ಕರಾವಳಿ

ಬ್ರೇಕ್‌ಫಾಸ್ಟ್‌ನಲ್ಲಿ ಓಟ್ಸ್ ತೆಗೆದುಕೊಂಡರೆ ಅಗುವ ಆರೋಗ್ಯ ಪ್ರಯೋಜನಗಳು.

Pinterest LinkedIn Tumblr

ಪ್ರತಿಯೊಬ್ಬರೂ ಬೆಳಗ್ಗೆ ಬ್ರೇಕ್‌ಫಾಸ್ಟ್ ಕಡ್ಡಾಯವಾಗಿ ಮಾಡಲೇಬೇಕು ಎಂದು ಎಲ್ಲರಿಗೂ ಗೊತ್ತು. ಯಾಕೆಂದರೆ…ಹಿಂದಿನ ದಿನ ರಾತ್ರಿ ಊಟ ಮಾಡಿದ ಬಳಿಕ ಬಹಳಷ್ಟು ಸಮಯ ಹೊಟ್ಟೆ ಖಾಲಿಯಾಗಿ ಇರುತ್ತದೆ. ಆದಕಾರಣ ಆ ಸ್ಥಿತಿಯಲ್ಲಿರುವ ದೇಹಕ್ಕೆ ಶಕ್ತಿ ಬೇಕೆಂದರೆ ಯಾರೇ ಆಗಲಿ ಕಡ್ಡಾಯವಾಗಿ ಬೆಳಗ್ಗೆ ಬ್ರೇಕ್‌ಫಾಸ್ಟ್ ತಿನ್ನಲೇಬೇಕು. ಆದರೆ ಇಂದು ಬಹಳಷ್ಟು ಮಂದಿ ಬೆಳಗ್ಗೆ ಕೊಬ್ಬು ಹೆಚ್ಚಾಗಿ ಇರುವ ಆಹಾರ, ಆಯಿಲ್ ಫುಡ್ಸ್ ಬ್ರೇಕ್‌ಫಾಸ್ಟ್ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅವು ಹೃದಯಕ್ಕೆ ಕೇಡು ಬಗೆಯುತ್ತವೆ ಎಂದು ಗ್ರಹಿಸುತ್ತಿಲ್ಲ. ಹಾಗಿದ್ದರೆ ಅಂತಹವರು ತಿನ್ನಬೇಕಾದ ಆಹಾರ ಯಾವುದು ಗೊತ್ತಾ..? ಓಟ್ಸ್.. ಹೌದು ಇದೇ. ನಿತ್ಯ ಬೆಳಗ್ಗೆ ಬ್ರೇಕ್‌ಫಾಸ್ಟ್‌ನಲ್ಲಿ ಓಟ್ಸ್ ತೆಗೆದುಕೊಂಡರೆ ಅದರಿಂದ ಅನೇಕ ಆರೋಗ್ಯ ಪ್ರಯೋಜನಗಳು, ಲಾಭಗಳು ಉಂಟಾಗುತ್ತವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ.

1. ಚರ್ಮ:
ನಿತ್ಯ ಬೆಳಗ್ಗೆ ಬ್ರೇಕ್‌ಫಾಸ್ಟ್‌ನಲ್ಲಿ ಓಟ್ ಮೀಲ್ ತೆಗೆದುಕೊಂಡರೆ ಚರ್ಮ ಆರೋಗ್ಯವಾಗಿ ಇರುತ್ತದೆ. ಎಗ್ಜಿಮಾ, ದದ್ದುಗಳು ಕಡ್ದಿಮೆಯಾಗುತ್ತವೆ. ಓಟ್ಸ್‌ನಲ್ಲಿ ಇರುವ ಹಲವು ಮುಖ್ಯವಾದ ವಿಟಮಿನ್‌ಗಳು, ಮಿನರಲ್ಸ್ ಚರ್ಮಕ್ಕೆ ಒಳಿತು ಮಾಡುತ್ತವೆ. ಅವುಗಳಲ್ಲಿ ಇರುವ ಜಿಂಕ್ ಚರ್ಮವನ್ನು ಕ್ಲೀನ್ ಮಾಡುತ್ತದೆ. ಅದರಲ್ಲಿ ಇರುವ ಟಾಕ್ಸಿನ್‌ಗಳನ್ನು, ಇತರೆ ವಿಷ ಪದಾರ್ಥಗಳನ್ನು ಹೊರಗಾಕುತ್ತದೆ. ಅದೇ ರೀತಿ ಚರ್ಮಕ್ಕೆ ಹೊಸ ಕಾಂತಿಯನ್ನು ನೀಡುತ್ತದೆ. ಓಟ್ಸ್‌ನಲ್ಲಿ ಇರುವ ಐರನ್ ಚರ್ಮದ ಕಣಗಳನ್ನು ಮೃದುವಾಗಿ ಬದಲಾಯಿಸುತ್ತದೆ. ಊತವನ್ನು ಕಡಿಮೆ ಮಾಡುತ್ತದೆ. ಗಾಯಗಳು, ಹುಣ್ಣುಗಳನ್ನು ಗುಣಪಡಿಸುತ್ತದೆ. ಓಟ್ಸ್‌ನಲ್ಲಿ ಇರುವ ಮೆಗ್ನಿಷಿಯಂ ರಕ್ತ ಸಂಚಲನೆಯನ್ನು ಉತ್ತಮಪಡಿಸುತ್ತದೆ. ಮೃತಕಣಗಳನ್ನು ತೊಲಗಿಸಿ ಹೊಸ ಚರ್ಮ ಉಂಟಾಗುವಂತೆ ಮಾಡುತ್ತದೆ.

