ಕ್ರೀಡೆ

ಕೋಲ್ಕತ್ತಾ ವಿರುದ್ಧ ಚೆನ್ನೈಗೆ 5 ವಿಕೆಟ್ ಗಳ ರೋಚಕ ಗೆಲುವು; ಸ್ಯಾಮ್ ಬಿಲ್ಲಿಂಗ್ಸ್ ಆಕರ್ಷಕ ಅರ್ಧಶತಕ

Pinterest LinkedIn Tumblr

ಚೆನ್ನೈ: ಚೆನ್ನೈ ನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಗಳ ಜಯ ದಾಖಲಿಸಿದೆ.

ಶೇನ್ ವಾಟ್ಸನ್ ಹಾಗೂ ಅಂಬಟಿ ರಾಯುಡು ಅವರುಗಳ ಭರ್ಜರಿ ಜತೆಯಾಟದ ನೆರವಿನೊಡನೆ ಬಿರುಸಿನ ಆಟವಾಡಿ ರೋಚಕ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಕೋಲ್ಕತ್ತಾ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 202 ರನ್‌ ಕಲೆಹಾಕಿತ್ತು. ನೈಟ್‌ ರೈಡರ್ಸ್‌ ಪರವಾಗಿ ಆಂಡ್ರೆ ರಸ್ಸೆಲ್ (88*) ಅದ್ಭುತ ಆಟ ಪ್ರದರ್ಶಿಸಿದ್ದರು.

ಇನ್ನು ಸುನಿಲ್ ನರೈನ್(12 ), ಕ್ರಿಸ್ ಲಿನ್,(22 ), ರಾಬಿನ್ ಉತ್ತಪ್ಪ(29), ನಿತೀಶ್ ರಾಣಾ (16), ದಿನೇಶ್ ಕಾರ್ತಿಕ್ (26), ರನ್ ಗಳಿಸಿದ್ದರೆ ರಿಂಕು ಸಿಂಗ್ ಹಾಗೂ ಟಾನ್ ಕ್ಯೂರನ್ ತಲಾ ಎರಡು ರನ್ ಗಳಿಸಿದ್ದರು.

ಚೆನ್ನೈ ನ ಪರ ಶೇನ್ ವ್ಯಾಟ್ಸನ್ 2 ವಿಕೆಟ್ ಪಡೆದರೆ ಹರ್ಭಜನ್ ಸಿಂಗ್, ರವೀಂದ್ರ ಜಡೇಜಾ, ಎಸ್. ಠಾಕೂರ್ ತಲಾ ಒಂದೊಂದು ವಿಕೆಟ್ ಕಿತ್ತು ತಂಡಕ್ಕೆ ನೆರವಾದರು.

ಒಟ್ಟಾರೆ 203 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಚೆನ್ನೈ ಸಹ ಉತ್ತಮ ಪ್ರಾರಂಭ ಕಂಡಿತ್ತು. ಶೇನ್ ವಾಟ್ಸನ್(42), ಅಂಬಟಿ ರಾಯುಡು(39) ಜತೆಯಾಗಿ ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲೇ 75 ರನ್‌ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದರು.

10 ನೇ ಓವರ್ ಸಮಯಕ್ಕೆ ಚೆನ್ನೈ 90 ರನ್ ಗಳಿಸಿತ್ತು. ಆಗ ಕ್ರೀಸ್ ಗಿಳಿದ ಸುರೇಶ್ ರೈನಾ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ತುಸು ನಿಧಾನಗತಿಯ ಆಟ ಪ್ರದರ್ಶಿಸಿದ್ದರು. ರೈನಾ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ ಧೋನಿ 28 ಎಸೆತಗಳಲ್ಲಿ 25 ರನ್ ಗಳಿಸಿ ಪೆವಿಲಿಯನ್ ಹಾದಿ ತುಳಿದರು.

ಆಗ ಬ್ಯಾಟಿಂಗ್ ಪ್ರಾರಂಭಿಸಿದ್ದ ಸ್ಯಾಮ್ ಬಿಲ್ಲಿಂಗ್ಸ್ 56 ರನ್ (23 ಬಾಲ್) ಗಳಿಸುವ ಮೂಲಕ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಬಿಲ್ಲಿಂಗ್ಸ್ ಶ್ರೇಷ್ಠ ಆಟ ಪ್ರದರ್ಶಿಸಿಇದ್ದರು.

ಇಷ್ತಾಗಿ ಅಂತಿಮ ಓರವ್ ವೇಳೆಗೆ ತಂಡಕ್ಕೆ ಗೆಲ್ಲಲು 17 ರನ್ ಅಗತ್ಯವಿದ್ದು ಡ್ವೇನ್ ಬ್ರಾವೋ ಹಾಗೂ ರವೀಂದ್ರ ಜಡೇಜಾ ತಲಾ 11 ರನ್ ಗಳಿಸಿ ಚೆನ್ನೈ ಗೆಲುವಿನ ನಗು ಬೀರಲು ಕಾರಣರಾದರು.
ಕೋಲ್ಕತ್ತಾ ಪರವಾಗಿ ಟಾಮ್ ಕ್ಯೂರನ್ 2 ವಿಕೆಟ್ ಪಿಯೂಶ್ ಚಾವ್ಲಾ, ಕುಲದೀಪ್ ಯಾದವ್, ಸುನೀಲ್ ಎನ್. ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ದರು.

ಸಂಕ್ಷಿಪ್ತ ಸ್ಕೋರ್
ಕೋಲ್ಕತ್ತಾ ನೈಟ್ ರೈಡರ್ಸ್ 202/6 (20.0 ಓವರ್)
ಚೆನ್ನೈ ಸೂಪರ್ ಕಿಂಗ್ಸ್ 205/5 (19.5 ಓವರ್)

Comments are closed.