ಗಲ್ಫ್

ಅಬುಧಾಬಿ: ಸಾರಿಗೆ ನಿಯಮಗಳ ಉಲ್ಲಂಘನೆಗಾಗಿ ವಿಧಿಸಲಾಗುವ ದಂಡವನ್ನು ಕಂತುಗಳಲ್ಲಿ ಪಾವತಿಸಬಹುದು !

Pinterest LinkedIn Tumblr

ಅಬುಧಾಬಿ: ಸಾರಿಗೆ ನಿಯಮಗಳ ಉಲ್ಲಂಘನೆಗಾಗಿ ವಿಧಿಸಲಾಗುವ ದಂಡವನ್ನು ಕಂತುಗಳಲ್ಲಿ ಪಾವತಿಸಲು ಸಾಧ್ಯವಾಗುವಂತೆ ಫಸ್ಟ್ ಅಬುಧಾಬಿ ಬ್ಯಾಂಕ್ ಜೊತೆಗೆ ಅಬುಧಾಬಿ ಪೊಲೀಸ್ ಮಹಾನಿರ್ದೇಶನಾಲಯ ಒಪ್ಪಂದವೊಂದನ್ನು ಏರ್ಪಡಿಸಿದೆ ಎಂದು ಅಬುಧಾಬಿ ಪೊಲೀಸರು ಶನಿವಾರ ಘೋಷಿಸಿದ್ದಾರೆ.

ಅಬುಧಾಬಿ ಪೊಲೀಸ್‌ನ ಹಣಕಾಸು ಮತ್ತು ಸೇವೆಗಳ ಮಹಾನಿರ್ದೇಶಕ ಮೇಜರ್ ಜನರಲ್ ಸಯೀದ್ ಸೈಫ್ ಅಲ್ ನುಐಮಿ ಮತ್ತು ಫಸ್ಟ್ ಅಬುಧಾಬಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಬಿತ್ ಸಿಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ತಮ್ಮ ದಂಡವನ್ನು ಪಾವತಿಸಲು ಸಾರ್ವಜನಿಕರಿಗೆ ಸುಲಭವಾಗುವಂತೆ ಮಾಡುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಲ್ ನುಐಮಿ ತಿಳಿಸಿದರು.

ಫಸ್ಟ್ ಅಬುಧಾಬಿ ಬ್ಯಾಂಕ್‌ನ ಗ್ರಾಹಕರು ತಮ್ಮ ಸಾರಿಗೆ ದಂಡವನ್ನು ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದಾಗಿದೆ.

Comments are closed.