ್ದೆಗೆ ಹೋಗಿದ್ದು ಸಂಜೆ ತನಕ ವಾಪಾಸು ಮನೆಗೆ ಬಾರದಿದ್ದಾಗ ಪುತ್ರ ಮಹೇಶ್ ಹಾಗೂ ಕುಟುಂಬಿಕರು ಮನೆ ಸಮೀಪದ ಗದ್ದೆಯ ಬಳಿ ಹುಡುಕಾಡಿದಾಗ ಗದ್ದೆಯ ಪಕ್ಕದ ಹೊಳೆ ಸಾಲಿನ ದಡದ ಮೇಲೆ ಸಾಕು ಮರಕಾಲ್ತಿಯವರು ಹುಲ್ಲು ತರಲು ತೆಗೆದುಕೊಂಡು ಹೋಗಿದ್ದ ಬುಟ್ಟಿ ಬಿದ್ದಿದ್ದು ಹೊಳೆ ಬದಿ ಹಾಗೂ ಗದ್ದೆಯ ಬದಿಗಳಲ್ಲಿ ಹುಡುಕಾಡಿದ್ದು ಅವರ ಸುಳಿವು ಸಿಕ್ಕಿರಲಿಲ್ಲ.

ಮಾರನೇ ದಿನ ಅಂದರೇ ಜೂ.28ರಂದು ಗುರುವಾರ ಬೆಳಿಗ್ಗೆಯಿಂದ ಹೊಳೆಯ ಸಾಲಿನಲ್ಲಿ ಹಾಗೂ ನೀರು ತುಂಬಿದ ಗದ್ದೆಗಳಲ್ಲಿ ಹುಡುಕಾಡಿದ್ದು ಮಣೂರು ಗ್ರಾಮದ ಉಪ್ಪು ನೀರು ಜೆಡ್ಡು ಎಂಬಲ್ಲಿಯ ಹೊಳೆಯಲ್ಲಿ ಸಾಕು ಮರಕಾಲ್ತಿಯವರ ಮೃತ ದೇಹ ಹೊಳೆಯ ಬದಿಯ ಗಿಡಕ್ಕೆ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸಾಕು ಮರಕಾಲ್ತಿಯವರು ಗದ್ದೆಗೆ ಹುಲ್ಲು ತರಲು ಹೋದವರು ಹೊಳೆಯ ದಡದಲ್ಲಿ ನೆರೆ ಪ್ರವಾಹದಿಂದ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದು ಅದರಿಂದಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆನ್ನಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.