ಕರಾವಳಿ

ದೇಹಕ್ಕೆ ಸೂರ್ಯನ ಹೊಡೆತದಿಂದ ಪಾರಾಗಲು ಈ ಜ್ಯೂಸ್‌ಗಳು ಸಹಕಾರಿ

Pinterest LinkedIn Tumblr

ಈಗ ಹೆಜ್ಜೆ ಹೊರಗಿಟ್ಟರೆ ನೆತ್ತಿ ಸುಡುವ ಬಿಸಿಲು. ಸನ್ ಸ್ಟ್ರೋಕ್ ಕಾಮನ್ ಎಂಬಂತಾಗಿದೆ. ಸೂರ್ಯನ ಹೊಡೆತಕ್ಕೆ ತಲೆ ಸುತ್ತಿ ಬೀಳುವುದು, ತುಂಬಾ ಬಳಲುವುದು ಆಗುತ್ತಿರುತ್ತದೆ. ಇದನ್ನು ತಡೆಗಟ್ಟಲು ಹಲವಾರು ಜ್ಯೂಸ್‌ಗಳು ನಮಗೆ ಸಹಕಾರಿ. ಹಾಗಿದ್ದರೆ ಅವು ಏನು ಎಂದು ಈಗ ನೋಡೋಣ.

1 ಆಮ್ ಪನ್ನಾ:
ಹಸಿ ಮಾವಿನಕಾಯಿ, ಉಪ್ಪು, ಕರಿ ಮೆಣಸು, ಜೀರಿಗೆ ಪುಡಿ ಮತ್ತು ನೀರು ಹಾಕಿ ಮಾಡುವ ಈ ಪಾನೀಯ ತುಂಬಾ ರುಚಿಯಾಗಿರುತ್ತದೆ. ದೇಹದ ಉಷ್ಣಾಂಶ ಕಡಿಮೆ ಮಾಡುವಲ್ಲಿಯೂ ಸಹಕಾರಿ.

2.ನಿಂಬು ಪಾನೀಯ:
ಪ್ರತಿ ದಿನಾ ತಪ್ಪದೆ ನಿಂಬೂ ಪಾನೀಯ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ, ದೇಹದ ಉಷ್ಣಾಂಶ ಹೆಚ್ಚಾಗದಂತೆ ತಡೆಯುವಲ್ಲಿಯೂ ಸಹಕಾರಿ.

3 ಎಳನೀರು:
ಬೇಸಿಗೆಯಲ್ಲಿ ಪ್ರತೀದಿನಾ ಒಂದು ಎಳನೀರು ಕುಡಿಯುವುದು, ಇಲ್ಲದಿದ್ದರೆ ವಾರಕ್ಕೆ ಕನಿಷ್ಠ 3 ಎಳನೀರು ಕುಡಿಯುವುದರಿಂದ ಆರೋಗ್ಯ ಕಾಪಾಡುವಲ್ಲಿ ಸಹಾಯಮಾಡುತ್ತದೆ.

4.ಈರುಳ್ಳಿ:
ಈರುಳ್ಳಿಗೆ ದೇಹವನ್ನು ತಂಪಾಗಿಸುವ ಗುಣವಿದೆ. ಸನ್‌ಸ್ಟ್ರೋಕ್‌ಗೆ ಉತ್ತಮ ಮನೆ ಮದ್ದು ಕೂಡ ಹೌದು. ಈರುಳ್ಳಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿ ಈರುಳ್ಳಿಯನ್ನು ಸಲಾಡ್‌ನಲ್ಲಿ ಬಳಸುವುದರಿಂದ ಹೆಚ್ಚು ಪ್ರಯೋಜನಕಾರಿ.

5.ಮಜ್ಜಿಗೆ:
ಇದು ಸನ್‌ಸ್ಟ್ರೋಕ್‌ ತಡೆಗಟ್ಟಲು ಸಹಾಯ ಮಾಡುತ್ತದೆ. ಬಿಸಿಲನ ತಾಪವನ್ನು ತಡೆಯುವ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ.

6.ಪ್ಲಮ್ಸ್:
ಇದರಲ್ಲಿ ಆಯಂಟಿ ಆಕ್ಸಿಡೆಂಟ್ ಅಧಿಕವಿರುವುದರಿಂದ ಸನ್‌ಸ್ಟ್ರೋಕ್‌ ತಡೆಯುತ್ತದೆ.

7.ಬೇಲದ ಹಣ್ಣು:
ಬೆಲ್ಲದ ಹಣ್ಣಿನ ಜ್ಯೂಸ್‌ ಕೂಡ ಸನ್‌ಸ್ಟ್ರೋಕ್ ತಡೆಯುವಲ್ಲಿ ಸಹಕಾರಿ.

Comments are closed.