ರಾಷ್ಟ್ರೀಯ

ಬೀದಿನಾಯಿಗಳಿಂದ ಬಂಧನಕ್ಕೀಡಾದ ಚೋರ ಶಿಖಾಮಣಿ

Pinterest LinkedIn Tumblr


ಹೊಸದಿಲ್ಲಿ: ಬೀದಿ ನಾಯಿಗಳ ಉಪಟಳದ ಬಗ್ಗೆ ದಿನೇ ದಿನೇ ಸುದ್ದಿಗಳು ಬರುವುದೇ ಜಾಸ್ತಿ. ಹಾಗಿರಬೇಕೆಂದರೆ ಕುಖ್ಯಾತ ಚೋರನೊಬ್ಬ ಬೀದಿ ನಾಯಿಯಿಂದಾಗಿ ಪೊಲೀಸ್ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾನೆ.

ಆತ ನೂರಾರು ಕಳವುಗಳನ್ನು ನಡೆಸಿದ್ದಾನೆ. ಕೊನೆಗೆ ಬೀದಿ ನಾಯಿಗಳಿಂದಾಗಿ ಸಿಕ್ಕಿ ಬಿದ್ದಿದ್ದಾನೆ. ದಿಲ್ಲಿಯ ದ್ವಾರಕ ಪ್ರದೇಶದಲ್ಲಿ ಕಳವು ಮಾಡಿ ಕಾಲ್ಕಿತ್ತ ಆರೋಪಿ ಆಕಾಶ್ (24) ಎಂಬಾತನನ್ನು ಬೀದಿ ನಾಯಿಗಳು ಕಚ್ಚಿವೆ.

ಕಳವು ನಡೆಸಿದ ಮನೆಯಲ್ಲಿ ಸಾಕು ನಾಯಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಆರೋಪಿಯ ಆಟ ಬೀದಿ ನಾಯಿಗಳ ಮುಂದೆ ಸಾಗಲಿಲ್ಲ. ಪ್ರಕರಣ ವೀಡಿಯೋ ಸಾಕ್ಷ್ಮ ಸಹ ದೊರಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ ನಿವಾಸಿಯಾಗಿರುವ ಈತ ದಿಲ್ಲಿಯ ಉತ್ತಮ್ ನಗರದಲ್ಲಿ ವಾಸಿಸುತ್ತಾನೆ. ಬೀದಿ ನಾಯಿಗಳು ಕಚ್ಚುವ ವೀಡಿಯೋ ಆಧಾರದ ಮೇಲೆ ಪೊಲೀಸ್ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತಿನಿಂದ 20 ಲಕ್ಷ ರೂ.ಗಳಷ್ಟು ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Comments are closed.