ಕರಾವಳಿ

ನಿದ್ರಾ ಪಾರ್ಶ್ವವಾಯು ಬಗ್ಗೆ ನಿಮಗೆ ಗೋತ್ತೆ…ಇದರ ಲಕ್ಷಣಗಳ ಬಗ್ಗೆ ತಿಳಿಯಿರಿ…!

Pinterest LinkedIn Tumblr

ಸಾಮಾನ್ಯವಾಗಿ ಮಲಗಿದ್ದಾಗ ಕೆಲವೊಮ್ಮೆ ಎಚ್ಚರವಾಗಿ ಕೈ ಕಾಲುಗಳು ಅಲುಗಾಡದ ಹಾಗೆ ಯಾರೋ ನಮ್ಮನ್ನು ಎಳೆಯುತ್ತಿರುವ ಹಾಗೆ ಅನುಭವವಾಗಿದ್ದರೆ. ಇದಕ್ಕೆನಿದ್ರಾ ಪಾರ್ಶ್ವವಾಯು (sleep paralysis) ಕರೀತಾರೆ ಅದರ ಮಾಹಿತಿ ತಿಳಿದುಕೊಳ್ಳಿ

ಸಾಮಾನ್ಯವಾಗಿ ವ್ಯಕ್ತಿಯು ನಿದ್ದೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ವ್ಯಕ್ತಿ ಇದ್ದಕ್ಕಿದ್ದಂತೆ ಎಚ್ಚರಗೊಂಡು ನಂತರದಲ್ಲಿ ದೇಹದಲ್ಲಿ ಯಾವುದೇ ಚಲನೆ ಮಾಡಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿಯೇ ನಿದ್ರಾ ಪಾರ್ಶ್ವವಾಯು (sleep paralysis) .ಜಗತ್ತಿನ ಶೇ 7% ರಷ್ಟು ಜನರು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದ ವಿಚಾರ.ಈ ಸಮಸ್ಯೆ ಹದಿಹರಿಯದ ವಯಸ್ಸಿನವರಲ್ಲೆ ಹೆಚ್ಚಾಗಿ ಕಾಣಿಸಿಕೊಳ್ಳುವುದು ಗಮನಿಸಬೇಕಾದ ವಿಚಾರ.

ಲಕ್ಷಣಗಳು:
1.ಇಂತಹ ಸಂದರ್ಭದಲ್ಲಿ ವ್ಯಕ್ತಿಯು ಎಷ್ಟೇ ಪ್ರಯತ್ನಿಸಿದರೂ ದೇಹದ ಯಾವುದೇ ಭಾಗವನ್ನು ಅಲುಗಡಿಸಲು ಸಾಧ್ಯವಾಗದೇ ದೇಹ ಮರಗಟ್ಟಿದ್ದ ಅನುಭವವಾಗುತ್ತದೆ.

2 ದೇಹದ ಎದೆಯ ಭಾಗದ ಮೇಲೆ ಏನೊ ಭಾರವಾದಂತದ್ದು ಇರುವಂತಹ ಅನುಭವವಾಗುತ್ತದೆ ಎಂದು ಕೆಲವರು ತಿಳಿಸಿದ್ದಾರೆ

3.ವ್ಯಕ್ತಿ ಉಸಿರಾಡಲು ಸಹ ತೀರ ಕಷ್ಟ ಪಡುವಂತಹ ಪರಿಸ್ಥಿತಿ ಎದುರಿಸಬಹುದು.

4.ಭಯ ಉಂಟುಮಾಡುವಂತಹ ಸನ್ನಿವೇಶಗಳು (ದೆವ್ವ ಭೂತ) ಕಣ್ಣ ಮುಂದೆ ಹಾದುಹೋಗುವ ಅನುಭವ

5.ವಿಚಿತ್ರ ಶಬ್ದಗಳು ಕೇಳಿಸಿದಂತೆ ಕಿವಿಯ ಪಕ್ಕದಲ್ಲಿ ಯಾರೋ ಕುಳಿತು ಏನೊ ಹೇಳುತ್ತಿರುವಂತೆಯು ಆಗುತ್ತದೆ

ಕಾರಣಗಳು:
ಈ ಒಂದು ಸಮಸ್ಯೆ ವ್ಯಕ್ತಿ ದೀರ್ಘವಾದ (ಆಳವಾದ) ನಿದ್ದೆಯಲ್ಲಿ ಇದ್ದಂತಹ ಪರಿಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತದೆ ಇದು non randomized eye moment(non REM) ನಿದ್ರಾವಸ್ಥೆಯಲ್ಲಿ ಕಾಣಿಸಿಕೊಳ್ಳುವಂತದ್ದು ಇಂತಹ ಸಂದರ್ಭದಲ್ಲಿ ವ್ಯಕ್ತಿಯು ದೀರ್ಘ ನಿದ್ದೆಯಲ್ಲಿ ಇದ್ದು ಕಣ್ಣಿನ ಗುಡ್ಡೆಯಲ್ಲಿ ಯಾವುದೇ ಚಲನೆ ಕಂಡುಬರದೇ ಇರುವ ಕಾರಣ ಮೆದುಳು ದೇಹಕ್ಕೆ ನೀಡಬೇಕಾದ ಯಾವುದೇ ಸೂಚನೆಯನ್ನು ನೀಡುವುದಿಲ್ಲ ಇದೇ ಕಾರಣಕ್ಕೆ ದೇಹ ಅಂತಹ ಪರಿಸ್ಥಿತಿಯಲ್ಲಿ ಮರಗಟ್ಟಿ ಹೋದಂತೆ ಭಾಸವಾಗುತ್ತದೆ.

