ಕರಾವಳಿ

ವಿಟಮಿನ್ ಹಾಗೂ ಮಿನರಲ್ ಸತ್ವಗಳು ಹೆಚ್ಚಿರುವ ಈ ಹಣ್ಣಿನ ಬೀಜದ ಆರೋಗ್ಯಕರ ಅಂಶಗಳು

Pinterest LinkedIn Tumblr

ಹಳದಿ ಬಣ್ಣವನ್ನು ಹೊಂದಿರುವ ತುಂಬಾ ಸಿಹಿಯಾಗಿರುವ ಹಲಸಿನ ಹಣ್ಣು ಎಲ್ಲರಿಗೂ ಪ್ರಿಯ. ಈ ಹಲಸಿನ ಹಣ್ಣಿನಲ್ಲಿ ಅಡಗಿರುವ ವಿಟಮಿನ್ ಹಾಗೂ ಮಿನರಲ್ ಸತ್ವಗಳು ಮನುಷ್ಯನ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ಆದರೆ ಎಲ್ಲರೂ ಹಲಸಿನ ಹಣ್ಣನ್ನು ತಿಂದು ಅದರ ಒಳಗೆ ಇರುವ ಬೀಜವನ್ನು ಬಿಸಡುತ್ತಾರೆ ಆದರೆ ಹಲಸಿನ ಹಣ್ಣಿನಂತೆ ಅದರಲ್ಲಿನ ಬೀಜಗಳು ಪೋಷಕಾಂಶಗಳನ್ನು ಒಳಗೊಂಡಿದೆ. ಅದರಲ್ಲೂ ತುಂಬಾ ಆರೋಗ್ಯದಾಯಕ ಅಂಶಗಳು ಇದೆ ಎಂದು ಯಾರಿಗೂ ಗೊತ್ತಿಲ್ಲ.

ಹಲಸಿನ ಬೀಜದಲ್ಲಿ ಇರುವ ಆರೋಗ್ಯದ ಅಂಶಗಳು.
ಹಲಸಿನ ಬೀಜಗಳಲ್ಲಿ ಖನಿಜಗಳಾದ ಮೆಗ್ನೀಶಿಯಂ, ಸತು, ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ತಾಮ್ರಗಳು.ವಿಟಮಿನ್ ಎ ಹಾಗೂ ಸಿ ಮತ್ತು ಬಿ. ಫೈಟೋನ್ಯೂಟ್ರಿಯಂಟ್ಸ್
ಅಲ್ಪಪ್ರಮಾಣದಲ್ಲಿವೆ. ಅಲ್ಲದೇ ಅತಿಸೂಕ್ಷ್ಮಜೀವಿ ನಿರೋಧಕ ಸಂಯುಕ್ತಗಳೂ ಇದ್ದು ಇವು ಕೆಲವು ಆಹಾರದ ಮೂಲಕ ದೇಹವನ್ನು ಪ್ರವೇಶಿಸಿರುವ ಸೂಕ್ಷ್ಮ ಬ್ಯಾಕ್ಟೀರಿಯಾಗಳ ದಾಳಿಯನ್ನು ತಡೆಯುತ್ತದೆ ಹಾಗೂ ಕೆಲವಾರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ.

ಹಲಸಿನ ಬೀಜಗಳು ನೋಡಲಿಕ್ಕೆ ಸುಂದರವಾಗಿಲ್ಲದಿದ್ದರೂ ಪ್ರೋಟೀನ್ ನಿಂದ ಸಮೃದ್ಧವಾಗಿದೆ. ಈ ಪ್ರೊಟೀನ್ ಸ್ನಾಯುಗಳ ಬೆಳವಣಿಗೆ ಹಾಗೂ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ.

ಹಲಸಿನ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದ್ದು ಇದು ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ ಹಾಗೂ ಹೊಟ್ಟೆಯನ್ನು ತುಂಬಿರುವ ಭಾವನೆಯನ್ನು ಮುಡಿಸುತ್ತಾದೆ.

ಹಲಸಿನ ಬೀಜದಲ್ಲಿ ವಿಟಮಿನ್ ಎ ಅಂಶವಿದ್ದು ಇದು ಕಣ್ಣಿನ ಆರೋಗ್ಯವನ್ನು ಉತ್ತಮವಾಸುತ್ತದೆ. ಜೊತೆಗೆ ಕಣ್ಣಿನ ಕಾಯಿಲೆಗಳನ್ನು ದೂರವಿರಿಸುತ್ತದೆ.

ಹಲಸಿನ ಬೀಜಗಳಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಿದ್ದು ಹೀಮೋಗ್ಲೋಬಿನ್ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಸೂಕ್ತವಾದ ಆಹಾರವಾಗಿದೆ.

