ಮನೋರಂಜನೆ

ಸಾಕಷ್ಟು ನೋವು ಅನುಭವಿಸಿರುವ ಸಲ್ಮಾನ್ ಖಾನ್’ಗೆ ಶಿಕ್ಷೆ ಅನಗತ್ಯವಾಗಿತ್ತು: ಶತ್ರುಘ್ನ ಸಿನ್ಹಾ

Pinterest LinkedIn Tumblr

ಮುಂಬೈ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈಗಾಗಲೇ ಒಂದು ರಾತ್ರಿಯನ್ನು ಜೋಧ್ ಪುರ ಕಾರಾಗೃಹದಲ್ಲಿ ಕಳೆದಿದ್ದಾರೆ. ಅವರ ಸ್ನೇಹಿತರು, ಅಭಿಮಾನಿಗಳು , ಬಾಂದ್ರಾದಲ್ಲಿನ ಗ್ಯಾಲಕ್ಸಿ ಅಪಾರ್ಟಮೆಂಟ್ ನಲ್ಲಿರುವ ಅವರ ನಿವಾಸಕ್ಕೆ ಆಗಮಿಸುತ್ತಲೇ ಇದ್ದು, ಸನ್ಮಾನ್ ಖಾನ್ ಅವರ ಕುಟುಂಬ ಸದಸ್ಯರಲ್ಲಿ ಧೈರ್ಯ ತುಂಬುತ್ತಿದ್ದಾರೆ.

ಸಲ್ಮಾನ್ ತಾಯಿ ವಿಚಾರಣೆ ಮುಗಿದ ಬಳಿಕ ಹಾಸಿಗೆ ಹಿಡಿದಿದ್ದು, ಅತಿಥಿಗಳನ್ನು ಭೇಟಿ ಮಾಡುತಿಲ್ಲ. ಅವರ ತಂದೆ ಸಲೀಂ ಖಾನ್ ಮನೆಯಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿರುವ ಸಲ್ಮಾನ್ ಖಾನ್ ಕುಟುಂಬ ಸ್ನೇಹಿತ, ಶತ್ರುಘ್ನ ಸಿನ್ಹಾ, ನನಗಿಂತಲೂ ಮೊದಲು ನನ್ನ ಮಗಳು ಸೋನಾಕ್ಷಿ ಸಿನ್ಹಾ ಸಲ್ಮಾನ್ ಖಾನ್ ಮನೆಗೆ ತೆರಳಿದ್ದು, ಅವರ ಕುಟುಂಬದವರೊಂದಿಗೆ ಸಮಯ ಕಳೆದಿದ್ದಾಳೆ. ಸಲ್ಮಾನ್ ಖಾನ್ ಕುಟುಂಬದೊಂದಿಗೆ ಉತ್ತಮ ಸಂಬಂಧವಿದೆ. ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬಕ್ಕೆ ಅತೀಯವಾದ ಗೌರವ ನೀಡುವುದಾಗಿ ಹೇಳಿದ್ದಾರೆ.

