ಕರಾವಳಿ

ಮಕ್ಕಳ ಆರೋಗ್ಯಕ್ಕೆ ಚಾಕೊಲೇಟ್ ಎಷ್ಟು ಒಳ್ಳೆಯದು? ಮಿತಿ ದಾಟಿದರೆ ಅದು ಏನಾಗುತ್ತದೆ ?

Pinterest LinkedIn Tumblr

ಚಾಕೊಲೇಟ್ ಮೌಸ್ಸ್, ಚಾಕೊಲೇಟ್ ಪುಡಿಂಗ್, ಚಾಕೊಲೇಟ್ ಬ್ರೌನಿಗಳು, ಚಾಕೊಲೇಟ್ ಚಿಪ್ ಕುಕೀಸ್, ಚಾಕೊಲೇಟ್ ಕೇಕ್ ಯಾವುದೇ ಚಾಕೊಲೇಟ್ ಉತ್ಪನ್ನವಾಗಿರಲಿ – ಇಷ್ಟಪಡದವರು ಯಾರು? ಅರೆ ಸಿಹಿಯಾದ ಕೋಕೋವಿನ ಸೇವನೆಯು ಸಂತೋಷಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಅತ್ಯಂತ ಅಪ್ರಾಮಾಣಿಕವಾದ ಚಿಕಿತ್ಸೆಯಾಗಿದೆ. ಆದ್ದರಿಂದ, ಆರೋಗ್ಯಕ್ಕೆ ಎಷ್ಟು ಚಾಕೊಲೇಟ್ ಒಳ್ಳೆಯದು? ಮಿತಿ ದಾಟಿದರೆ ಅದು ಏನಾಗುತ್ತದೆ? ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿವೆ.

ಚಾಕೋಲೇಟ್ ಎಂದರೇನು ?
ಚಾಕೊಲೇಟ್ ಮುಖ್ಯವಾಗಿ ಕೋಕೋ ಬೆಣ್ಣೆ ಮತ್ತು ವಿಭಿನ್ನ ಪ್ರಮಾಣದ ಕೊಕೋದಿಂದ ತಯಾರಿಸಲಾಗುತ್ತದೆ. ಕಹಿ ಚಾಕೊಲೇಟ್ ಎಂದು ಕರೆಯಲ್ಪಡುವ ಬೇಕಿಂಗ್ ಚಾಕೊಲೇಟ್‍ಗಳು, ಕೊಕೊ ಬೆಣ್ಣೆ, ಬೆಣ್ಣೆ ಮತ್ತು ಯಾವುದೇ ಪ್ರಮಾಣದ ಸಕ್ಕರೆಗಳಿಲ್ಲದೆ ತಯಾರಿಸಲಾಗುತ್ತದೆ. ಸಿಹಿ ಚಾಕೊಲೇಟುಗಳನ್ನು ಕೋಕೋ, ಕೊಕೊ ಬೆಣ್ಣೆ, ತರಕಾರಿ ತೈಲಗಳು ಮತ್ತು ಸಕ್ಕರೆಗಳಿಂದ ತಯಾರಿಸಲಾಗುತ್ತದೆ. ಹಾಲಿನ ಪುಡಿಯನ್ನು ಬೆರೆಸಿ ತಯಾರು ಮಾಡಲಾಗುವ ಬಿಳಿ ಚಾಕೋಲೇಟುಗಳು ಕೋಕೋ ಬೆಣ್ಣೆ, ಸಕ್ಕರೆ ಮತ್ತು ಹಾಲು ಹೊಂದಿರುತ್ತವೆ.ಆದರೆ, ಇದು ಕೊಕೊವನ್ನು ಸೇರಿಸಲಾಗಿಲ್ಲ.

