ಗಲ್ಫ್

ಕುರಾನ್, ಹದೀಸ್ ಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಜೀವನ ಮುನ್ನಡೆಸಲು ಸಾದ್ಯ: ಅಬುಧಾಬಿ ಮೆಹ್ಫಿಲ್-ಇ-ನೂರ್ ಕಾರ್ಯಕ್ರಮದಲ್ಲಿ ಶಿಹಾಬ್ ತಂಙಲ್

Pinterest LinkedIn Tumblr

ಪ್ರವಾದಿ ಮುಹಮ್ಮದ್ ಪೈಗಂಬರರ ಕಾಲಘಟ್ಟದಲ್ಲಿ ಕುರಾನ್ ಮತ್ತು ಹದೀಸ್ ಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮುನ್ನಡೆಸುತ್ತಿದ್ದ ಪ್ರವಾದಿ ಅನುಯಾಯಿಗಳು ಜಗತ್ತಿನ ಅತ್ಯುತ್ತಮ ಜನ ಸಮೂಹವಾಗಿದ್ದರು. ಅವರು ಪವಿತ್ರ ಕುರಾನ್ ಮತ್ತು ಹದೀಸ್ ಗಳನ್ನು ಚಾಚೂ ತಪ್ಪದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮುನ್ನಡೆಸುತ್ತಿದ್ದರು ಮತ್ತು ಅವರ ಜೀವನವು ಇಸ್ಲಾಮಿನ ಸುಂದರ ರೂಪವಾಗಿತ್ತು. ಓದಿರಿ, ಅನ್ವೇಷಿಸಿರಿ ಮತ್ತು ಚಿಂತಿಸಿರಿ ಎಂಬ ಪ್ರಥಮ ಸೂಕ್ತದೊಂದಿಗೆ ಅವತೀರ್ಣಗೊಂಡ ಪವಿತ್ರ ಕುರಾನ್ ಮತ್ತು ಪ್ರವಾದಿವರ್ಯರ ಹದೀಸ್ ಗಳನ್ನು ನಮ್ಮ ಸ್ವ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಸುಂದರ ಜೀವನ ಮುನ್ನಡೆಸಬೇಕು ಮತ್ತು ಅದರ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಬದ್ದರಾಗಬೇಕು ಎಂದು ಕರೆಯಿತ್ತರು. ಸಮನ್ವಯ ಪಾಠ್ಯ ಪದ್ಧತಿಯ ವಿದ್ಯಾ ಸಂಸ್ಥೆಗಳು ಸಕಾಲಿಕ ಉತ್ತಮ ಸಮಾಜ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿ ದಾರುಲ್ ಹುದಾ ಇಸ್ಲಾಮಿಕ್ ವಿಶ್ವ ವಿದ್ಯಾಲವು ಜಾಗತಿಕವಾಗಿ ಗುರುತಿಸಿಕೊಂಡಿದೆ. ಆದ್ದರಿಂದ ಎಲ್ಲರೂ ಇಂತಹ ವಿದ್ಯಾ ಸಂಸ್ಥೆಗಳ ಭಾಗವಾಗಬೇಕು ಎಂದು ಹೇಳಿದರು.

ಅವರು ನೂರುಲ್ ಹುದಾ ಯುಎಇ ಸಮಿತಿಯ ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ 16-3-2018 ಶುಕ್ರವಾರ ಸಂಜೆ ಅಬುಧಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಭಾಂಗಣದಲ್ಲಿ ನಡೆದ ಮೆಹ್ಫಿಲ್-ಇ-ನೂರ್ 2018 ಮತ್ತು ಯೂತ್ ಕನ್ವೆನ್ಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೆಹ್ಫಿಲ್-ಇ-ನೂರ್ ಸ್ವಾಗತ ಸಮಿತಿ ಚೇರ್ಮೇನ್ ಸಯ್ಯದ್ ಅಬ್ದುಲ್ ರಹ್ಮಾನ್ ಅಝ್ಹರಿ ತಂಙಲ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಆಕ್ಟಿಂಗ್ ಚೇರ್ಮೇನ್ ಜನಾಬ್ ಅಶ್ರಫ್ ಪಿ.ಕೆ ಅವರು ವಿಶಿಷ್ಟ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಬರಮಾಡಿದರು.

ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಉಸ್ತಾದರು ಮಾತನಾಡಿ ಕರ್ನಾಟಕದ ಬಹುತೇಕ ಪ್ರದೇಶಗಳ ಮುಸ್ಲಿಮರು ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸದ ಕೊರತೆಯಿಂದ ಅಧಾರ್ಮಿಕತೆಯಲ್ಲಿದ್ದಾರೆ ಮತ್ತು ಲೌಕಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಇಂತಹ ಜನ ಸಮೂಹಕ್ಕಾಗಿ ನೂರುಲ್ ಹುದಾ ಧಾರ್ಮಿಕತೆಯ ಬೆಳಕು ಚೆಲ್ಲಲಿದೆ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೋಳಿಸಲು ಪ್ರಯತ್ನಿಸಲಿದೆ ಎಂದು ಹೇಳುತ್ತಾ ವಿದ್ಯಾ ಸಂಸ್ಥೆಯ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ಮನಮುಟ್ಟುವಂತೆ ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಅಬುಧಾಬಿ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಸದಸ್ಯರಾದ ಮಾನ್ಯ ಖಾನ್ ಝಮಾನ್ ಸುರೂರ್ ಖಾನ್ ಅವರು ಮಾತನಾಡಿ ಸಂಭ್ರಮಕ್ಕೆ ಶುಭ ಹಾರೈಸಿದರು.

ಮಾಡನ್ನೂರು ಜಮಾಅತ್ ಖತೀಬರು ಹಾಗೂ ಬಪ್ಪಲಿಗೆ ಗ್ಲೋಬಲ್ ಫ್ರೆಂಡ್ಸ್ ಗೌರವಾದ್ಯಕ್ಷರು ಆದ ಬಹುಮಾನ್ಯ ಸಿರಾಜುದ್ದೀನ್ ಫೈಝಿ ಉಸ್ತಾದರು ಯೂತ್ ಕನ್ವೆನ್ಷನ್ ಬಗ್ಗೆ ಮಾತನಾಡಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ನೂರುಲ್ ಹುದಾ ಯೂತ್ ವಿಂಗ್ ಯುಎಇ ಸಮಿತಿಯ ಪದಾಧಿಕರಿಗಳ ವಿವರಗಳನ್ನು ನೀಡಿದರು.

ಕಾರ್ಯಕ್ರಮದ ಮುಖ್ಯ ಪ್ರಬಾಷಕ ಅಂತರಾಷ್ಟ್ರೀಯ ವಾಗ್ಮಿ ಬಹುಮಾನ್ಯ ಖಲೀಲ್ ಹುದವಿ ಅಲ್ ಮಾಲಿಕಿ ಉಸ್ತಾದರು ಉತ್ತಮ ಸ್ವಭಾವ ಗುಣಗಳ ಬಗ್ಗೆ ತುಂಬಿದ ಸಬಿಕರಿಗೆ ತನ್ನ ವಿಶಿಷ್ಟ ಶೈಲಿಯಲ್ಲಿ ಪ್ರಬಾಷಣಗೈದರು.

