ರಾಷ್ಟ್ರೀಯ

ಕೆಲಸಗಾರನಿಂದ ತಂದೆಗೆ ಊಟ ಕೊಡಲು ಬಂದ ಬಾಲಕಿಯ ಅತ್ಯಾಚಾರ, ಕೊಲೆ

Pinterest LinkedIn Tumblr


ಫರಿದಾಬಾದ್: ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಹೇಯ ಘಟನೆ ಫರಿದಾಬಾದ್‌ನ ಪ್ರಿಥ್ಲಾದಲ್ಲಿ ಭಾನುವಾರ ನಡೆದಿದೆ.

ಮೃತಳ ತಂದೆ ಅಂಗಡಿ ನಡೆಸುತ್ತಿದ್ದು, ಆತನಿಗೆ ಊಟದ ಬುತ್ತಿ ತೆಗೆದುಕೊಂಡು ಮಗಳು ಬಂದಿದ್ದಳು. ಆ ಸಂದರ್ಭದಲ್ಲಿ ಮಗುವನ್ನು ಅಪಹರಿಸಿದ ಅಂಗಡಿಯ ಕೆಲಸಗಾರನೊಬ್ಬ ಮನೆಗೆ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಕೊಂದು ಶವವನ್ನು ಮನೆಯಲ್ಲಿಯೇ ಮುಚ್ಚಿಟ್ಟಿದ್ದಾನೆ.

ಆರೋಪಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕೆಂದು ಮಗುವಿನ ತಾಯಿ ಆಗ್ರಹಿಸಿದ್ದಾಳೆ.

ಘಟನೆಯನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಭೂಪೇಂಪರ್ ಸಿಂಗ್ ಹೂಡಾ , ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ವಿದೇಶಗಳಿಂದಲೂ ಕ್ರಿಮಿನಲ್‌ಗಳು ಇಲ್ಲಿಗೆ ಬರುತ್ತಿದ್ದಾರೆ. ಲೂಟಿ, ಅತ್ಯಾಚಾರ, ಕೊಲೆ ದಿನನಿತ್ಯ ನಡೆಯುತ್ತಲೇ ಇರುತ್ತವೆ. ಇದೇ ಕಾರಣಕ್ಕೆ ಯಾರು ಕೂಡ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ ಎಂದಿದ್ದಾರೆ.

Comments are closed.