ಗುರುವಾರ ರಾತ್ರಿ ಸಲೀಂ ಸಾಬ್ ಜೊತೆ ಧೀರ್ಘ ಸಮಯ ಕಳೆದಿದ್ದೇನೆ. ಅವರೊಂದಿಗೆ ಇರುವುದೇ ಒಂದು ರೀತಿಯ ಸಂತೋಷಕರವಾಗಿರುತ್ತದೆ. ಸಲೀಂ ಪಂಡಿತ್ ಅಂತಾ ಅವರನ್ನು ಕರೆಯುತ್ತೇನೆ, ಆದರೆ. ಈಗ ಅವರ ಮಗನಿಗೆ ಶಿಕ್ಷೆ ವಿಧಿಸಿರುವುದು ಅನಗತ್ಯವಾಗಿದೆ . ಅವರ ಮಗ ಬೇಗನೆ ಬಿಡುಗಡೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಈಗಾಗಲೇ ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರ ಅಪರಾಧವಾದರೂ ಏನು ? ಐದು ವರ್ಷಗಳ ಶಿಕ್ಷೆ ಪ್ರಮಾಣ ಕಠಿಣವಾಗಿದೆ. ಜೋದ್ ಪುರ ನ್ಯಾಯಾಲಯ ಹಾಗೂ ಕಾರಾಗೃಹದ ಹೊರಗೆ 20 ವರ್ಷಗಳಿಂದಲೂ ಈ ಪ್ರಕರಣ ನಡೆಯುತ್ತಿದ್ದು, ಈಗ ಮತ್ತೆ ಐದು ವರ್ಷ ಹೆಚ್ಚಿಸುವ ಮೂಲಕ 25 ವರ್ಷದ ಶಿಕ್ಷೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸಲ್ಮಾನ್ ಖಾನ್ ಗೆ ಮಾತ್ರ ಶಿಕ್ಷೆ ವಿಧಿಸಿ ಉಳಿದವರಿಗೆ ಯಾಕೆ ಶಿಕ್ಷೆ ಖುಲಾಸೆಗೊಳಿಸಲಾಗಿದೆ ?
ಜೋಧಪುರದಲ್ಲಿ ಸಲ್ಮಾನ್ ಖಾನ್ ಭೇಟಿಗೆ ಹೋದಾಗ ಅವರೊಂದಿಗೆ ಇತರರು ಇದ್ದರು. ಅವರೊಬ್ಬರೇ ಮಾತ್ರ ಭೇಟಿಗೆ ಹೋಗಿರಲಿಲ್ಲ. ಅವರ ಸ್ನೇಹಿತರೂ ಕೂಡಾ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ. ಆದರೆ, ಅವರಿಗೇಕೆ ಶಿಕ್ಷೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಶತ್ರಘ್ನ ಸಿನ್ಹಾ ಪ್ರಶ್ನಿಸಿದ್ದಾರೆ.

ಸೈಲ್ ಆಲಿಖಾನ್ , ನೀಲಂ, ಸೋನಾಲಿ ಬೇಂದ್ರೆ, ತಬು ಮಾನವೀಯ ಗುಣವುಳ್ಳವರು, ಹಾಗಾದರೆ ಸಲ್ಮಾನ್ ಕೂಡಾ ಮಾನವೀಯ ಗುಣವುಳ್ಳವರು. ಬೇರೊಬ್ಬರ ನೆರವಿಗಾಗಿ ಯಾವಾಗಲೂ ಸಿದ್ದರಿರುತ್ತಾರೆ. ಏಕೆ ಅವರನ್ನು ಕಾರಾಗೃಹಕ್ಕೆ ಕಳುಹಿಸಲಾಗಿದೆ. ಸಮುದಾಯಿಕ ಕೆಲಸದ ಶಿಕ್ಷೆ ನೀಡಲಿ ಖುಷಿಯಾಗಿ ಮಾಡುತ್ತಾರೆ ಎಂದು ಸಲ್ಮಾನ್ ಖಾನ್ ಹೇಳುತ್ತಾರೆ.

ಸಲ್ಮಾನ್ ಖಾನ್ ಅಭಿಯನದ ಬಹುಕೋಟಿ ವೆಚ್ಚದ ಚಿತ್ರಗಳು ಅಪೂರ್ಣಗೊಂಡಿವೆ. ಮನೆ ನಿರ್ಮಾಣ ಕೂಡಾ ಪೂರ್ಣವಾಗಿಲ್ಲ. ಕಥೆಗಾರ ಇಲ್ಲದೇ ಹೇಗೆ ಕಾದಂಬರಿ ಬರೆಯಲು ಸಾಧ್ಯ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದು, ಮತ್ತೊಬ್ಬ ಕಾರಾಗೃಹದ ಒಳಗಿರಲು ಸಲ್ಮಾನ್ ಖಾನ್ ಮತ್ತೊಮ್ಮೆ ಕಾರಾಗೃಹಕ್ಕೆ ಹೋಗಬಾರದೆಂದು ಅವರು ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಕೃಷ್ಣಮೃಗ ಭೇಟಿ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅಥವಾ ಭಾಗಿಯಾಗಿಲ್ಲವೋ ಅವರು 25 ವರ್ಷಗಳಿಂದ ನೋವು ಅನುಭವಿಸುವಂತಾಗಿದೆ. ಅವರೊಬ್ಬ ಮಾನವೀಯ ಗುಣವುಳ್ಳವರು ಎಂದು ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

Comments are closed.