2. ಸ್ನಾಯುಗಳು:
ಓಟ್ಸ್‌‍ನಲ್ಲಿ ಇರುವ ಪ್ರೊಟೀನ್‌ಗಳು ಸ್ನಾಯುಗಳಿಗೆ ಶಕ್ತಿಯನ್ನು ನೀಡುತ್ತವೆ. ಕೇವಲ 8 ಟೇಬಲ್ ಸ್ಫೂನ್ ಓಟ್ಸ್ ತಿಂದರೆ ಸಾಕು ನಮಗೆ ನಿತ್ಯ ಬೇಕಾಗುವಷ್ಟು ಪ್ರೋಟೀನ್‌ನಲ್ಲಿ ಶೇ.15ರಷ್ಟು ಸಿಗುತ್ತದೆ. ಅದೇ ರೀತಿ ವಿಮಮಿನ್ ಇ, ಆಂಟಿ ಆಕ್ಸಿಡೆಂಟ್‌ಗಳು, ಗ್ಲೂಟಮೈನ್‌ನಂತಹ ಪೋಷಕಾಂಶಗಳು ಓಟ್ಸ್‌ನಲ್ಲಿ ಸಮೃದ್ಧವಾಗಿವೆ. ಇವು ಸ್ನಾಯುಗಳನ್ನು ಉತ್ತಮಪಡಿಸುತ್ತವೆ. ಸ್ನಾಯುಗಳನ್ನು ಉತ್ತೇಜನ ಪಡಿಸುತ್ತವೆ.

3. ಆಂಟಿ ಆಕ್ಸಿಡೆಂಟ್:
ಓಟ್ಸ್‌ನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿ ಇವೆ. ಇವು ತುರಿಕೆ, ಊತ, ಹೈಬಿಪಿಯನ್ನು ಕಡಿಮೆ ಮಾಡುತ್ತವೆ. ಓಟ್ಸ್‌ನಲ್ಲಿ ಇರುವ ಬೀಟಾ ಗ್ಲೂಕಾನ್ ರಕ್ತದಲ್ಲಿ ಇರುವ ಗ್ಲೂಕೋಸ್ ಪ್ರಮಾಣವನ್ನು ಕಡಿಮೆಮಾಡುತ್ತದೆ. ಇದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಓಟ್ ಮೀಲ್‌ನಲ್ಲಿ ಆರೇಂಜ್ ಜ್ಯೂಸ್ ಬೆರೆಸಿಕೊಂಡು ತಿಂದರೆ ಹೆಚ್ಚಿನ ಲಾಭ ಉಂಟಾಗುತ್ತದೆ.

4. ಶಕ್ತಿ:
ಓಟ್ಸ್‌ನಲ್ಲಿ ಕಾರ್ಬೋಹೈಡ್ರೇಟ್ ಸಹ ಹೇರಳವಾಗಿ ಇರುತ್ತದೆ. ಇವು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತವೆ. ಇದರಿಂದ ನಿತ್ಯ ಚುರುಕಾಗಿ ಇರಬಹುದು. ಶೀಘ್ರ ಸುಸ್ತಾಗದಂತೆ ತಡೆಯುತ್ತದೆ.

