ಕ್ರೀಡೆ

ಆರ್‌ಸಿಬಿ ತಂಡವು ಬಿಗ್ ಹಿಟ್ಟರ್ ಶಿಮ್ರಾನ್ ಹೆಟ್ಮರ್’ನ್ನು ಖರೀದಿಸುತ್ತಿದ್ದಂತೆ ಆತ ಮಾಡಿದ್ದೇನು…? ವೈರಲ್ ಆದ ವಿಡಿಯೋ

Pinterest LinkedIn Tumblr

ಜೈಪುರ: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2019ರ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ವಿಂಡೀಸ್ ನ ಬಿಗ್ ಹಿಟ್ಟರ್ ಶಿಮ್ರಾನ್ ಹೆಟ್ಮರ್ ಅವರನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್(ಆರ್‌ಸಿಬಿ) ಖರೀದಿಸಿದ್ದ ಕೂಡಲೇ ಹೆಟ್ಮರ್ ಅವರು ಕುಣಿದು ಕುಪ್ಪಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

https://twitter.com/Shetmyer02/status/1075066001966809088

ಬಿಗ್ ಹಿಟ್ಟರ್ ಹೆಟ್ಮರ್ ರನ್ನು ಖರೀದಿಸಲು ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆದಿದ್ದು ಕೊನೆಗೆ ಆರ್‌ಸಿಬಿ 4.2 ಕೋಟಿ ರುಪಾಯಿ ಕೊಟ್ಟು ಖರೀದಿಸಿತ್ತು. ಹೊಟೇಲ್ ಒಂದರಲ್ಲಿ ಕುಳಿತು ಟಿವಿಯಲ್ಲಿ ಐಪಿಎಲ್ ಹರಾಜು ನೇರಪ್ರಸಾರ ನೋಡುತ್ತಿದ್ದ ಹೆಟ್ಮರ್ ತಾನು ವಿರಾಟ್ ಕೊಹ್ಲಿ ತಂಡ ಸೇರುತ್ತಿದ್ದಂತೆ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಅಷ್ಟೇ ಅಲ್ಲದೆ ಹರಾಜಿನಲ್ಲಿ ತನ್ನ ಹೆಸರು ಬರುತ್ತಿದ್ದಂತೆ ಅದರಲ್ಲೂ ಹಣ ಜಾಸ್ತಿಯಾಗುತ್ತಿದ್ದಂತೆ ಸಂತಸದಲ್ಲಿ ತೇಲಾಡಿದರು. ಕೊನೆಗೆ ಆರ್‌ಸಿಬಿ ಖರೀದಿಸುತ್ತಿದ್ದಂತೆ ತಮ್ಮ ಶರ್ಟ್ ಬಿಚ್ಚಿ ನೆಲದ ಮೇಲೆ ಮಂಡಿಯೂರಿ ದೇವರನ್ನು ಪ್ರಾರ್ಥಿಸಿದರು.

ಬಳಿಕ ಹೆಟ್ಮರ್ ಟ್ವೀಟ್ ಮಾಡಿ ಇದು ನನ್ನ ಮೊದಲ ಐಪಿಎಲ್. ನನ್ನ ಖರೀದಿ ಮಾಡಿದ ಆರ್‌ಸಿಬಿಗೆ ಧನ್ಯವಾದ. ಬೆಂಗಳೂರು ಅಭಿಮಾನಿಗಳ ಜತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕಾತುರನಾಗಿದ್ದೇನೆ ಎಂದು ಹೇಳಿದ್ದಾರೆ.

Comments are closed.