ಕರಾವಳಿ

ತುಳುನಾಡಿನ ಮೂಡೆ, ಸಜ್ಜಿಗೆ ಬಜಿಲ್ ಎಂದೂ ಮರೆಯಲಾರೆ – ನಿಮ್ಮ ಪ್ರೀತಿಯನ್ನು ಬಡ್ಡಿ ಸಹಿತ ಹಿಂತಿರುಗಿಸುವೆ : ಮಂಗಳೂರಿನಲ್ಲಿ ಪ್ರಧಾನಿ ಮೋದಿ

Pinterest LinkedIn Tumblr

ಮಂಗಳೂರು :ಮಂಗಳೂರಿನಲ್ಲಿ ಶನಿವಾರ ಸಂಜೆ ನಡೆದ ಬಿಜೆಪಿಯ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ತುಳುವಿನಲ್ಲಿ ಆರಂಭಿಸಿ ಕನ್ನಡಲ್ಲಿ ಮುಂದುವರಿಸಿ ಬಳಿಕ ಹಿಂದಿಯಲ್ಲಿ ಮಾತನಾಡಿ ಮುಕ್ತಾಯ ಮಾಡಿದರು.

ಮೊದಲು ತುಳುವಿನಲ್ಲಿ ”ಧರ್ಮಸ್ಥಳದ ಸ್ವಾಮಿಗೆ ಎನ್ನ ಭಕ್ತಿದ ನಮನೊಲು, ತುಳುನಾಡ್‌ದ ಜನಕುಲೆಗ್ ಎನ್ನ ಪ್ರೀತಿದ ನಮಸ್ಕಾರೊಲು, ಎಂದು ಹೇಳಿದ ಮೋದಿಯವರು ಬಳಿಕ ತುಳುನಾಡಿನ ವೀರ ಸಹೋದರರಾದ ಕೋಟಿ ಚನ್ನಯ, ರಾಣಿ ಅಬ್ಬಕ್ಕ, ಸಮಾಜ ಸುಧಾರಕ ನಾರಾಯಣ ಗುರು, ಸ್ವಾತಂತ್ರ ಸೇನಾನಿ ಕಾರ್ನಾಡ್ ಸದಾಶಿವ ರಾವ್ ಎಲ್ಲ ಮಹಾನಿಯರಿಗೆ ಸಾದರ ನಮನಗಳು” ಎಂದು ಕನ್ನಡದಲ್ಲಿ ತಮ್ಮ ಮಾತನ್ನು ಆರಂಭಿಸಿದರು.

ಆ ಸಂದರ್ಭ ಮೋದಿ ಮೋದಿ ಎಂಬ ಉದ್ಗಾರ ಸಭಿಕರಿಂದ ವ್ಯಕ್ತವಾದಾಗ, ಮೋದಿಯವರು ಪ್ರತಿಕ್ರಿಯಿಸುತ್ತಾ, ನಿಮ್ಮೆಲ್ಲರ ಉತ್ಸಾಹಕ್ಕೆ ನಾನು ಆಭಾರಿ ಎಂದರು. ಏರ್‌ಪೋರ್ಟ್‌ನಿಂದ ಇಲ್ಲಿಗೆ ಬಂದಾಗ ರಸ್ತೆಯುದ್ದಕ್ಕೂ ಮಾನವ ಸರಪಳಿ, ಮಾನವ ಗೋಡೆಯನ್ನು ಕಂಡೆ ಎಂದರು.

ಬಳಿಕ ಮೋದಿಯವರು ಹಿಂದಿಯಲ್ಲಿ ತಮ್ಮ ಮಾತನ್ನು ಮುಂದುವರಿಸಿದರು. ಅವರ ಮಾತನ್ನು ವೇದಿಕೆಯಲ್ಲಿದ್ದವರೊಬ್ಬರು ಭಾಷಾಂತರ ಮಾಡಲು ಮುಂದಾದಾಗ ಸಭಿಕರಿಂದ ಬೇಡ, ಬೇಡ ಎಂಬ ಘೋಷಣೆ ಕೇಳಿ ಬಂತು. ತಕ್ಷಣ ಮೋದಿ ಮಾತನಾಡಿ, ಭಾಷಾಂತರಿಸುವುದು ಬೇಡವೇ? ಅಷ್ಟೊಂದು ಪ್ರೀತಿಯೇ? ಈ ನಿಮ್ಮ ಪ್ರೀತಿಯನ್ನು ಬಡ್ಡಿ ಸಹಿತ ಹಿಂತಿರುಗಿಸುತ್ತೇನೆ. ವಿಕಾಸದ ಮೂಲಕ ಹಿಂತಿರುಗಿ ಸುತ್ತೇನೆ. ಪ್ರತಿ ಬಾರಿ ಮಂಗಳೂರಿಗೆ ಬಂದಾಗಲೂ ನೀವು ತೋರಿಸುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ತುಳುನಾಡಿನ ಮೂಡೆ, ಸಜ್ಜಿಗೆ ಬಜಿಲ್ ಇದನ್ನು ಎಂದಿಗೂ ಮರೆಯಲಾಗದು ಎಂದು ಪ್ರಧಾನಿ ಮೋದಿ ಹೇಳಿದರು.

Comments are closed.