ಕರಾವಳಿ

ಬಿಜೆಪಿ ಸರಕಾರ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ: ನಟ ಪ್ರಕಾಶ್ ರೈ

Pinterest LinkedIn Tumblr

ಉಡುಪಿ: ಬಹು ಸಂಖ್ಯಾತರಿಂದ ಅಲ್ಪ ಸಂಖ್ಯಾತರನ್ನು ತುಳಿಯುವ ಪ್ರಯತ್ನ ವವ್ಯಸ್ಥಿತವಾಗಿ ನಡೆಯುತ್ತಿದೆ. ಸಜ್ಜನರ ಊಹೆಗೂ ನಿಲುಕದ ಪಿತೂರಿಗಳು ದೇಶದಲ್ಲಿ ನಡೆಯುತ್ತಿದೆ ಎಂದು ಪ್ರಗತಿಪರ ಚಿಂತಕ ಖ್ಯಾತ ಚಿತ್ರನಟ ಪ್ರಕಾಶ್ ರೈ ಆರೋಪ ಮಾಡಿದ್ದಾರೆ.

ಅವರು ಉಡುಪಿಯಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದರು. ಮಠಗಳು ಅಭಿವೃದ್ದಿಯಾದಾಗ ಧರ್ಮ ಬೆಳೆಯುತ್ತೇ, ಆದ್ರೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬೇಡಿ. ಪ್ರಸ್ತುತ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ದೇಶದ ರಾಜಕಾರಣದಲ್ಲಿ ಅಮೀತ್ ಷಾಗೆ ಒಬ್ಬ ನಾಯಕನಾಗುವ ಯಾವ ಅರ್ಹತೆ ಇಲ್ಲ.

ಎಂ.ಎಲ್.ಎಗಳನ್ನು ಖರೀದಿಸಿ ಆಡಳಿತ ನಡೆಸುವ ಕುಖ್ಯಾತಿ ಸ್ವಭಾವ ಅಮೀತಾ ಷಾ ಅವರಲ್ಲಿದ್ದೇ ಹೊರತು ಗಾಂಧಿ ಆಂಬೇಡ್ಕರ್ರಂತೆ ಈ ದೇಶವನ್ನು ಪ್ರಗತಿ ಪಥದತ್ತ ಸಾಗಿಸುವ ಯೋಚನೆ ಅವರಲ್ಲಿಲ್ಲ. ಕೇವಲ ಚುನಾವಣೆ ಗೆಲ್ಲುವುದರಲ್ಲಿ ಮತ್ತು ಅದಕ್ಕೆ ದಾಳ ಹಾಕುವುದರಲ್ಲಿ ನಿಸ್ಸೀಮರು . ಈ ರೀತಿಯ ಪ್ರತಿಭೆಗಳು ನಮ್ಮ ದೇಶಕ್ಕೆ ಬೇಕೆ ಎಂದು ಅಮೀತಾಷಾ ಹಾಗೂ ಬಿಜೆಪಿ ವಿರುದ್ದ ವಾಗ್ದಳಿ ನಡೆಸಿದ್ರು

Comments are closed.