ಮಗು ಎಷ್ಟು ಪ್ರಮಾಣದ ಚಾಕೋಲೇಟುಗಳನ್ನು ಸೇವಿಸುವುದು ಒಳ್ಳೆಯದು ?
ಮಕ್ಕಳು ಚಾಕೊಲೇಟುಗಳ ದೊಡ್ಡ ಅಭಿಮಾನಿಗಳು. ನಿಮ್ಮ ಮಗುವಿನ ಚಾಕೊಲೇಟ್ ಸೇವನೆಯನ್ನು ನೀವು ಮೇಲ್ವಿಚಾರಣೆ ಮಾಡಲು ಎಷ್ಟು ಶ್ರಮಿಸಿದರೂ, ತಮ್ಮ ಪ್ರೀತಿಯ ಚಾಕೊಲೇಟುಗಳನ್ನು ಸೇವಿಸದಂತೆ ತಡೆಯಲು ಸಾಧ್ಯವಿಲ್ಲ. ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮರು ಅಥವಾ ಸ್ನೇಹಪರ ನೆರೆಹೊರೆಯವರು ಮಕ್ಕಳಿಗೆ ಚಾಕೊಲೇಟುಗಳ ಸುರಿಮಳೆ ಹರಿಸುತ್ತಾರೆ. ಕೆಲವೊಮ್ಮೆ ಅಡಕವಾಗಿರುವ ಚಾಕೊಲೇಟ್‍ಗಳ ಪ್ರಮಾಣವನ್ನು ಅರಿಯದೆ ಚಾಕೊಲೇಟ್ ಪಾನೀಯಗಳನ್ನು ನೀವೇ ನೀಡಬಹುದು. ಸ್ನೇಹಿತರ ಹುಟ್ಟುಹಬ್ಬ ದಿನಾಚರಣೆಯಂದು ಚಾಕೊಲೇಟ್ ಕೇಕ್, ಚಾಕೋಲೇಟ್ ಬರ್ಫಿ, ಅಥವಾ ಚಾಕೊಲೇಟ್ ಐಸ್ ಕ್ರೀಂಗಳನ್ನು ಸೇವಿಸಬಾರದೆಂದು ನೀವೆಷ್ಟೇ ನಿರ್ಬಂಧ ಹೇರಿದರೂ ,ಅದು ನೀರ ಮೇಲಿನ ಗುಳ್ಳೆ ಆಗಬಹುದು.ಮಕ್ಕಳು ತಿನ್ನಲಿ ಎಂದು ನೀವು ಭಾವಿಸುವುದಕ್ಕಿಂತಲೂ ಹೆಚ್ಚು ಪ್ರಮಾಣದ ಚಾಕೊಲೇಟ್ಗಳನ್ನು ಅವರು ಸೇವಿಸಿರಬಹುದು ಎನ್ನುವುದಂತೂ ಕಹಿ ಸತ್ಯ.

ಇತ್ತೀಚಿನ ಅಧ್ಯಯನಗಳು ಚಾಕೊಲೇಟ್ಗಳನ್ನು ಮಿತಿಯಲ್ಲಿ ಸೇವಿಸಿದರೆ,(ನಿಖರವಾಗಿ ಹೇಳುವುದಾದರೆ, ೬.೭ ಗ್ರಾಂ) ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದು ಮತ್ತು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯದ ಬಹುಪಾಲು ಲಾಭಗಳನ್ನು ಕಳೆದುಕೊಳ್ಳಬಹುದು ಎಂದು ತಿಳಿಸಿದೆ. ಚಾಕೋಲೇಟ್ ಎಂದೊಡನೆ ಪ್ರಾಣ ಬಿಡುವ ಮಕ್ಕಳಿಗೆ ಚಾಕೋಲೇಟ್‍ಗಳ ಮಿತಿಯಾದ ಸೇವನೆಯು ಖಂಡಿತ ಅಸಾಧ್ಯ.ಸದಾ ಚಟುವಟಿಕೆಯಿಂದಿರುವ ಮಕ್ಕಳು, ಹೆಚ್ಚಿನ ಪ್ರಮಾಣದ ಚಾಕೊಲೇಟ್ ಸೇವನೆಯಿಂದಾಗಿ ಎದುರಾಗುವ ಕೆಲವೊಂದು ಅಡ್ಡಪರಿಣಾಮಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿದ್ದರೂ ಸಹ,ಕೇವಲ ಚಾಕಲೇಟ್‍ಗಳಿಂದ ತಮ್ಮ ಹೊಟ್ಟೆ ತುಂಬುವುದು ಖಂಡಿತಾ ಯೋಗ್ಯವಾದ ಸಲಹೆಯಾಗಿಲ್ಲ.

ವಯಸ್ಕರರು ಕೂಡಾ ಚಾಕೊಲೇಟುಗಳಿಗೆ ಮನಸೋತು, ಅನೇಕ ಚಾಕೊಲೇಟುಗಳನ್ನು ಸೇವಿಸಿದರೆ ಏನಾಗುತ್ತದೆ?