ಕಾರ್ಯಕ್ರಮದಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಸಮಗ್ರ ಮಾಹಿತಿಯನ್ನೊಳಗೊಂಡ ಡೊಕ್ಯುಮೆಂಟರಿಯನ್ನು ಅನಾವರಣಗೊಳಿಸಲಾಯಿತು ಮತ್ತು ನೂರುಲ್ ಹುದಾ ಯುಎಇ ಸಮಿತಿಯ ವತಿಯಿಂದ ಸಾಮಾಜಿಕವಾಗಿ ಉತ್ಕೃಷ್ಟ ಸೇವೆಗೈದ ಸಯ್ಯದ್ ಮುನವ್ವರಲೀ ಶಿಹಾಬ್ ತಂಙಲ್ ಮತ್ತು ಅಬುಧಾಬಿ ಚೇಂಬರ್ ಆಫ್ ಕಾಮರ್ಸ್ ಸದಸ್ಯರಾದ ಮಾನ್ಯ ಖಾನ್ ಝಮಾನ್ ಸುರೂರ್ ಖಾನ್ ಅವರನ್ನು ಸನ್ಮಾನಿಸಲಾಯಿತು.

ದಾರುಸ್ಸಲಾಂ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಕಾರ್ಯಾದ್ಯಕ್ಷರಾದ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಲ್ ಅವರು ದುವಾ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಇಷ್ಕ್-ಇ-ಎಮರಾತ್ ತಂಡದಿಂದ ಆಕರ್ಷಕ ಬುರ್ದಾ ಆಲಾಪನೆ ನಡೆಯಿತು.

ವೇದಿಕೆಯಲ್ಲಿ ನೂರುಲ್ ಹುದಾ ಯುಎಇ ಸಮಿತಿಯ ಗೌರವಾದ್ಯಕ್ಷರಾದ ಸಯ್ಯದ್ ಅಸ್ಗರ್ ಅಲೀ ತಂಙಲ್, ಧಾರ್ಮಿಕ ಸಲಹೆಗಾರರಾದ ಬಹುಮಾನ್ಯ ಖಲೀಲುರಹ್ಮಾನ್ ಖಾಷಿಫಿ, ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು, ಕೋಶಾದಿಕಾರಿ ಜನಾಬ್ ಅಶ್ರಫ್ ಯಾಕೂತ್ ನೆಕ್ಕರೆ, ಕೆಐಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಜನಾಬ್ ಎಮ್.ಕೆ ಬ್ಯಾರಿ, ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ, ಕೆಐಸಿ ದುಬೈ ಸಮಿತಿಯ ಅಧ್ಯಕ್ಷರಾದ ಜನಾಬ್ ಅಶ್ರಫ್ ಶಾ ಮಾಂತೂರು, ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ಅಬುಧಾಬಿ ಸಮಿತಿಯ ಅಧ್ಯಕ್ಷರಾದ ಜನಾಬ್ ಹನೀಫ್ ಅರಿಯಮೂಲೆ, ನೂರುಲ್ ಹುದಾ ಅಬುಧಾಬಿ ಸಮಿತಿಯ ಉಪಾಧ್ಯಕ್ಷರಾದ ಜನಾಬ್ ಅಶ್ರಫ್ ಪೂಚಕ್ಕಾಡ್ ಮೊದಲಾದ ಗಣ್ಯರು ಉಪಸ್ತಿತಿತರಿದ್ದರು.

