ರಾಷ್ಟ್ರೀಯ

ತಮಿಳುನಾಡಿನಲ್ಲಿ ಭೀಕರ ಅಪಘಾತ: ಕರ್ನಾಟಕ ಮೂಲದ 7 ಮಂದಿ ಸಾವು

Pinterest LinkedIn Tumblr

ಚೆನ್ನೈ: ತಮಿಳುನಾಡಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ 7 ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿಗೆ.

ತಮಿಳುನಾಡಿನ ವಿರುದ್ಧ ನಗರ ಜಿಲ್ಲೆಯ ರಾಜಂಪಾಳ್ಯ ಬಳಿ ಈ ಅಪಘಾತ ಸಂಭವಿಸಿದ್ದು, ಲಾರಿ ಮತ್ತು ಇನ್ನೋವಾ ಕಾರು ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತುಪಟ್ಟ ಏಳೂ ಮಂದಿ ಕರ್ನಾಟಕದ ಮೂಲದವರಾಗಿದ್ದು, ಮೃತರನ್ನು ಲಕ್ಷ್ಮಿ ನಾರಾಯಣ, ರತ್ನ, ಕಲಾವತಿ, ಶಂಕರೇಗೌಡ, ಶ್ರೀಧರ, ಕೀರ್ತಿಕಾ, ಮಗು ಪ್ರವೀಣ್ ಎಂದು ಗುರುತಿಸಲಾಗಿದೆ.

ಪೊಲೀಸರು ತಿಳಿಸಿರುವಂತೆ ಕೇರಳಕ್ಕೆ ಪ್ರವಾಸ ಹೋಗಿದ್ದ ಕರ್ನಾಟಕ ಮೂಲದ ಕುಟುಂಬ ಕೇರಳದಿಂದ ವಾಪಸ್​ ಬರುವಾಗ ತಮಿಳುನಾಡು ಸಮೀಪ ಈ ಅಪಘಾತ ಸಂಭವಿಸಿದೆ. ಚಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಪಟ್ಟಿದ್ದು, ಮೃತದೇಹಗಳು ಮಧುರೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Comments are closed.