ಕರಾವಳಿ

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಶೀರೂರು ಶ್ರೀ ಹೇಳಿದ್ದೇನು?

Pinterest LinkedIn Tumblr

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರ ಭಾರೀ ರಂಗೇರಿದೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಇಂದು ಉಡುಪಿಯಲ್ಲಿ ನಾಮಪತ್ರ ಸಲ್ಲಿಸಿದರು. ಉಡುಪಿ ಕಡಿಯಾಳಿ ಮಹಿಷ ಮರ್ಧಿನಿ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿ ಬಳಿಕ ಚುನಾವಣಾ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಕೆಂಪೆಗೌಡರಿಗೆ ನಾಮಪತ್ರವನ್ನು ಸಲ್ಲಿಸಿದರು.

ಚುನಾವಣಾ ಕಚೇರಿಯಲ್ಲಿ ನಾಮ ಪತ್ರ ಸಲ್ಲಿಸುವುದಕ್ಕೆ ಒಂದಷ್ಟು ವಿಳಂಬವಾದ ಕಾರಣ ಸ್ವಾಮೀಜಿ ಆರೋಗ್ಯದಲ್ಲಿ ಒಂದಷ್ಟು ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು. ಜೊತೆಗಿದ್ದವರು ಎಳನೀರನ್ನ ನೀಡಿದ ಬಳಿಕ ಒಂದಷ್ಟು ದಣಿವಾರಿಸಿಕೊಂಡ ನಂತರವೇ ನಾಮ ಪತ್ರವನ್ನು ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀಗಳು ಬಿಜೆಪಿಯಿಂದ ಟಿಕೆಟ್ ನೀರಿಕ್ಷೆಯಿತ್ತು ಅದ್ರೆ ಅದು ಸಿಕ್ಕಿಲ್ಲ.ನಾನು ಈಗಾಗಲೇ..ಪ್ರಚಾರ ಕಾರ್ಯಕ್ರಮ ಶುರು ಮಾಡಿದ್ದೇನೆ.ಚುನಾವಣೇಯಲ್ಲಿ ನನಗೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಯಾವುದೇ ಕಾರಣಕ್ಕೂ ನಾಮಪತ್ರವನ್ನ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಉಡುಪಿಯ ಬಿಜೆಪಿಯಲ್ಲಿ ಅಸಮಾಧಾನವಿರುವುದನ್ನು ಒಪ್ಪಿಕೊಂಡ ಶ್ರೀಗಳು ಒಂದು ವೇಳೆ ಮೋದಿ ಹಾಗೂ ಅಮಿತ್ ಷಾ ಮನವೊಲಿಸಿದ್ರೆ ನಾಮಪತ್ರ ವಾಪಸ್ಸು ತೆಗೆಯುವುದರ ಬಗ್ಗೆ ಚಿಂತನೆ ನಡೆಸ್ತೇನೆ. ಉಡುಪಿಯಲ್ಲಿ ಪಕ್ಷೇತರನಾಗಿ ಗೆದ್ದಲ್ಲಿ ಪ್ರದಾನಿ ಮೋದಿಗೆ ಬೆಂಬಲಿಸುವುದಾಗಿಯೂ ಹೇಳಿದ್ದಾರೆ.

Comments are closed.