5. ಸ್ಥೂಲಕಾಯ ಸಮಸ್ಯೆ:
ಓಟ್ಸ್‌ ನಿತ್ಯ ತಿನ್ನುತ್ತಿದ್ದರೆ ದೇಹದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಅಧಿಕ ತೂಕ ಕಡಿಮೆಯಾಗುತ್ತದೆ. ಓಟ್ಸ್ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಇದರಿಂದ ಹೆಚ್ಚು ಕ್ಯಾಲರಿಗಳನ್ನು ಕೊಡುವ ಆಹಾರ ತೆಗೆದುಕೊಳ್ಳದಂತಿರುತ್ತಾರೆ. ಆ ಮೂಲಕ ತೂಕ ಕಡಿಮೆಯಾಗುತ್ತಾರೆ.

6. ಕೊಲೆಸ್ಟರಾಲ್:
ಓಟ್ಸ್‌ನಲ್ಲಿ ಬೀಟಾ ಗ್ಲೂಕಾನ್ ಎಂಬ ಒಂದು ರೀತಿಯ ಫೈಬರ್ ಇರುತ್ತದೆ. ಇದು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟರಾಲನ್ನು ಕಡಿಮೆ ಮಾಡುತ್ತದೆ. ಓಟ್ಸ್‌ನಲ್ಲಿ ಇರುವ ಲಿನೋಲಿಕ್ ಆಸಿಡ್, ಫೈಬರ್‌ಗಳು ರಕ್ತದಲ್ಲಿ ಇರುವ ಟ್ರೈ ಗ್ಲಿಜರೈಡ್ಸ್, ಕೆಟ್ಟ ಕೊಲೆಸ್ಟರಾಲನ್ನು ಕಡಿಮೆ ಮಾಡುತ್ತವೆ. ರಕ್ತನಾಳಗಳನ್ನು ಸ್ವಚ್ಛಗೊಳಿಸುತ್ತವೆ. ಅವುಗಳಲ್ಲಿ ಕೊಬ್ಬು ಸಂಗ್ರಹವಾಗದಂತೆ ನೋಡುತ್ತವೆ. ಹಾರ್ಟ್ ಅಟ್ಯಾಕ್ ಬರದಂತೆ ನೋಡುತ್ತವೆ.

7. ಹೃದಯ ಸಮಸ್ಯೆಗಳು:
ಓಟ್ಸ್‌ನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಆರೋಗ್ಯಕರವಾದ ಕೊಬ್ಬು ಸಿಗುತ್ತದೆ. ಇವು ಹೃದಯದ ಕಣಗಳನ್ನು, ರಕ್ತ ಸಂಚಲನವನ್ನು ಕಾಪಾಡುತ್ತವೆ. ಅದೇ ರೀತಿ ಓಟ್ಸ್‌ನಲ್ಲಿ ಇರುವ ಆಂಟಿ ಆಕ್ಸಿಡೆಂಟ್‌ಗಳು ರಕ್ತನಾಳಗಳ ಗೋಡೆಗಳು ಡ್ಯಾಮೇಜ್ ಆಗದಂತೆ ನೋಡುತ್ತವೆ. ಇದರಿಂದ ಹೃದಯ ಕಾಯಿಲೆಗಳು ಬರಲ್ಲ.

8. ಜೀರ್ಣ ಸಮಸ್ಯೆಗಳು:
ನಿತ್ಯ ನಾವು 25 ರಿಂದ 35 ಗ್ರಾಮ್ ಪ್ರಮಾಣದಲ್ಲಿ ಫೈಬರ್ ತೆಗೆದುಕೊಳ್ಳಬೇಕೆಂದು ನ್ಯೂಟ್ರಿಷನ್‌ಗಳು ಸೂಚಿಸುತ್ತಿದ್ದಾರೆ. ಅದು ನಮಗೆ ಓಟ್ ಮೀಲ್ ಮೂಲಕ ಸಿಗುತ್ತದೆ. ಆದಕಾರಣ ನಿತ್ಯ ಓಟ್ಸ್ ತಿಂದರೆ ಅದರಿಂದ ದೇಹಕ್ಕೆ ಫೈಬರ್ ಪುಷ್ಕಳವಾಗಿ ಸಿಗುತ್ತದೆ. ಅದು ಜೀರ್ಣ ವ್ಯವಸ್ಥೆಯನ್ನು ಉತ್ತಮಪಡಿಸುತ್ತದೆ. ಗ್ಯಾಸ್, ಅಸಿಡಿಟಿ, ಮಲಬದ್ಧತೆ ಇನ್ನಿತರೆ ಸಮಸ್ಯೆಗಳು ನಿವಾರಣೆಯಾಗುತ್ತವೆ.

Comments are closed.