ಕರಾವಳಿ

ರುಚಿಯನ್ನಷ್ಟೆ ಅಲ್ಲದೆ ಹಲವು ಪೋಷಕಾಂಶನೊಳಗೊಂಡ ಈ ಹಣ್ಣಿನ ಗುಣ ಬಲ್ಲಿರಾ…?

Pinterest LinkedIn Tumblr

ಹಣ್ಣುಗಳ ರಾಜ ಎಂದೇ ಪ್ರಸಿದ್ದಿ ಯಾಗಿರುವ ಮಾವಿನ ಹಣ್ಣು. ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಚಪ್ಪರಿಸಿಕೊಂಡು ತಿನ್ನುವ ಹಣ್ಣು ಇದು. ಈಗ ಈ ಮಾವುಗಳ ಸೀಸನ್ ಕೂಡ ಶುರು ಆಗಿದೆ ಕೆಂಪು ಮಿಶ್ರಿತ ಕೇಸರಿ ಬಣ್ಣದ ಮಾವಿನ ಹಣ್ಣಿನ ತಳಿಗಳು ಹಲವು. ವಿವಿಧ ಹೆಸರುಗಳಿಂದ ಮಾವು ತನ್ನದೆ ಪ್ರೌಢತೆಯನ್ನು ಪಡೆದುಕೊಂಡಿದೆ. ಬರಿ ರುಚಿಯನ್ನಷ್ಟೆ ಅಲ್ಲದೆ ಹಲವು ಪೋಷಕಾಂಶಗಳನ್ನು ಕೂಡ ಹೊಂದಿದೆ.

ಮಾವಿನ ಹಣ್ಣಿನಲ್ಲಿ ನೀರು. ಪ್ರೋಟೀನ್ ಕೊಬ್ಬು. ಕಾರ್ಬೋಹೈದ್ರೇಟ್. ನಾರು. ಸುಣ್ಣ. ರಂಜಕ. ಪೊಟ್ಯಾಸಿಯಂ. ಸೋಡಿಯಂ. ವಿಟಮಿನ್ ಎ. ವಿಟಮಿನ್ ಬಿ. ನಿಯಾಚಿನ್ .ಕ್ಯಾಲರೀಗಳು . ಅಧಿಕ ಪ್ರಮಾಣದಲ್ಲಿ ಇದೆ.

ಮಾವಿನ ಹಣ್ಣನ್ನು ತಿನ್ನುವುದರಿಂದ ಆಗುವ ಲಾಭಗಳು.
ಮಾವಿನ ಹಣ್ಣಿನಲ್ಲಿ ವಿಟಮಿನ್‌ ಸಿ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ವಿಟಮಿನ್‌ ಕೆ ಮತ್ತು ವಿಟಮಿನ್‌ ಇ ಅಂಶಗಳು ಚರ್ಮದ ಕಾಂತಿ ಹೆಚ್ಚಿಸುತ್ತವೆæ. ನಿಯಾಸಿನ್‌ ಅಂಶ ಸಾಕಷ್ಟು ದೊರಕುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ.

ಮಾವಿನ ಹಣ್ಣುತಿಂದರೆ, ಕಣ್ಣುಗಳ ತೊಂದರೆ ನಿವಾರಣೆ. ಶರೀರದ ನಿಶಕ್ತಿ ದೂರವಾಗಿ ನವ ಚೈತನ್ಯ ಉಂಟಾಗುತ್ತದೆ. ಲೈಂಗಿಕ ಶಕ್ತಿ. ಜ್ಞಾನಪಕ ಶಕ್ತಿ ವೃದ್ಧಿ ಆಗುತ್ತದೆ. ಮಲಬದ್ಧತೆ ನಿವಾರಣೆಗಾಗಿ ಹಣ್ಣು ತಿನ್ನಿ. ಮಾವಿನ ಕಾಯಿ ತಿನ್ನುವುದರಿಂದ ಕಾಲರ, ಆಮಶಂಕೆ ರೋಗಗಳನ್ನು ನಿರೋಧಿಸಬಲ್ಲ ಶಕ್ತಿ ಈ ಹಣ್ಣಿಗಿದೆ.

