ಕರಾವಳಿ

ಮಂಗಳೂರಿನಲ್ಲಿ ಅಕಾಲಿಕ ಮಳೆ : ಪರದಾಡಿದ ದ್ವಿಚಕ್ರ ವಾಹನ ಸವಾರರು

Pinterest LinkedIn Tumblr

ಮಂಗಳೂರು, ಮೇ 7: ಮಂಗಳೂರಿನಲ್ಲಿ ರವಿವಾರ ಸಂಜೆ ಭಾರೀ ಮಳೆ ಸುರಿದಿದ್ದು, ಅನೀರಿಕ್ಷಿತವಾಗಿ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಪರದಾಡಿದರು. ಸಂಜೆ 7 ಗಂಟೆಯ ಬಳಿಕ ನಗರದ ಕೆಲವು ಪ್ರದೇಶಗಳಲ್ಲಿ ಮುಂಗಾರು ಪೂರ್ವ ಮಳೆಯಾಗಿದೆ. ಒಂದು ತಾಸಿಗೂ ಹೆಚ್ಚು ಕಾಲ ಮಳೆಯಾಗಿದೆ.

ಮಂಗಳೂರು ನಗರ ಮತ್ತು ಹೊರ ವಲಯದಲ್ಲಿ ನಿನ್ನೆ ಸಂಜೆ ಹೊತ್ತಿಗೆ ಜೋರಾಗಿ ಮಳೆ ಸುರಿದಿದ್ದು, ಯಾವೂದೇ ಪೂರ್ವ ತಯಾರಿ ಇಲ್ಲದೇ ತೆರಳಿದಂತಹ ದ್ವಿಚಕ್ರ ವಾಹನ ಸವಾರರು ಸಂಕಷ್ಟಕೀಡಾದರು. ಕೆಲವು ದಿನಗಳಿಂದ ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನತೆಗೆ ಅಕಾಲಿಕವಾಗಿ ಸುರಿದ ಮಳೆಯು ತಂಪು ನೀಡಿದೆ.

Comments are closed.