ಮನೋರಂಜನೆ

ಅಂದು ನಟ ಮಿಥುನ್ ಚಕ್ರವರ್ತಿಗೆ ಕಸದ ತೊಟ್ಟಿಯಲ್ಲಿದ್ದ ಸಿಕ್ಕಿದ್ದ ಹೆಣ್ಣುಮಗು ಹೇಗಿದ್ದಾಳೆ ನೋಡಿ….

Pinterest LinkedIn Tumblr

ಮುಂಬೈ: ಬಾಲಿವುಡ್ ಸ್ಟಾರ್​ಗಳ ಮಕ್ಕಳು ಆಗಾಗ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಜಾಹ್ನವಿ ಕಪೂರ್​, ಸಾರಾ ಅಲಿ ಖಾನ್, ಇಶಾನ್ ಖತ್ತರ್​​ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ್ರೂ ಮಾಧ್ಯಮಗಳ ಅಟೆನ್ಷನ್ ಅವರಿಗೆ ಸಿಗುತ್ತದೆ. ಈ ಸ್ಟಾರ್​ ಕಿಡ್ಸ್​ ತಮ್ಮ ಬಾಲಿವುಡ್​ ಎಂಟ್ರಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಆ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಹೌದು. ನಾವು ಹೇಳ್ತಿರೋದು ನಟ ಮಿಥುನ್​ ಚಕ್ರವರ್ತಿ ಪುತ್ರಿ ದಿಶಾನಿ ಚಕ್ರವರ್ತಿಯ ಬಗ್ಗೆ. ಮಿಥುನ್​ ಚಕ್ರವರ್ತಿಗೆ ದಿಶಾನಿ ಸಿಕ್ಕಿದರ ಹಿಂದಿನ ಕಥೆಯೇ ತುಂಬಾ ಸುಂದರ ಹಾಗೂ ಹೃದಯಮುಟ್ಟುವಂತದ್ದು.

ದಿಶಾನಿಯ ಪೋಷಕರು ಆಕೆಯನ್ನು ಕಸದ ತೊಟ್ಟಿಯಲ್ಲಿ ಎಸೆದು ಹೋಗಿದ್ದರು. ಈ ಬಗ್ಗೆ ಸುದ್ದಿ ಓಡಿದಾಗ ಮಿಥುನ್ ಚಕ್ರವರ್ತಿ ಆ ಮಗುವನ್ನು ದತ್ತು ತೆಗೆದುಕೊಳ್ಳಲು ಇಚ್ಛಿಸಿದ್ದರು. ಮಿಥುನ್​ ಅವರ ಪತ್ನಿ ಯೋಗಿತಾ ಕೂಡ ಪತಿಯ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ರು. ಇಬ್ಬರೂ ದತ್ತು ಪ್ರಕ್ರಿಯೆ ಮುಗಿಸಿ ಮಗುವನ್ನು ಮನೆಗೆ ತಂದಿದ್ದರು. ಮಿಥುನ್​ ಕುಟುಂಬ ದಿಶಾನಿಯನ್ನು ಸ್ವಂತ ಮಗಳಂತೆ ಪ್ರೀತಿಯಿಂದ ಆರೈಕೆ ಮಾಡಿ ಸಾಕಿದ್ದಾರೆ. ಈಗ ದಿಶಾನಿ ಬೆಳೆದು ದೊಡ್ಡವಳಾಗಿದ್ದು, ಯಾವ ಹೀರೋಯಿನ್​ಗೂ ಕಮ್ಮಿಯಿಲ್ಲ ಎನ್ನುವಷ್ಟು ಸುಂದರವಾಗಿ ಕಾಣ್ತಿದ್ದಾಳೆ.

Comments are closed.