ಕರಾವಳಿ

ಚುನಾವಣೆ ಹಿನ್ನೆಲೆ : ದ.ಕ. ಜಿಲ್ಲಾ ಸ್ವೀಪ್ ಸಮಿತಿಯಿಂದ’ನನ್ನ ಮತ ನನ್ನ ಧ್ವನಿ’ ಸಂಚಾರ ವಾಹನ ಜಾಥಾಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು, ಎಪ್ರಿಲ್.3: ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ‘ನನ್ನ ಮತ ನನ್ನ ಧ್ವನಿ’ ಸಂಚಾರ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಖ್ಯಾತ ಸಾಂಸ್ಕೃತಿಕ ವ್ಯಕ್ತಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮತದಾನದಲ್ಲಿ ಭಾಗಿಯಾಗಲು ಸ್ಫೂರ್ತಿ ನೀಡುವ ಧ್ವನಿಮುದ್ರಕವನ್ನು ಒಳಗೊಂಡಿರುವ ಈ ವಾಹನ ಪ್ರಚಾರಕ್ಕೆ ದ.ಕ. ಜಿಪಂ ಸಿಇಒ ಹಾಗೂ ಸ್ವೀಪ್ ಅಧಿಕಾರಿ ಡಾ.ಎಂ.ಆರ್.ರವಿ ಮಂಗಳವಾರ ಬೆಳಗ್ಗೆ ಮನಪಾ ಕಚೇರಿ ಎದುರು ಚಾಲನೆ ನೀಡಿದರು.

ಮಲ್ಲನ ಗೌಡ ಪಾಟೀಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮತ್ತಿರರು ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಡಾ.ಎಂ.ಆರ್.ರವಿ, ಚುನಾವಣೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ದ.ಕ. ಜಿಲ್ಲಾದ್ಯಂತ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಮಂಗಳೂರಿನಲ್ಲಿ ಮತದಾನದ ಬಗ್ಗೆ ಜಾಗೃತಿಗಾಗಿ ಸಂಚಾರ ವಾಹನ ಜಾಥಾ ಆರಂಭಿಸಲಾಗಿದೆ. ಜಿಲ್ಲೆಯ ಖ್ಯಾತ ಸಾಂಸ್ಕೃತಿಕ ವ್ಯಕ್ತಿಗಳು ಮತದಾನದ ಬಗ್ಗೆ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡುವ, ಜಾಗೃತಿ ಮೂಡಿಸುವ ಧ್ವನಿಮುದ್ರಿಕೆಗಳನ್ನು ಈ ವಾಹನ ಒಳಗೊಂಡಿದೆ ಎಂದು ಹೇಳಿದರು.

ಈ ವಾಹನವು ಮುಖ್ಯವಾಗಿ ಮಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿವೆ. ಅದರಲ್ಲೂ 2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾನವಾಗಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದರು.

__Vb

Comments are closed.