ಮನೋರಂಜನೆ

‘ಕಾಲ’ ಚಿತ್ರ ನೋಡಲು ಉದ್ಯೋಗಿಗಳಿಗೆ ಒಂದು ದಿನದ ವಿಶೇಷ ರಜೆ ನೀಡಿದ ಕೇರಳ ಕಂಪನಿ

Pinterest LinkedIn Tumblr


ಚೆನ್ನೈ: ರಜನೀಕಾಂತ್ ಅಭಿನಯದ ಕಾಲ ಚಿತ್ರ ಬಿಡುಗಡೆಗೆ ತಯಾರಾಗಿದ್ದು, ಕೊಚ್ಚಿಯ ಕಲಮಚೇರಿ ಮೂಲದ ಕಂಪನಿಯೊಂದು ಕಾಲ ಸಿನಿಮಾ ವೀಕ್ಷಣೆಗೆ ಉದ್ಯೋಗಿಗಳಿಗೆ ವೇತನ ಸಹಿತ 1 ದಿನದ ವಿಶೇಷ ರಜೆ ನೀಡಿದೆ.

ಟೆಲಿಯಸ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಸುಮಾರು 30 ಮಂದಿ ಉದ್ಯೋಗಿಗಳಿದ್ದು, ಅವರು ರಜನೀಕಾಂತ್ ಅಭಿಮಾನಿಗಳಾಗಿದ್ದಾರೆ. ಹೀಗಾಗಿ ಕಾಲ ಸಿನಿಮಾದ ಮೊದಲ ದಿನದ ಶೋ ನೋಡಲು ಅನುಕೂಲವಾಗುವಂತೆ ಕಂಪನಿ ರಜೆ ಒದಗಿಸಿದೆ. ಗುರುವಾರ ಕಾಲ ಚಿತ್ರ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ ರಾಜ್ಯದಲ್ಲಿ ಕಾಲ ಚಿತ್ರ ಬಿಡುಗಡೆಗೆ ಭದ್ರತೆ ಕೋರಿ ಚಿತ್ರ ತಂಡದವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಬಿಡುಗಡೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಚಿತ್ರ ಬಿಡುಗಡೆಯಾಗುವ ಚಿತ್ರಮಂದಿರಗಳಿಗೆ ಭದ್ರತೆ ನೀಡುವ ಜವಾಬ್ದಾರಿ ಸರಕಾರದ ಮೇಲಿದೆ ಎಂದು ತಿಳಿಸಿದೆ.

Comments are closed.