ಕರಾವಳಿ

ಬಿಡದೆ ಕಾಡುವ ಬೆನ್ನುನೋವು ನಿವಾರಣೆಗೆ ಸುಲಭ ಪರಿಹಾರ.

Pinterest LinkedIn Tumblr

ಕೆಲವರಿಗೆ ಆಗಾಗ್ಗೆ ಬೆನ್ನುನೋವು ಕಾಡುತ್ತಿರುತ್ತದೆ. ಇದಕ್ಕೆ ಸಣ್ಣ ಪುಟ್ಟ ಸಮಸ್ಯೆಗಳೂ ಕಾರಣವಾಗಿರಬಹುದು. ಕುಳಿತುಕೊಳ್ಳುವ ಪದ್ಧತಿ ಸರಿಯಾಗಿಲ್ಲದಿರುವುದು, ತುಂಬಾ ಹೊತ್ತು ಕುಳಿತು ಕೆಲಸ ಮಾಡುವುದು, ಅಧಿಕ ವ್ಯಾಯಾಮ, ಅಪಘಾತಕ್ಕೀಡಾಗುವುದು, ದಿನದಲ್ಲಿ ಹೆಚ್ಚು ಸಮಯ ಬೈಕ್ ಓಡಿಸುವುದು. ಇಂತಹ ಹಲವು ಕಾರಣಗಳಿಂದ ಬೆನ್ನುನೋವು ಬರಬಹುದು. ಅಲ್ಲದೆ ಈಗ ವಯಸ್ಸಿನ ಸಂಬಂಧವಿಲ್ಲದೆ ಬೆನ್ನುನೋವು, ಸೊಂಟ ನೋವು ಪೀಡಿಸುತ್ತಿದೆ. ಇದಕ್ಕೆ ಸಹಜಸಿದ್ಧವಾದ ಖರ್ಚಿಲ್ಲದ ಒಳ್ಳೆಯ ಉಪಾಯಗಳಿವೆ.

1:ಶುಂಠಿಯನ್ನು ಪೇಸ್ಟ್ ಮಾಡಿ ಸೊಂಟನೋವು/ಬೆನ್ನುನೋವು ಇರುವ ಕಡೆ ಹಚ್ಚಿಕೊಂಡು 20 ನಿಮಿಷಗಳ ನಂತರ ತೊಳೆಯಬೇಕು. ಹೀಗೆ ಮಾಡುವುದರಿಂದ ನೋವು ನಿವಾರಣೆಯಾಗುವುದು.

2:ಒಂದು ಬಟ್ಟಲಿನಲ್ಲಿ ನೀರು ಹಾಕಿ ಅದರಲ್ಲಿ ಶುಂಠಿ ಹಾಕಿ ಸ್ವಲ್ಪ ಹೊತ್ತು ಕುದಿಸಬೇಕು. ಆ ನೀರು ತಣ್ಣಗಾದ ನಂತರ ಸ್ವಲ್ಪ ಜೇನು ಬೆರೆಸಿ ಆ ಮಿಶ್ರಣವನ್ನು ಪ್ರತಿ ದಿನ ಬರಿಹೊಟ್ಟೆಯಲ್ಲಿ ಕುಡಿಯುವುದರಿಂದ ಸೊಂಟನೋವು/ಬೆನ್ನುನೋವು ನಿವಾರಣೆಯಾಗುತ್ತದೆ.

3:ಒಂದು ಲೋಟ ನೀರಿಗೆ ಬೆಳ್ಳುಳ್ಳಿ ಪೇಸ್ಟ್ ಅನ್ನು ಬೆರೆಸಿ ಕುಡಿಯುವುದರಿಂದ ಸೊಂಟನೋವು/ಬೆನ್ನುನೋವು ಉಪಶಮನವಾಗುವುದು.

4:ಉಗುರುಬೆಚ್ಚಗಿನ ಹಾಲಿನಲ್ಲಿ ಸ್ವಲ್ಪ ಹರಿಶಿನ, ಶುಂಠಿ ರಸವನ್ನು ಬೆರೆಸಿ ಆ ಮಿಶ್ರಣವನ್ನು ಬರಿಹೊಟ್ಟೆಯಲ್ಲಿ ಕುಡಿಯುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

5:ಸಾಸುವೆ ಎಣ್ಣೆ ಮತ್ತು ಎಳ್ಳೆಣ್ಣೆಯನ್ನು ಸಮಭಾಗದಲ್ಲಿ ತೆಗೆದುಕೊಂಡು ನೋವು ಇರುವ ಕಡೆ ಮಸಾಜ್ ಮಾಡುವುದರಿಂದ ನೋವು ಮಾಯವಾಗುವುದು.