ಪರಿಹಾರೋಪಾಯಗಳು:
ಈ ಸಮಸ್ಯೆಯು ಕೆಲವು ನಿಮಿಷಗಳ ವರೆಗೆ ಮಾತ್ರ ಕಾಣಿಸಿಕೊಳ್ಳುವುದರಿಂದ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ ಆದರೂ ಕೆಲವೊಬ್ಬರಲ್ಲಿ ಇದು ನಿರಂತರವಾಗಿ ಕಾಣಿಸಿಕೊಳ್ಳುವುದರಿಂದ ಕೆಲವೊಂದು ಚಿಕಿತ್ಸಾ ವಿಧಾನಗಳನ್ನು ಬಳಸಬಹುದು ಅವುಗಳೆಂದರೆ
1. ನಿದ್ರಾವಿಧಾನದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಿಕೆ- ವ್ಯಕ್ತಿಯು ದಿನನಿತ್ಯವು ಒಂದೆ ರೀತಿಯಾದ ಮಲಗುವ ಮತ್ತು ಏಳುವ ಸಮಯವನ್ನು ರೂಢಿಸಿಕೊಳ್ಳುವುದರಿಂದ ದೇಹಕ್ಕೆ ಅವಶ್ಯಕವಾದ ನಿದ್ದೆ ಸಿಗುವುದರಿಂದ ಇಂತಹ ಸಮಸ್ಯೆಗಳಿಂದ ಹೊರಬರಬಹುದು
2.ಖಿನ್ನತೆ ಮತ್ತು ಆತಂಕ ಕಾಯಿಲೆಗಳು ಸಹ ಈ ಸಮಸ್ಯೆಗೆ ಕಾರಣವಾಗುವುದರಿಂದ ಇವುಗಳಿಗೆ ಸೂಕ್ತ ಚಿಕಿತ್ಸೆ ಅಗತ್ಯ.
3.ಮಾನಸಿಕ ಒತ್ತಡದಂತಹ ಸಮಸ್ಯೆಯು ಸಹ ಈ ಕಾಯಿಲೆಗೆ ಮೂಲ ಕಾರಣ ಎನ್ನಬಹುದಾದದ್ದರಿಂದ ಯೋಗ ಧ್ಯಾನ ಮುಂತಾದವುಗಳನ್ನು ರೂಢಿ ಮಾಡಿಕೊಳ್ಳುವುದರಿಂದ ದೇಹಕ್ಕೆ ಆರಾಮದಾಯಕ ಏನಿಸುವುದರ ಜೊತೆಗೆ ಒತ್ತಡ ಮನಸ್ಥಿತಿಯಿಂದ ಹೊರಬರಲು ಸಹಕಾರಿಯಾಗುತ್ತದೆ
4. ಇದು ಕೆಲವು ನಿಮಿಷ ಮಾತ್ರ ಕಾಡುವ ಸಮಸ್ಯೆಯಾಗಿರುವುದರಿಂದ ಆತಂಹ ಸಮಯದಲ್ಲಿ ಹೆಚ್ಚು ಆತಂಕಕ್ಕೆ ಒಳಗಾಗದೆ ಶಾಂತ ರೀತಿಯಲ್ಲಿ ಮನಸ್ಸನ್ನು ಹತೋಟಿಗೆ ತಂದುಕೊಳ್ಳುವುದರ ಮೂಲಕ ಆರಾಮದಾಯಕವಾಗಿ ಉಸಿರಾಡುವುದು ಅಗತ್ಯ ಇದರಿಂದ ವ್ಯಕ್ತಿ ಇಂತಹ ಸಂದರ್ಭದಲ್ಲಿ ಆಘಾತಕ್ಕೆ ಒಳಗಾಗುವ ಸಂಭವವಿರುವುದರಿಂದ ಉತ್ತಮ ರೀತಿಯಲ್ಲಿ ಪರಿಸ್ಥಿತಿಯನ್ನ ನಿಭಾಯಿಸುವುದು ಅಗತ್ಯ.
5. ಉತ್ತಮ ನಿದ್ದೆಯೇ ಇದಕ್ಕೆ ಅತ್ಯುತ್ತಮ ಪರಿಹಾರವಾಗಿರುವುದರಿಂದ ಮಲಗುವ ಕೋಣೆಯ ವಾತಾವರಣ ಕೂಡ ಇದರ ಮೇಲೆ ಪ್ರಭಾವ ಬೀರುವುದರಿಂದ ಮಲಗುವ ಕೋಣೆಯು ಹೆಚ್ಚು ಪ್ರಾಶಾಂತವಾಗಿರುಂತೆ ಮತ್ತು ಶುದ್ದವಾಗಿರುವಂತೆ ನೋಡಿಕೊಳ್ಳವುದು ಉತ್ತಮ…

Comments are closed.