ಕರಾವಳಿ

ಮೂಲವ್ಯಾಧಿ, ಚರ್ಮ ರೋಗ, ಪಿತ್ತಕೋಶದ ಸಮಸ್ಯೆ ನಿವಾರಣೆಗೆ ಕಾಕಮಾಚಿ ಉತ್ತಮ ಔಷಧಿ

Pinterest LinkedIn Tumblr

ಕಾಕಮಾಚಿಯಲ್ಲಿ ಎಂಟು ರಸಗಳಿವೆ. ಮಕ್ಕಳ ಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲಿ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚಿದರೆ ಕಜ್ಜಿ, ತುರಿ ಬಾಧೆ ಬರುವುದಿಲ್ಲ. ಬಂದರೆ ವಾಸಿಯಾಗುವುದು, ಸಾಮಾನ್ಯವಾಗಿ ೧೫ ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿಸುವುದು ಮಲೆ ನಾಡಿನಲ್ಲಿ ರೂಢಿಯಲ್ಲಿದೆ.

ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸಬಹುದು. ಇದರ ಔಷಧೀಯ ಗುಣಕ್ಕಾಗಿ, ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.

ಮಲೆನಾಡಿನಲ್ಲಿ ಇದರ ತಂಬುಳಿ ಮಾಡುವರು. ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ ಸೇವಿಸುವರು. ಕಾಕ ಮಾಚಿ ಗಿಡದ ಎಲೆಯನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ, ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ ಎಂದು ಹೇಳುತ್ತಾರೆ.

ಇದರಲ್ಲಿ ಹಳದಿ ಬಣ್ಣದ ಸ್ವಲ್ಪ ದೊಡ್ಡ ತಳಿಯೂ ಇದೆ.

Comments are closed.