ರಾಷ್ಟ್ರೀಯ

ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಎಲ್ಇಟಿ ಕಮಾಂಡರ್ ಸೇರಿ 5 ಉಗ್ರರನ್ನು ಹೊಡೆದುರುಳಿಸಿದ ಸೇನೆ

Pinterest LinkedIn Tumblr

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆಸಲಾದ ಎನ್’ಕೌಂಟರ್ ನಲ್ಲಿ ಭಾರತೀಯ ಸೇನಾಪಡೆ 5 ಉಗ್ರರನ್ನು ಹೊಡೆದುರುಳಿಸಿದೆ ಎಂದು ಭಾನುವಾರ ತಿಳಿದುಬಂದಿದೆ.

ಬದಿಗಾಮ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಖಚಿತ ಮಾಹಿತಿ ದೊರಕಿದ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದು, ಕಾರ್ಯಾಚರಣೆ ಆರಂಭಿಸಿದ್ದವು. ಕಾರ್ಯಾಚರಣೆಯಲ್ಲಿ ಇದೀಗ 5 ಉಗ್ರರುನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ ಎಂದು ವರದಿಗಳಿಂದ ತಿಳಿಸಿವೆ.

ಎನ್ ಕೌಂಟರ್ ವೇಳೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಘಟನೆಯಲ್ಲಿ ಓರ್ವ ಯೋಧ ಹಾಗೂ ಓರ್ವ ಪೊಲೀಸ್ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ನಾಲ್ವರು ಉಗ್ರರಲ್ಲಿ ಲಷ್ಕರ್-ಇಲ-ತೊಯ್ಬಾ ಉಗ್ರ ಸಂಘಟನೆಯ ಸ್ಥಳೀಯ ಕಮಾಂಡರ್ ನನ್ನು ಹತ್ಯೆ ಮಾಡುವುದರಲ್ಲಿ ಭಾರತೀಯ ಸೇನಾಪಡೆ ಯಶಸ್ವಿಯಾಗಿದೆ.

ಎ++ ಕೆಟಗರಿಯ ಉಗ್ರ ಷೌಕತ್ ಅಹ್ಮದ್ ತಕ್ ನನ್ನು ಹತ್ಯೆ ಮಾಡುವ ಮೂಲಕ ಸೇನಾಪಡೆ ಮೇಲುಗೈ ಸಾಧಿಸಿದೆ. ಕಳೆದ 8 ವರ್ಷಗಳಿಂಗ ಅಹ್ಮದ್ ತಕ್ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಲಷ್ಕರ್ ಇ ತೊಯ್ಬಾ ಕಮಾಂಡರ್ ಗಳಾದ ಅಬು ದುಜಾನ, ಖ್ವಾಸಿಂ ಹಾಗೂ ಅಬು ರೆಹಮಾನ್ ಜೊತೆ ಅಹ್ಮದ್ ತಕ್ ನಿಕಟ ಸಂಪರ್ಕವನ್ನು ಹೊಂದಿದ್ದನೆಂದು ಹೇಳಲಾಗುತ್ತಿದೆ.

Comments are closed.