ಮಾವಿನ ಹಣ್ಣಿನಲ್ಲಿ ಬೆಣ್ಣೆ ಅಥವಾ ಬಾದಾಮಿಯಲ್ಲಿರುವುದಕ್ಕಿಂತ ಅಧಿಕ ನ್ಯೂಟ್ರಿಯಸ್‌ ಇರುತ್ತದಂತೆ. ಇದು ನಿಮ್ಮ ಶರೀರದಲ್ಲಿನ ಮೆದುಳು, ಹೃದಯ, ಮಾಂಸಖಂಡಗಳು ಸೇರಿದಂತೆ ಎಲ್ಲಾ ನರಗಳನ್ನು ಬಲಶಾಲಿಗೊಳಿಸುವುದಲ್ಲದೆ, ಉತ್ತೇಜಿಸುತ್ತದೆ.
ಕ್ಯಾನ್ಸರ್‌ನ್ನು ದೂರವಿಡುತ್ತದೆ.

ಮಾವಿನಹಣ್ಣಿನಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು, ಮತ್ತು ಪಾಲಿ-ಫಿನೋಲಿಕ್ ಫ್ಲವೊನೈಡ್‌ಗಳು ಅಧಿಕ ಇರುತ್ತದೆ. ಇದರಲ್ಲಿರುವ ಗುಣಗಳು ಕೊಲೊನ್, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.

ಮಾವಿನಹಣ್ಣಿನಲ್ಲಿ ಪೋಟ್ಯಾಶಿಯಮ್‌ ಅಧಿಕವಾಗಿ ಇರುತ್ತದೆ ಇದು ರಕ್ತದ ಒತ್ತಡ ಹಾಗೂ ಹೃದಯದ ಬಡಿತವನ್ನು ಕಂಟ್ರೋಲ್‌ನಲ್ಲಿಡುತ್ತದೆ.

ಮಾವಿನ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿ ಇರುವುದರಿಂದ ಮಲಬದ್ಧತೆಗೆ ಸಂಭಂದಪಟ್ಟ ಕೊರತೆಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಹೀಗಾಗಿ ಇದು ದೊಡ್ಡಕರುಳಿನ ಒಳಚರ್ಮವನ್ನು ಕಾಪಾಡುವುದಲ್ಲದೆ ಯಾವುದೇ ಸೋಂಕುಗಳು ಬರುವುದಂತೆ ತಡೆಯುತ್ತದೆ.

ಮಾವಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಬಹಳ ಪ್ರಯೋಜನಕಾರಿ. ಇದು ದೌರ್ಬಲ್ಯ, ವಾಕರಿಕೆ ಮತ್ತು ತಲೆತಿರುಗುವ ಲಕ್ಷಣಗಳನ್ನು ಕಡಿಮಾಡಲು ಸಹಾಯವಾಗುತ್ತದೆ.

ಮಾವಿನ ಹಣ್ಣಿನಲ್ಲಿ ಕ್ಯಾಲ್ಶಿಯಮ್ ಮತ್ತು ಇತರ ಮಿನರಲ್‎ಗಳಾದ ಫಾಸ್ಫರಸ್ ಮತ್ತು ಕಬ್ಬಿಣವನ್ನು ಹೊಂದಿದ್ದು ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲಯುತವಾಗಿರಿಸುವಲ್ಲಿ ಇದು ಸಹಕಾರಿಯಾಗಿದೆ.

ಇದು ಜೀರ್ಣಕ್ರಿಯೆಯನ್ನು ಸುಲಭವಾಗಿಸಿ ಚಯಾಪಚಯ ಪ್ರಮಾಣವನ್ನು ಹೆಚ್ಚಿಸಿ ತೂಕವನ್ನು ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ. ಕ್ಷಾರಿಯ ಸಮತೋಲನವನ್ನು ನಿರ್ವಹಿಸುತ್ತದೆ.

ಮಾವಿನ ಹಣ್ಣಿನಲ್ಲಿರುವ ಮ್ಯಾಲಿಕ್ ಆಮ್ಲ ಮತ್ತು ಸಿಟ್ರಿಕ್ ಆಮ್ಲ ಹೊಟ್ಟೆಯಲ್ಲಿನ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.

ಮಾವಿನ ಹಣ್ಣು ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಲವ್ ಫ್ರೂಟ್ಸ್ ಎಂದು ಕರೆಯುತ್ತಾರೆ.

ನೀವು ಮಾವಿನ ಹಣ್ಣನ್ನು ತಪ್ಪದೆ ಸೇವಿಸಿ ಅದರ ಉಪಯೋಗ ಪಡೆದುಕೊಳ್ಳಿ.

Comments are closed.