ಕರಾವಳಿ

ವಿಶೇಷವಾಗಿ ತೂಕ ಇಳಿಸುವವರಿಗೆ ಇದು ಯೋಗ್ಯವಾದ ಆಹಾರ

Pinterest LinkedIn Tumblr

ಸಾಮಾನ್ಯವಾಗಿ ನಿಕೃಷ್ಟ ಎಂದೇ ಪರಿಗಣಿಸುವ ತರಕಾರಿ ಬದನೇಕಾಯಿ . ವರ್ಷದ ಎಲ್ಲಾ ಕಾಲ ಸುಲಭವಾಗಿ ದೊರಕುವ ಮತ್ತು ಅಗ್ಗವಾಗಿರುವ ಬದನೆ ಸಾಂಬರ್ ಮತ್ತು ಬೇಳೆ ಸಾರುಗಳ ಒಂದು ಅವಿಭಾಜ್ಯ ಅಂಗವೇ ಆಗಿದೆ. ಇದರಲ್ಲಿ ಒಂದು ಬಗೆಯ, ಗಾಢ ಕಂದು ಬಣ್ಣದ ನೆಲಗುಳ್ಳ ಎಂಬ ಬದನೆ ಎಂಬ ಸಸ್ಯವರ್ಗಕ್ಕೆ ಸೇರಿದ್ದು ಈ ವರ್ಗಕ್ಕೆ ಟೊಮೆಟೊ ದೊಣ್ಣೆ ಮೆಣಸು ಹಾಗೂ ಆಲುಗಡ್ಡೆಗಳೂ ಸೇರಿವೆ. ಈ ವರ್ಗದ ಪ್ರತಿ ತರಕಾರಿಯೂ ತನ್ನದೇ ಆದ ಆರೋಗ್ಯಕರ ಮಹತ್ವವನ್ನು ಹೊಂದಿದ್ದು ಇದರಲ್ಲಿ ಬದನೆಯ ಪ್ರಯೋಜನಗಳು ಹೀಗಿವೆ..

ಮೂಳೆಗಳನ್ನು ದೃಢವಾಗಿಸುತ್ತದೆ, ತನ್ಮೂಲಕ ಮೂಳೆಗಳು ಟೊಳ್ಳಾಗುವ ಕಾಯಿಲೆಯಿಂದ ರಕ್ಷಿಸುತ್ತದೆ.
* ರಕ್ತಹೀನತೆಯಿಂದ ರಕ್ಷಣೆ ಒದಗಿಸುತ್ತದೆ ಹಾಗೂ ಗ್ರಹಿಕೆಯ ಕ್ಷಮತೆಯನ್ನು ಹೆಚ್ಚಿಸುತ್ತದೆ.
* ಹೃದಯ, ನರವ್ಯವಸ್ಥೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
* ತೂಕ ಇಳಿಸಲು ನೆರವಾಗುತ್ತದೆ
* ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
*ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.
* ನ್ಯೂನತೆಗಳಿರುವ ಮಕ್ಕಳು ಹುಟ್ಟುವುದನ್ನು ತಡೆಯುತ್ತದೆ.
*ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ

* ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.
* ಗರ್ಭಾವಸ್ಥೆಯಲ್ಲಿಯ್ ಸೇವನಿಸಲು ಸೂಕ್ತವಾಗಿದೆ. ಬದನೆಕಾಯಿಯಿಂದ ನಮಗೆ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳು ಬದನೆಯ ಇಷ್ಟೆಲ್ಲಾ ಪ್ರಯೋಜನಗಳಿಗೆ ಇದರಲ್ಲಿರುವ ಪೋಷಕಾಂಶಗಳೇ ಕಾರಣವಾಗಿವೆ.

ತೂಕ ಇಳಿಸುವವರಿಗೆ ಇದು ಯೋಗ್ಯ:
ದತ್ತಕ ಕೋಶದಲ್ಲಿ ವಿವರಿಸಿರುವಂತೆ ಪ್ರತಿ ನೂರು ಗ್ರಾಂ ಬದನೆಯಲ್ಲಿ (ಹಸಿ ಅಥವಾ ಬೇಯಿಸಿದ) ಎಷ್ಟು ಪೋಷಕಾಂಶಗಳಿವೆ ಎಂದು ನೋಡೋಣ…. ಹೆಚ್ಚಿನ ನಾರು, ಕಡಿಮೆ ಕ್ಯಾಲೋರಿ…. ನೂರು ಗ್ರಾಂ ಬದನೆಯಲ್ಲಿ 3.40 ಗ್ರಾಂ ಕರಗುವ ನಾರು ಹಾಗೂ ಕೇವಲ 24 ಕ್ಯಾಲೋರಿಗಳಿವೆ. ಈ ನಾರು ನಮ್ಮ ಜೀರ್ಣಾಂಗಗಳಲ್ಲಿ ನಿಧಾನವಾಗಿ ಚಲಿಸುತ್ತದೆ ಹಾಗೂ ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತದೆ.

ಒಂದು ಕಪ್ ಅಥವಾ 82 ಗ್ರಾಂ ಬದನೆಯಲ್ಲಿ ಮೂರು ಗ್ರಾಂ ಕರಗದ ನಾರು ಹಾಗೂ ಕೇವಲ ಇಪ್ಪತ್ತು ಕ್ಯಾಲೋರಿಗಳಿವೆ. ಗ್ರೆಲಿನ್ ರಸದೂತಗಳನ್ನು ಕಡಿಮೆ ಮಾಡುತ್ತದೆ ಬದನೆಯ ಸೇವನೆಯಿಂದ ಗ್ರೆಲಿನ್ ಎಂಬ ರಸದೂತ ಸ್ರವಿಸುವ ಪ್ರಮಾಣವನ್ನು ಕಡಿಮೆಯಾಗುತ್ತದೆ. ಹಸಿವಿನ ಸಂದೇಶವನ್ನು ನೀಡುವ ಈ ರಸದೂತ ಹೆಚ್ಚಿದ್ದಷ್ಟೂ ಹಸಿವಾಗುವ ಭಾವನೆ ಹೆಚ್ಚುತ್ತಾ ಹೋಗುತ್ತದೆ.

