ಕರಾವಳಿ

“ಅಮ್ಮೆರ್ ಪೊಲೀಸ್” ತುಳು ಚಿತ್ರ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ ; ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು, ಜೂನ್ 22: ಲಕುಮಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ರಾಜೇಶ್.ಬಿ.ಶೆಟ್ಟಿ ನಿರ್ಮಾಣದ, ಕೆ.ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಭಾರಿ ನಿರೀಕ್ಷೆ ಹುಟ್ಟಿಸಿದ “ಅಮ್ಮೆರ್ ಪೊಲೀಸ್” ತುಳು ಚಿತ್ರ ಶುಕ್ರವಾರದಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಗೊಂಡಿದೆ.

ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ನಗರದ ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವನೆಗೊಳಿಸುವ ಮೂಲಕ “ಅಮ್ಮೆರ್ ಪೊಲೀಸ್” ತುಳು ಚಿತ್ರಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಲಕುಮಿ ಕ್ರಿಯೇಷನ್ಸ್‌ನ ಲ.ಕಿಶೋರ್‍ ಡಿ.ಶೆಟ್ಟಿ, ಶ್ರೀ ಕಟೀಲು ಮೇಳದ ಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಲ, ತುಳು ಚಿತ್ರ ನಿರ್ಮಾಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, ನಿರ್ಮಾಪಕರಾದ ಚಂದ್ರಹಾಸ್, ಪ್ರಕಾಶ್ ಪಾಂಡೇಶ್ವರ್, ಪ್ರಮುಖರಾದ ತಾರಾನಾಥ್ ಶೆಟ್ಟಿ ಬೋಳಾರ್, ಮೋಹನ್ ಕೊಪ್ಪಳ, ನವನೀತ್ ಶೆಟ್ಟಿ ಕದ್ರಿ, ಲೀಲಾಧರ್ ಶೆಟ್ಟಿ, ನಾಯಕ ನಟ ರೂಪೇಶ್ ಶೆಟ್ಟಿ, ನಾಯಕಿ ನಟಿ ಪೂಜಾ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ ಹಾಗೂ ಮತ್ತಿತ್ತರರು ಅಥಿತಿಗಳಾಗಿದ್ದರು.

ಅವಳಿ ಜಿಲ್ಲೆಯ 14 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಚಿತ್ರ ಬಿಡುಗಡೆ:

“ಅಮ್ಮೆರ್ ಪೊಲೀಸ್” ಸಿನಿಮಾವು ಮಂಗಳೂರಿನ ಜ್ಯೋತಿ, ಪಿವಿಆರ್, ಸಿನಿಪೊಲೀಸ್, ಬಿಗ್ ಸಿನಿಮಾಸ್, ಸುರತ್ಕಲ್‌ನ ನಟರಾಜ್, ಮೂಡಬಿದಿರೆಯ ಅಮರಶ್ರೀ, ಕಾರ್ಕಳದ ರಾಧಿಕ ಹಾಗೂ,ಪ್ಲಾನೆಟ್, ಪುತ್ತೂರಿನ ಅರುಣಾ, ಬೆಳ್ತಂಗಡಿಯ ಭಾರತ್, ಸುಳ್ಯದ ಸಂತೋಷ್ ಒಟ್ಟು 14 ಚಿತ್ರಮಂದಿರಗಳಲ್ಲಿ ಇಂದು ತೆರೆ ಕಂಡಿದೆ.

ಸಿನಿಮಾಕ್ಕೆ ಇರಾ, ಮುಡಿಪು, ಪ್ರದೇಶದಲ್ಲಿ ಒಂದೇ ಹಂತದಲ್ಲಿ 24 ದಿನಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸುಮಾರು 150 ಮಂದಿ ಈ ಚಿತ್ರದಲ್ಲಿ ನಟಿಸಿರುವುದು ಈ ಚಿತ್ರದ ವಿಶೇಷತೆಯಾಗಿದೆ.ಸಂಪೂರ್ಣ ಹಾಸ್ಯ ಮನರಂಜನೆಯನ್ನು ಒಳಗೊಂಡ ಈ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶವೂ ಇದೆ.

ತಾರಾಗಣದಲ್ಲಿ ರೂಪೇಶ್ ಶೆಟ್ಟಿ, ಪೂಜಾ ಶೆಟ್ಟಿ, ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಮೈಮ್ ರಾಮ್‍‌ದಾಸ್, ಪ್ರಜ್ವಲ್ ಪ್ರಕಾಶ್, ನಿತೇಶ್ ಶೆಟ್ಟಿ ಎಕ್ಕಾರ್, ಸತೀಶ್ ಬಂದಲೆ, ದೀಪಕ್ ರೈ ಪಣಾಜೆ, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸೂರಜ್ ಶೆಟ್ಟಿ, ರವಿರಾಮ ಕುಂಜ, ಅನಿಲ್, ಆಶೋಕ್ ಬೇಕೂರ್, ರಾಜೇಶ್ ಬಂದ್ಯೋಡ್, ಸರಿತಾ ಶೆಟ್ಟಿ, ಸೀಮಾ ಮೊದಲಾದವರು ಇದ್ದಾರೆ.

ಸೂರಜ್ ಶೆಟ್ಟಿ ನಿರ್ದೇಶನದ ಮೂರನೇ ಚಿತ್ರ :

ಸಿನಿಮಾಕ್ಕೆ ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ, ಸಾಹಸ, ನೃತ್ಯ, ಸಂಯೋಜನೆಯ ಜೊತೆಗೆ ಸಿನಿಮಾವನ್ನು ನಿರ್ದೇಶನ ಮಾಡಿದವರು ಕೆ.ಸೂರಜ್ ಶೆಟ್ಟಿ. ಎಕ್ಕಸಕ, ಪಿಲಿಬೈಲ್ ಯಮುನಕ್ಕ ದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಕೆ.ಸೂರಜ್ ಶೆಟ್ಟಿ, ಲಕುಮಿ ಬ್ಯಾನರ್ ನಲ್ಲಿ ನಿರ್ದೇಶಿಸಿದ ಮೂರನೇ ಸಿನಿಮಾ ಇದಾಗಿದೆ.

ಸಿನಿಮಾಕ್ಕೆ ಸಚಿನ್.ಎಸ್.ಶೆಟ್ಟಿ ಅವರ ಛಾಯಾಗ್ರಹಣವಿದೆ. ಸಂದೀಪ್ ಆರ್ ಬಳ್ಳಾಲ್ ಸಂಗೀತ ನೀಡಿದ್ದಾರೆ. ಮನು ಶೇರಿಗಾರ್ ಅವರು ಸಂಕಲನ ಮಾಡಿದ್ದಾರೆ.ಪ್ರಸಾದ್ ಶೆಟ್ಟಿ ರೀರೆಕಾರ್ಡಿಂಗ್ ಮಾಡಿದ್ದಾರೆ.

Comments are closed.