ಕಾರ್ಯಕ್ರಮದಲ್ಲಿ ದಾರುನ್ನೂರ್ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್, ದಾರುನ್ನೂರು ದುಬೈ ಸಮಿತಿಯ ಅಧ್ಯಕ್ಷರಾದ ಜನಾಬ್ ರಫೀಕ್ ಆತೂರು, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಕೆಮ್ಮಿಂಜೆ, ಕೆಐಸಿ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಶೆರೀಫ್ ಕೊಡಿನೀರು, ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಅಶ್ರಫ್ ಪರ್ಲಡ್ಕ, ನೂರುಲ್ ಹುದಾ ಯೂತ್ ವಿಂಗ್ ಅಧ್ಯಕ್ಷರಾದ ಜನಾಬ್ ರಝಾಕ್ ಕಾವು, ಪ್ರಧಾನ ಕಾರ್ಯದರ್ಶಿ, ಜನಾಬ್ ತಾಜುದ್ದೀನ್ ಕೊಚ್ಚಿ, ಕೋಶಾದಿಕಾರಿ ಜನಾಬ್ ರಿಫಾಯಿ ಗೂನಡ್ಕ, ಕೆಐಸಿ ಅಲ್ ಕೌಸರ್ ಯೂತ್ ವಿಂಗ್ ಅಧ್ಯಕ್ಷರಾದ ಜನಾಬ್ ನವಾಝ್ ಬಿಸಿ ರೋಡ್, ಕಾರ್ಯಾದ್ಯಕ್ಷರಾದ ಜನಾಬ್ ಆಸಿಫ್ ಮರೀಲ್, ಪ್ರಧಾನ ಕಾರ್ಯದರ್ಶಿ ಜನಾಬ್ ಜಾಬಿರ್ ಬೆಟ್ಟಂಪಾಡಿ, ಕೋಶಾದಿಕಾರಿ ಜನಾಬ್ ನಾಸಿರ್ ಬಪ್ಪಲಿಗೆ, ದಾರುನ್ನೂರು ಯೂತ್ ಟೀಮ್ ಕೋಶಾದಿಕಾರಿ ಜನಾಬ್ ಇಫ್ತಿಕಾರ್ ಕಣ್ಣೂರು, ನೂರುಲ್ ಹುದಾ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್, ಅಬುಧಾಬಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಬಷೀರ್ ಕಾವು,ಕೋಶಾದಿಕಾರಿ ಜನಾಬ್ ನೌಶಾದ್ ಕೆ ಕೆ, ಸಂಘಟನಾ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಅಲೀ ಮಾಡನ್ನೂರು, ದುಬೈ ಸಮಿತಿಯ ಗೌರವಾದ್ಯಕ್ಷರಾದ ಜನಾಬ್ ಅಬ್ದುಲ್ ಸಲಾಮ್ ಬಪ್ಪಲಿಗೆ, ಕಾರ್ಯಾಕ್ಷರಾದ ಜನಾಬ್ ಅನ್ವರ್ ಮಣಿಲ, ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಅಝೀಝ್ ಸೋಂಪಾಡಿ, ಕೋಶಾದಿಕಾರಿ ಜನಾಬ್ ಯೂಸುಫ್ ಈಶ್ವರಮಂಗಿಲ, ಶಾರ್ಜಾ ಸಮಿತಿಯ ಗೌರವಾದ್ಯಕ್ಷರಾದ ಜನಾಬ್ ರಝಾಕ್ ಸೋಂಪಾಡಿ, ಅಧ್ಯಕ್ಷರಾದ ಜನಾಬ್ ಅಶ್ರಫ್ ಗಾಳಿಮುಕ, ಪ್ರಧಾನ ಕಾರ್ಯದರ್ಶಿ ಜನಾಬ್ ಅಶ್ರಫ್ ಕೆಮ್ಮಿಂಜೆ ಮೊದಲಾದವರು ಹಾಗೂ ನೂರುಲ್ ಹುದಾ ಅಬುಧಾಬಿ, ದುಬೈ, ಶಾರ್ಜಾ ಮತ್ತು ಕ್ಲಸ್ಟರ್ ಸಮಿತಿಗಳ ಪದಾಧಿಕರಿಗಳು, ಸದಸ್ಯರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನೌಫಲ್ ಅಬುಧಾಬಿ ಮತ್ತು ಮೆಹ್ಫಿಲ್-ಇ-ನೂರ್ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅನ್ವರ್ ಮಾಣಿಲ ಹಾಗೂ ಕಾರ್ಯದರ್ಶಿ ಜನಾಬ್ ಅಶ್ರಫ್ ಪರ್ಲಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು. ನೂರುಲ್ ಹುದಾ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್ ಅವರು ಧನ್ಯವಾದಗೈದರು.

Comments are closed.