ಬದನೆ ಸೇವನೆಯ ಮೂಲಕ ಹಸಿವಾಗುವ ಸಂಕೇತವೂ ಕಡೆಮೆಯಾಗಿ ಅನಗತ್ಯ ಆಹಾರ ಸೇವನೆಯಿಂದ ತಡೆಗಟ್ಟಿದಂತಾಗುತ್ತದೆ ಹಾಗೂ ತೂಕ ಇಳಿಸುವ ಪ್ರಯತ್ನಗಳು ಹೆಚ್ಚು ಫಲ ನೀಡುತ್ತವೆ.

ಹೆಚ್ಚಿನ ನೀರಿನಂಶವಿದೆ..
ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಬದನೆಯಲ್ಲಿ ಸುಮಾರು 90% ನೀರಿದೆ ಹಾಗೂ ಇದು ತೂಕ ಇಳಿಸಲು ಪ್ರತ್ಯಕ್ಷವಾಗಿ ನೆರವಾಗುತ್ತದೆ. ಬದನೆಯಲ್ಲಿರುವ ನೀರು ಕೆಲವು ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ ಹಾಗೂ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿದೆ ಸಾಪೋನಿನ್ ಬದನೆಯಲ್ಲಿರುವ ಸಾಪೋನಿನ್ ಎಂಬ ಪೋಷಕಾಂಶ ಆಹಾರದಲ್ಲಿರುವ ಕೊಬ್ಬನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತದೆ. ಕೊಬ್ಬನ್ನು ದೇಹ ಹೀರಿಕೊಂಡಷ್ಟೂ ತೂಕ ಏರುವ ಸಾಧ್ಯತೆಯೂ ಹೆಚ್ಚುತ್ತದೆ. ಕೊಬ್ಬನ್ನು ಹೀರಿಕೊಳ್ಳದಂತೆ ತಡೆಯುವ ಮೂಲಕ ದೇಹದ ತೂಕವೂ ಕಡಿಮೆಯಾಗುತ್ತದೆ. ಅಲ್ಲದೇ ಕರುಳುಗಳು ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನೂ ಕಡಿಮೆ ಮಾಡುತ್ತದೆ.

ತೂಕ ಇಳಿಸಲು ಬಳಸಿ ಬದನೆಯ ಜ್ಯೂಸ್ ಬದನೆಯ ಎಲ್ಲಾ ಪೋಷಕಾಂಶಗಳ ಪ್ರಯೋಜನವನ್ನು ಪಡೆದು ತೂಕ ಇಳಿಸ ಬೇಕೆಂದರೆ  ಇದನ್ನು ಜ್ಯೂಸ್ ಮಾಡಿಕೊಂಡು ಪ್ರಮುಖ ಊಟಗಳಿಗೂ ಸುಮಾರು ಹದಿನೈದು ನಿಮಿಷ ಮುನ್ನ ಕುಡಿಯಬೇಕು., ಇದನ್ನು ತಯಾರಿಸುವುದು ಹೇಗೆ ಎಂದು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು: ಒಂದು ಸುಮಾರು ದೊಡ್ಡದೇ ಇರುವ ನೆಲಗುಳ್ಳ ಸುಮಾರು ಅರ್ಧ ಲೀಟರ್ ನೀರು ಒಂದು ಲಿಂಬೆ ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಈ ತುಂಡುಗಳನ್ನು ನೀರಿನಲ್ಲಿ ಕೆಲವು ಘಂಟೆಗಳವರೆಗೆ ನೆನೆಸಿಡಿ. ಈ ನೀರನ್ನು ಸುಮಾರು ಹದಿನೈದು ನಿಮಿಷ ಬೇಯಿಸಿ ಸೋಸಿ ತಣಿಸಿ ಮದ್ಯಾಹ್ನದ ಹಾಗೂ ರಾತ್ರಿಯ ಊಟಕ್ಕೂ ಮುನ್ನ ಸೇವಿಸಿ. ಬೆಳಗ್ಗಿನ ಉಪಾಹಾರಕ್ಕೂ ಮುನ್ನ ಸೇವಿಸಲು ರಾತ್ರಿಯೇ ನೆನೆಸಿಡುವುದು ಉತ್ತಮ. ಈ ನೀರು ಕೊಂಚ ಕಹಿಯಾಗಿರುವ ಕಾರಣ ಒಂದು ಲಿಂಬೆಯ ರಸವನ್ನು ಬೆರೆಸುವ ಮೂಲಕ ರುಚಿಯನ್ನೂ ಹೆಚ್ಚಿಸಬಹುದು. ಜೊತೆಗೇ ಸಾಕಷ್ಟು ವ್ಯಾಯಾಮವನ್ನೂ ಮಾಡಿ… ತೂಕ ಇಳಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸಲು ಬದನೆಯ ನೀರಿನ ಸೇವನೆಯ ಜೊತೆಗೇ ಸಾಕಷ್ಟು ವ್ಯಾಯಾಮವನ್ನೂ ಮಾಡಬೇಕು ಹಾಗೂ ಕ್ಯಾಲೋರಿಗಳು ಕಡಿಮೆ ಇರುವ ಆಹಾರಗಳನ್ನು ಸೇವಿಸಬೇಕು.

Comments are closed.