ಕರಾವಳಿ

ಹುಸೈನಬ್ಬ ಪ್ರಕರಣದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸಬೇಡಿ: ಎಸ್ಪಿಗೆ ಶೋಭಾ ಸೂಚನೆ

Pinterest LinkedIn Tumblr

ಉಡುಪಿ: ದನದ ವ್ಯಾಪಾರಿ ಹುಸೆನಬ್ಬ ನಿಗೂಢ‌ ಸಾವು‌ ಪ್ರಕರಣದಲ್ಲಿ ಬಜರಂಗದಳದ ಕಾರ್ಯಕರ್ತರ ಬಂಧನ‌ ಹಿನ್ನಲೆಯಲ್ಲಿ ಸಂಸದೆ ಶೋಭಾ ಕರಾಂದ್ಲಾಜೆ ಅವರು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಯನ್ನ‌ ಭೇಟಿ ಮಾಡಿದರು. ಬಿಜೆಪಿ ಶಾಸಕ ರಘುಪತಿ ಭಟ್, ಸುಕುಮಾರ್ ಶೆಟ್ಟಿ , ಲಾಲಾಜಿ‌ ಮೆಂಡನ್ ಹಾಗೂ ಇತರ ಬಿಜೆಪಿ ಮುಖಂಡರು ಎಸ್‌ಪಿ ಜೊತೆ ಚರ್ಚೆ ನಡೆಸಿ ನಿರಾಪರಾಧಿಗಳನ್ನು ಬಂಧಿಸದಂತೆ ಮನವಿ ಮಾಡಿದರು.

ಚರ್ಚೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಾಂದ್ಲಾಜೆ, ದನದ ವ್ಯಾಪಾರಿ ಹುಸೆನಬ್ಬ ಸಾವು ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಸುಮ್ಮನೇ ಬಂಧಿಸುವುದು ಸರಿಯಲ್ಲ. ದನ‌ಕಳ್ಳ ಸಾಗಣಿಕೆ ಬಗ್ಗೆ ಪೊಲೀಸರಿಗೆ ಕಾರ್ಯಕರ್ತರು ಮಾಹಿತಿ‌ ಕೊಟ್ಟಿದ್ದಾರೆ. ಪೊಲೀಸರು ಜೀಪಿನಲ್ಲಿ ಕರೆ ತರುವಾಗ ಹುಸೆನಬ್ಬ ಸಾವನ್ನಾಪ್ಪಿದ್ದಾರೆ. ರಾಜ್ಯ ಸರ್ಕಾರ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಲು ಆರಂಭಿಸಿದೆ. ಪೆರ್ಡೂರಿನ ಸಾವಿಗೂ ಬಿಜೆಪಿ‌ ಕಾರ್ಯಕರ್ತರಿಗೆ ಯಾವುದೇ ಸಂಭಂಧವಿಲ್ಲ . ಅವರು ಪೊಲೀಸರಿಗೆ ಕಾನೂನಿನಂತೆ ದನಗಳ್ಳರನ್ನ‌ ಹಿಡಿಯಿರಿ ಅನ್ನೋ ಮಾಹಿತಿ ನೀಡಿದ್ದಾರೆ. ನಮ್ಮ ಕಾರ್ಯಕರ್ತರು ಹಲ್ಲೆ ಮಾಡಿಲ್ಲ, ಸ್ಥಳದಲ್ಲಿ ಪೊಲೀಸ್ ಇಲಾಖೆ ಇತ್ತು. ಆದರೆ ನಮ್ಮ ಕಾರ್ಯಕರ್ತರ ಮೇಲೆ‌ ನಿರಂತರ ವಾದ ಬಂಧನ, ದೌರ್ಜನ್ಯ ಆಗುತ್ತಿದೆ.

ನಾಳೆ ಪ್ರತಿಭಟನೆ…
ಹೊಸದಾಗಿ ಬಂದಿರುವ ಅಧಿಕಾರಿ‌ ಕೂಡ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇದೆಲ್ಲವೂ ರಾಜ್ಯ ಸರ್ಕಾರದ ಕುಮ್ಮಕ್ಕಿನಂತೆ ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ. ನಮಗೆ ನ್ಯಾಯ ಸಿಗಬೇಕು, ಕಾರ್ಯಕರ್ತರ ಬಂಧನ ತಪ್ಪಿಸಬೇಕು. ಈಗಾಗಲೇ ಪೊಲೀಸ್ ಅಧಿಕಾರಿ ಬಂಧನವಾಗಿದೆ ಅವರನ್ನ ವಿಚಾರಣೆ ಮಾಡಬೇಕು. ನಿರಾಪರಾಧಿ ಕಾರ್ಯಕರ್ತರನ್ನ ಬಿಡುಗಡೆಗೊಳಿಸಬೇಕು. ಬುಧವಾರದಂದು ರಾಜ್ಯ ಸರ್ಕರದ ವಿರುದ್ದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

ಕಳೆದ ಹಲವಾರು ವರುಷಗಳಿಂದ ಉಡುಪಿಯ ಬೇರೆ ಬೇರೆ ಕಡೆಗಳಲ್ಲಿ ನಕ್ಸಲರು ಓಡಾಟ ಮಾಡಿದ್ದಾರೆ. ಈ ಭಾಗದಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಹಿಂದಿನ‌ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಅದರ ಹಿಂದೆ ಹಲವು ಕಾರ್ಯಚರಣೆಗಳು ನಡೆದಿದ್ದವು. ಈಗಿನ ಎಸ್ಪಿ ಕೂಡ ಇದನ್ನ‌ ಕಡಿವಾಣ. ಹಾಕುವಂತ ಕೆಲಸ ಮಾಡಬೇಕು ಎಂದರು.

Comments are closed.