ಹಲಸಿನ ಬೀಜಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚುತ್ತದೆ ಹಾಗೂ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ.

ಹಲಸಿನ ಬೀಜಗಳಲ್ಲಿ ಪ್ರೋಟೀನುಗಳು ಹಾಗೂ ಹಲವಾರು ಸೂಕ್ಷ್ಮ ಪೋಷಕಾಂಶಗಳಿದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ.

ಹಲಸಿನ ಬೀಜಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆ ಸುಲಭವಾಗಿ ಪೂರ್ಣಗೊಳ್ಳಲು ಹಾಗೂ ಕರುಳುಗಳಲ್ಲಿನ ತ್ಯಾಜ್ಯವನ್ನು ಸಡಿಲಿಸಿ ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ.

ಹಲಸಿನ ಬೀಜಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೂ ಸೂಕ್ಷ್ಮಜೀವಿಗಳ ನಿರೋಧಕ ಗುಣ ಮತ್ತು ದೇಹದಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗದಂತೆ ನೋಡಿಕೊಳ್ಳುತ್ತದೆ.

ಹಲಸಿನ ಬೀಜಗಳಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಇವು ಕ್ಯಾನ್ಸರ್ ತಡೆಯುವ ಗುಣವನ್ನು ಹೊಂದಿವೆ.

ಹಲಸಿನ ಬೀಜದಲ್ಲಿರುವ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ
ಮೂಳೆಗಳನ್ನು ದೃಢಗೊಳ್ಳಿಸಿ. ಗಟ್ಟಿಯಾಗಿಸಿ ಹಾಗೂ ಸವೆತವನ್ನು ಮರುಪೂರೈಸಲು ನೆರವಾಗುತ್ತದೆ.

ಹಲಸಿನ ಬೀಜದ ಸೇವನೆಯಿಂದ ದೇಹದಲ್ಲಿ ಅಡಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕಲು ಸಹಾಯವಾಗುತ್ತದೆ.

ಹಲಸಿನ ಬೀಜವನ್ನು ಪುಡಿಮಾಡಿ ಅದಕ್ಕೆ ಸ್ವಲ್ಪ ಹಾಲು ಹಾಕಿ ಫೆಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿ ಹೆಚ್ಚುತ್ತದೆ.

ಹಲಸಿನ ಬೀಜವನ್ನು ರಾತ್ರಿ ಹಾಲು ಮತ್ತು ಜೇನಿನೊಂದಿಗೆ ನೆನೆಸಿ ಮರುದಿನ ಅದನ್ನು ನುಣ್ಣಗೆ ರುಬ್ಬಿ ಮುಖಕ್ಕೆ ಹಚ್ಚಿಕೊಂಡರೆ ನಮ್ಮ ತ್ವಚೆಯು ಸುಂದರವಾಗಿ ಹೊಳೆಯುತ್ತದೆ ಮತ್ತು ನುಣುಪಾಗುತ್ತದೆ.

ಹಲಸಿನ ಬೀಜದಲ್ಲಿ ಉತ್ತಮ ಪೋಷಕಾಂಶ ಸತ್ವಗಳು ಇದ್ದು ಇವು ನಮ್ಮ ಒತ್ತಡವನ್ನು ನಿವಾರಿಸಿ ನಮ್ಮ ಆರೋಗ್ಯದ ಸುಧಾರಣೆಗೆ ಸಹಾಯ ಮಾಡುತ್ತದೆ.

ಹೆಚ್ಚಿನ ಪೋಷಕಾಂಶಗಳಿಂದ ಕೂಡಿರುವ ಹಲಸಿನ ಬೀಜ ಅನೀಮಿಯಾ ನಿವಾರಣೆಗೆ ಸಹಾಯ ಮಾಡುತ್ತದೆ.

ಹಲಸಿನ ಬೀಜದಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ದೃಷ್ಟಿ ದೋಷ ಹಾಗೂ ಇರುಳು ಗುರುಡುತನವನ್ನು ನಿವಾರಿಸುತ್ತದೆ.

ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಹಲಸಿನ ಬೀಜ ಸಹಾಯ ಮಾಡುತ್ತದೆ.

ತಿಳಿದುಕೊಂಡರಲ್ಲ ಕೇವಲ ಹಲಸಿನ ಹಣ್ಣು ಮಾತ್ರ ಅಲ್ಲ ಹಲಸಿನ ಬೀಜ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು.ಅದಕ್ಕಾಗಿ ಹಲಸಿನ ಬೀಜವನ್ನು ಎಸೆಯದೇ ಅದರ ಉಪಯೋಗ ಪಡೆದುಕೊಳ್ಳಿ.

Comments are closed.