ಕರಾವಳಿ

ಉಡುಪಿ: ಮೂವರು ಹಾಲಿ ಶಾಸಕರಿಗೆ ‘ಕೈ’ ಟಿಕೆಟ್: ಕುಂದಾಪುರಕ್ಕೆ ರಾಕೇಶ್ ಮಲ್ಲಿ, ಕಾರ್ಕಳಕ್ಕೆ ಗೋಪಾಲ ಭಂಡಾರಿ

Pinterest LinkedIn Tumblr

ಉಡುಪಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕಾಪು, ಕಾರ್ಕಳ, ಕುಂದಾಪುರ ಹಾಗೂ ಬೈಂದೂರು ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿದ್ದು ಸದ್ಯ ಕಾರ್ಕಳ ಹಾಗೂ ಕುಂದಾಪುರ ಹೊರತುಪಡಿಸಿ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಶಾಸಕರಿದ್ದಾರೆ. ಅವರಿಗೆ ಟಿಕೆಟ್ ಪಕ್ಕಾ ಆಗಿದೆ.

ಉಡುಪಿಯಿಂದ ಹಾಲಿ ಶಾಸಕ ಪ್ರಮೋದ್ ಮಧ್ವರಾಜ್ ಕಣಕ್ಕಿಳಿಯಲಿದ್ದು, ಕಾಪುವಿನಿಂದ ವಿನಯಕುಮಾರ್ ಸೊರಕೆ ಹಾಗೂ ಬೈಂದೂರು ಕ್ಷೇತ್ರದಿಂದ ಶಾಸಕ ಕೆ. ಗೋಪಾಲ ಪೂಜಾರಿ ಅಖಾಡಕ್ಕೆ ಇಳಿಯುವುದು ಗ್ಯಾರೆಂಟಿಯಾಗಿದೆ.

ಕುಂದಾಪುರ ಕ್ಷೇತ್ರಕ್ಕೆ ರಾಕೇಶ್ ಮಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಇಂಟಕ್ ರಾಜ್ಯಾಧ್ಯಕ್ಷ್ಗರಾಗಿರುವ ರಾಕೇಶ್ ಮಲ್ಲಿ ಸಂಭವನೀಯ ಅಭ್ಯರ್ಥಿಯೆಂದು ಕಳೆದ ಕೆಲವಾರು ತಿಂಗಳ ಹಿಂದೆಯೇ ಮಾತುಗಳು ಕೇಳಿಬಂದಿತ್ತು. ಅದಕ್ಕೆ ಪೂರಕವಾಗಿ ಬಂಟ್ವಾಳ ಮೂಲದ ರಾಕೇಶ್ ಮಲ್ಲಿ ಕುಂದಾಪುರದಲ್ಲಿ ವಾಸ್ತವ್ಯ ಹೂಡಿದ್ದಲ್ಲದೇ ಇಲ್ಲಿಯೇ ಪ್ರಚಾರ ಕಾರ್ಯವನ್ನು ಆರಂಭಿಸಿ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಸಂಘಟನೆಯಲ್ಲಿ ತೊಡಗಿದ್ದರು. ಕಳೆದ ಬಾರಿ ಅಭ್ಯರ್ಥಿ ಹಾಗೂ ಹಾಇ ಕುಂದಾಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮೊದಲಾದವರ ನೇತ್ರತ್ವ ಇವರ ಪ್ರಚಾರ ಕರ್ಯ ಅಬ್ಬರವಾಗಿಯೇ ನಡೆಯುತ್ತಿದೆ.

ಇನ್ನು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರಾಲ್ಲಿ ಈ ಹಿಂದೆ ಒಂದಷ್ಟು ಗೊಂದಲಗಳಿತ್ತು. ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ, ಉದ್ಯಮಿ ಉದಯಕುಮಾರ್ ಶೆಟ್ಟಿ ಹಾಗೂ ಮಾಜಿ ಶಾಸಕ ಗೋಪಾಲ ಭಂಡಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದು ಭಿನ್ನಮತ ಶಮನಕ್ಕೆ ಕಾಂಗ್ರೆಸ್ ವರಿಷ್ಟರು ಬಹಳಷ್ಟು ಪ್ರಯತ್ನ ನಡೆಸಿದ್ದರು. ಸದ್ಯ ಎಲ್ಲವೂ ಒಂದು ಹಂತದಲ್ಲಿ ಸರಿಯಾಗಿದ್ದು ಗೋಪಾಲ ಭಂಡಾರಿ ಅವರಿಗೆ ಟಿಕೆಟ್ ಲಭಿಸಿದೆ.

Comments are closed.