ಕರಾವಳಿ

ಸರಕಾರದ ಕುಮ್ಮಕ್ಕಿನಿಂದ ಹುಸೈನಬ್ಬ ಪ್ರಕರಣದಲ್ಲಿ ಅಮಾಯಕರ ಬಂಧನ: ಶರಣ್ ಪಂಪ್ವೆಲ್

Pinterest LinkedIn Tumblr

ಉಡುಪಿ: ಅಕ್ರಮ ಗೋ ಸಾಗಾಟ ವಿಚಾರದಲ್ಲಿ ಜಿಲ್ಲೆಯಲ್ಲಿ ನಡೆಯುವ ಹತ್ಯೆಗಳಿಗೆ ಜಿಲ್ಲಾಡಳಿತ ಪ್ರಮುಖ ಕಾರಣ ಎಂದು ಭಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಗಂಬೀರ ಆರೋಪ ಮಾಡಿದ್ದಾರೆ .

ಅವರು ಇಂದು ಉಡುಪಿಯಲ್ಲಿ ಪೆರ್ಡೂರಿನಲ್ಲಿ ನಡೆದ ದನದ ವ್ಯಾಪರಿ ಹುಸೈನಬ್ಬ ಅವರ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ ಮಾತನಾಡಿದ್ರು, ಜಿಲ್ಲೆಯಲ್ಲಿ ಆಕ್ರಮಗೋವು ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ.ಈ ವಿಚಾರವನ್ನು ಪೋಲಿಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ಬಜರಂಗದಳ ಸಾಕಷ್ಟು ಬಾರೀ ಗಮನಕ್ಕೆ ತಂದಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಕಾನೂನು ಪ್ರಕಾರ ಕುದ್ರೋಳಿ ಎಂಬಲ್ಲಿ ಮಾತ್ರ ಒಂದು ಕಸಾಯಿಖಾನೆ ಇದೆ.

ಆದ್ರೆ 2 ಜಿಲ್ಲೆಯಲ್ಲಿ 3ಸಾವಿರಕ್ಕೂ ಅಧಿಕ ದನದ ಮಾಂಸ ಮಾರಾಟದ ಅಂಗಡಿಗಳಿವೆ. ಕುದ್ರೋಳಿ ಕಸಾಯಿಖಾನೆಯಲ್ಲಿ ದಿನಕ್ಕೆ ತಲಾ 10ರಿಂದ 12 ಗೋವುಗಳನ್ನು ಕಡಿಯಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಬೀಫ್ ಸ್ಟಾಲ್‍ಗಳಿಗೆ ದನದ ಮಾಂಸ ಪೂರೈಕೆ ಮಾಡಲು ಆಕ್ರಮ ಗೋಸಾಗಾಟ ನಡೆಯುತ್ತಿದೆ.

ಈ ಬಗ್ಗೆ ಹಲವು ಬಾರೀ ಪೋಲಿಸ್ ಇಲಾಖೆ ಹಾಗೂ ಸರಕಾರ ಗಮನಕ್ಕೆ ತರಲಾಗಿದೆ. ಆದ್ರೆ ಸರಕಾರ ಈವಿಚಾರದಲ್ಲಿ ಮೌನ ವಹಿಸಿದೆ. ಭಜರಂಗ ದಳ ಗೋವನ್ನು ಪೂಜನೀಯ ದೃಷ್ಟಿಯಲ್ಲಿ ಕಾಣುತ್ತೇ. ಹಿಂಸೆಗೆ ಪ್ರಚೋದನೆ ನೀಡುವ ಕೆಲಸ ಭಜರಂಗ ದಳ ಮಾಡುವುದಿಲ್ಲ.ಗೋ ಸಂಪತ್ತನ್ನು ಉಳಿಸುವ ದೃಷ್ಟಿಯಿಂದ ಭಜರಂಗದಳದ ಕಾರ್ಯಕರ್ತರು ನಿರಂತರ ಹೋರಾಟ ಇನ್ನೂ ಮುಂದೆಯೂ ನಡೆಸಲಿದ್ದಾರೆ.

ಪೋಲಿಸ್ ಇಲಾಖೆ ಹಾಗೂ ಜಿಲ್ಲಾಡಳಿತ ಆಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕಿದ್ದರೆ ಭಜರಂಗದಳ ಬೀದಿಗೆ ಇಳಿದು ಈ ರೀತಿ ಪ್ರತಿಭಟನೆ ನಡೆಸುವ ಅಗತ್ಯ ಇರಲಿಲ್ಲ. ಹುಸೈನಬ್ಬ ಹತ್ಯೆ ಪ್ರಕರಣದಲ್ಲಿ ಬಂದಿತರಾಗಿರುವ ಭಜರಂಗದಳದ ಕಾರ್ಯಕರ್ತರು ಹುಸೈನಬ್ಬ ಅವರನ್ನು ಕೊಲೆ ಮಾಡಿಲ್ಲ. ಹುಸೈನಬ್ಬ ಹೃದಯ ಸಂಬಂದಿತ ಕಾಯಿಲೆಯಿಂದ ಮರಣ ಹೊಂದಿದ್ದಾರೆ ಎಂಬುವುದು ಪೋಲಿಸ್ ಇಲಾಖೆಗೆ ಕೂಡಾ ತಿಳಿದಿದೆ.

ಆದ್ರೆ ಪೋಲಿಸ್ ಇಲಾಖೆ ರಾಜ್ಯ ಸರಕಾರದ ಕುಮ್ಮಕ್ಕಿನ ಮೇರೆಗೆ ಭಜರಂಗ ದಳದ ಕಾರ್ಯಕರ್ತರ ಮೇಲೆ ಕೊಲೆ ಕೇಸು ದಾಖಲಿಸಿದೆ. ಅದರಲ್ಲೂ ಅಮಾಯಕ ನಿರಾಪರದಿ ಹಿಂದೂಕಾರ್ಯಕರ್ತರ ಮೇಲೆ ಕೊಲೆ ಕೇಸು ದಾಖಲಿಸಿದೆ. ಸರಕಾರ ಈಕೂಡಲೇ ಆಕ್ರಮ ಗೋ ಸಾಗಾಟ, ಗೋ ಹತ್ಯೆ, ಗೋ ಕಳ್ಳತನ ನಡೆಸುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಆಕ್ರಮಗೋ ಸಾಗಾಟವನ್ನುನಿಯಂತ್ರಿಸಲು ವಿಶೇಷ ಪೋಲಿಸ್ ತಂಡ ರಚಿಸಬೇಕು ಎಂದು ಅವರು ಆಗ್ರಹ ಮಾಡಿದ್ರು.

Comments are closed.