ಶರೀರ ತೂಕದ ಹೆಚ್ಚಳ:
ಇತರ ಜಂಕೀಸ್ ಜೊತೆಗೆ, ಚಾಕೊಲೇಟ್ ಸೇವನೆ ಕೂಡ ತೂಕ ಹೆಚ್ಚಳಕ್ಕೆ ಕಾರಣಕರ್ತ. ಇದು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಹೊಂದಿದ್ದು, ಅತಿಯಾದ ಸೇವನೆಯು ಶರೀರ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಮಕ್ಕಳು ತಮ್ಮ ನಿರಂತರ ಚಟುವಟಿಕೆಯ ಮಟ್ಟದಿಂದಾಗಿ ಕ್ಯಾಲೊರಿಗಳನ್ನು ವೇಗವಾಗಿ ಕರಗಿಸಿಕೊಳ್ಳಬಲ್ಲರಾದರೂ, ವಯಸ್ಕರು ತಮ್ಮ ಶರೀರದಲ್ಲೇ ಸಂಗ್ರಹ ಮಾಡಿಕೊಳ್ಳುತ್ತಾರೆ. ಪರಿಣಾಮವಾಗಿ ಶರೀರದ ತೂಕ ಹೆಚ್ಚಳ ಅಥವಾ ಅಧಿಕ ತೂಕವಲ್ಲದೇ; ಹೃದ್ರೋಗಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದಾಗ್ಯೂ, ಮಿತಿಯಲ್ಲಿರುವ ಚಾಕೋಲೇಟ್ ಸೇವನೆಯು ಒಳ್ಳೆಯದು. ಮಿತಿಯಾಗಿ ಚಾಕೊಲೇಟ್ ತಿನ್ನುವ ಮೂಲಕ, ನಿಮ್ಮ ತೂಕವನ್ನು ನಿಯಂತ್ರಿಸಬಹುದು ಮತ್ತು ನಿಮ್ಮ ಚಾಕೊಲೇಟ್ ಸೇವನೆಯ ಹಂಬಲವನ್ನೂ ಪೂರೈಸಬಹುದು.

ಸಕ್ಕರೆಯಿಂದುಂಟಾಗುವ ಸಮಸ್ಯೆಗಳು:
ಚಾಕೋಲೇಟ್‍ನ ಕಹಿ ರುಚಿಯನ್ನು ಸರಿದೂಗಿಸಲು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಗಳನ್ನು ಬಳಸುತ್ತಾರೆ. ಆದರೆ ಹೆಚ್ಚಿನ ಪ್ರಮಾಣದ ಸಕ್ಕರೆಯು ವಿವಿಧ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯು ವಸಡು ರೋಗಗಳು ಮತ್ತು ಕುಳಿಗಳಂತಹ ಹಲ್ಲಿನ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಮಧುಮೇಹದ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು.

ಜಠರಗರುಳಿನ ಅಸ್ವಸ್ಥತೆ:
ಚಾಕೊಲೇಟ್ನಲ್ಲಿ ಅಡಕವಾಗಿರುವ ಕೆಫೀನ್ ಒಂದು ಕರುಳಿನ ಉತ್ತೇಜಕವಾಗಿದೆ. ಇದು ಕರುಳಿನ ರೋಗಗಳನ್ನು ಇನ್ನಷ್ಟು ಹದಗೆಡಿಸಬಹುದು. ಇದು ಎದೆಯುರಿ, ಆಮ್ಲ ಹಿಮ್ಮುಖ ಅಥವಾ ಅಸ್ತಿತ್ವದಲ್ಲಿರುವ ಹೊಟ್ಟೆಯ ಹುಣ್ಣು ಉರಿಯೂತವನ್ನು ಅಥವಾ ಅಲ್ಸರನ್ನು ಉಂಟುಮಾಡಬಹುದು. ಚಾಕೋಲೇಟುಗಳು ಉತ್ತಮವಾದರೂ, ನೀವು ಪೆಪ್ಟಿಕ್ ಹುಣ್ಣು ಕಾಯಿಲೆ ಅಥವಾ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯಿಂದ ಬಳಲುತ್ತಿದ್ದರೆ, ಚಾಕೋಲೇಟ್ ಸೇವನೆಯು ನಂತರದ ವಿಷಾದಕ್ಕೆ ಕಾರಣವಾಗಬಹುದು.

ಹೆಚ್ಚಿನ ಪೊಟಾಸಿಯಂ ಅಂಶಗಳು:
2 ಔನ್ಸ್ ಚಾಕೋಲೇಟ್ ತುಂಡು 200 ಮಿ.ಗ್ರಾಂಗಿಂತಲೂ ಹೆಚ್ಚು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಇದರಿಂದ ಆರೋಗ್ಯ ವ್ಯಕ್ತಿಗೆ ಸಮಸ್ಯೆಯಾಗಿರದಿದ್ದರೂ, ಮೂತ್ರಪಿಂಡದ ಕಾಯಿಲೆ ಅಥವಾ ಪೊಟ್ಯಾಸಿಯಮ್ ಸೇವನೆಯ ಮೇಲೆ ಹತೋಟಿಯ ಅಗತ್ಯವಿರುವ ರೋಗಿಯಾಗಿದ್ದರೆ, ಚಾಕೊಲೇಟ್ ಸೇವನೆಯು ನಿಮಗೆ ಖಂಡಿತಾ ಸರಿಯಾದ ಆಯ್ಕೆಯಲ್ಲ. ಇದು ರಕ್ತದಲ್ಲಿನ ಖನಿಜ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಆರೋಗ್ಯ ಅಪಾಯಗಳನ್ನು ಹೆಚ್ಚಿಸುತ್ತದೆ. ಅತಿಯಾದರೆ ಅಮೃತವೂ ವಿಷವಲ್ಲವೇ ?

Comments are closed.