ಕರಾವಳಿ

ಖರ್ಜುರವನ್ನು ಪ್ರತಿನಿತ್ಯ ಸೇವಿಸುವುದರಿಂದ ಪ್ರಮುಖ ಕಾಯಿಲೆಗಳು ನಿವಾರಣೆ

Pinterest LinkedIn Tumblr

ಎಲ್ಲ ಕಾಲಮಾನದಲ್ಲೂ ಸುಲಭವಾಗಿ ದೊರೆಯುವ ಖರ್ಜುರವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಸಿಡಿಟಿ ಮತ್ತು ಎದೆ ಉರಿ ಇದ್ದಾರೆ ಒಂದು ಖರ್ಜುರ ತಿಂದರೆ ಸಾಕು ಕಡಿಮೆಯಾಗುತ್ತದೆ. ಇದರಲ್ಲಿ ವಿಟಮಿನ್, ಕನಿಜಾಂಶಗಳು ಹೇರಳವಾಗಿರುವುದರಿಂದ ಕೆಲವು ಪ್ರಮುಖ ಕಾಯಿಲೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.

ಹೃದ್ರೋಗ ಸಮಸ್ಯೆ ಕಡಿಮೆ ಮಾಡಲು ಖರ್ಜುರವನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ಜ್ಯೂಸ್ ರೀತಿ ಮಾಡಿ ಕುಡಿದರೆ ತುಂಬಾ ಒಳ್ಳೆಯದು. ಗರ್ಭಿಣಿಯಾದಾಗ ಕೆಲವರಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದಾರೆ ಖರ್ಜುರ ತಿಂದರೆ ಸಾಕು, ದೇಹದಲ್ಲಿ ರಕ್ತಕಣಗಳು ಹೆಚ್ಚಾಗಿ ಅರೋಗ್ಯ ವೃದ್ಧಿಸುವುದಲ್ಲದೆ ಬೃನದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹೆರಿಗೆಯಾ ನಂತರ ಎದೆಯಲ್ಲಿ ಹಾಲು ಹೆಚ್ಚು ಉತ್ಪತ್ತಿ ಮಾಡುತ್ತದೆ ಈ ಖರ್ಜುರ.

ಖರ್ಜುರ ಹಾಕಿ ಕಾಯಿಸಿದ ಹಾಲಿನಿಂದ ಮಕ್ಕಳಿಗೆ ಪೋಷಕಾಂಶ ಸಿಗುವುದು. ಮಲಬದ್ಧತೆ ಸಮಸ್ಯೆಯಿದ್ದರೆ ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಖರ್ಜುರದಲ್ಲಿ ಎ ವಿಟಮಿನ್ ಇರುವುದರಿಂದ ಇರುಳು ಕುರುಡು ಸಮಸ್ಯೆ ನಿವಾರಣೆಯಾಗುತ್ತದೆ. ಸಂಧಿ ನೋವು ಹೆಚ್ಚಿನವರಲ್ಲಿ ಕಂಡುಬರುವ ಸಮಸ್ಯೆ. ಮೂಲೆಯಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆ ಇರುವುದರಿಂದ ಹೀಗಾಗುವುದು. ಖರ್ಜುರದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಆರೋಗ್ಯವನ್ನು ವೃದ್ಧಿಸುವುದು. ಕಾರ್ಜುರಗಳು ಪ್ರೊಟೀನ್ ಗಳ ಅಗರವಾಗಿವೆ. ಹೀಗಾಗಿ ಇವುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹವನ್ನು ಕಾಪಾಡಿಕೊಳ್ಳಬಹುದು.

Comments are closed.