6:ಶುಂಠಿಯನ್ನು ಅರೆದು ುದರಿಂದ ಸೊಂಟನೋವು/ಬೆನ್ನುನೋವು ಇರುವ ಕಡೆ ಪಟ್ಟು ಹಾಕುವುದರಿಂದ ನೋವು ಉಪಶಮನವಾಗುತ್ತದೆ.

7: ನೇರವಾಗಿ ಕುಳಿತು ಡ್ರೈವಿಂಗ್ ಮಾಡಬೇಕು. ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಎರಡೂ ಪಾದಗಳು ನೆಲಕ್ಕೆ ತಾಕುವಂತೆ ಕುಳಿತುಕೊಳ್ಳಬೇಕು.

8: ಬೆನ್ನೆಲುಬಿಗೆ ಶಕ್ತಿ ಕೊಡುವ ಉದ್ದಿನ ಬೇಳೆಯನ್ನು ಕ್ರಮತಪ್ಪದೆ ಸೇವಿಸಬೇಕು. ವಾರಕ್ಕೆ 2 ಬಾರಿಯಾದರೂ ಉದ್ದಿನಬೇಳೆಯಿಂದ ತಯಾರಿಸಿದ ಅಹಾರವನ್ನು ತೆಗೆದುಕೊಳ್ಳಬೇಕು. ಪ್ರತಿನಿತ್ಯದ ಆಹಾರದಲ್ಲಿ ಉದ್ದಿನಬೇಳೆ ಇರುವಂತೆ ನಿಗಾ ಇಡುವುದರಿಂದ ಬೆನ್ನೆಲುಬಿಗೆ ಪೊಷಕಾಂಶ ಲಭಿಸಿ ಬೆನ್ನೆಲುಬು ಗಟ್ಟಿಗೊಳ್ಳುತ್ತದೆ.

9:ಕೊಬ್ಬರಿ ಎಣ್ಣೆಯಲ್ಲಿ ಕರ್ಪೂರವನ್ನು ಕರಿಗಿಸಿ ನೋವು ಇರುವ ಕಡೆ ಹಚ್ಚಬೇಕು.

10: ತಿಳಿ ಮಜ್ಜಿಗೆಯಲ್ಲಿ ಸ್ವಲ್ಪ ಸುಣ್ಣದ ತಿಳಿನೀರನ್ನು ಬೆರೆಸಿ ಬರಿ ಹೊಟೆಯಲ್ಲಿ ಕುಡಿಯಬೇಕು.

11: ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆ, ಶುಂಠಿ, ಬೆಳ್ಳುಳ್ಳಿ ಹಾಕಿ ಕುದಿಸಿ ತಯಾರಿಸಿಟ್ಟುಕೊಂಡ ಎಣ್ಣೆಯನ್ನು ನೋವು ಇರುವ ಕಡೆ ಹಚ್ಚುವುದರಿಂದ ಶುಂಠಿಯಲ್ಲಿರುವ ಆಂಟಿ ಇನ್ ಫ್ಲಾಮೇಟರಿ ಗುಣಗಳು ನೋವನ್ನು ನಿವಾರಿಸುತ್ತವೆ.

12: ತುಳಸಿ ಎಲೆ, ಕಲ್ಲುಪ್ಪು ಬೆರೆಸಿದ ನೀರನ್ನು ಪ್ರತಿದಿನಾ ಬರಿಹೊಟ್ಟೆಯಲ್ಲಿ ಕುಡಿಯಬೇಕು. ತುಳಸಿಯು ಆಯುರ್ವೇದ ಗುಣಗಳನ್ನು ಹೊಂದಿರುವುದರಿಂದ ನೋವು ಮಾಯವಾಗುತ್ತದೆ.

ಇವುಗಳಲ್ಲಿ ಯಾವುದಾದರೊಂದು ಸಹಜ ಸಿದ್ಧವಾದ ವೈದ್ಯವನ್ನು ಕ್ರಮ ತಪ್ಪದೆ ಮಾಡುವುದರಿಂದ ಸೊಂಟನೋವು/ಬೆನ್ನುನೋವು ಎಂದಿಗೂ ಬರುವುದಿಲ್ಲ ಎಂದು ಆಯುರ್ವೇದ ನಿಪುಣರು ಹೇಳುತ್ತಾರೆ.

Comments are closed.