ಕರಾವಳಿ

ಕುಂದಾಪುರದಲ್ಲಿ ನೀತಿ ಸಂಹಿತೆಗಿಲ್ಲ ಯಾವುದೇ ಬೆಲೆ: ಮೂರು ದಿನವಾರೂ ತೆರವಾಗದ ಬ್ಯಾನರ್!

Pinterest LinkedIn Tumblr

ಕುಂದಾಪುರ: ಕೆದೂರು ಗ್ರಾಮಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರ ಹೆಸರಿನಲ್ಲಿ ಶುಭಕೋರಿ ಹಾಕಲಾದ ಬ್ಯಾನರ್ ಒಂದು ವಕ್ವಾಡಿ-ಚಾರುಕೊಟ್ಟಿಗೆ ರಸ್ತೆಯ ರೈಲ್ವೇ ಬ್ರಿಡ್ಜ್ ಬಳಿ ಇದ್ದು ಮೂರು ದಿನವಾದ್ರೂ ತೆಗೆದಿರಲಿಲ್ಲ.ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದೆ.

ಬ್ಯಾನರ್ ವಿಚಾರ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಸಂಬಂದಪಟ್ಟವರು ಬ್ಯಾನರ್ ತೆರವು ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ ೨.೩೦ರತನಕವೂ ಬ್ಯಾನರ್ ಅದೇ ಸ್ಥಳದಲ್ಲಿತ್ತು. ಇದು ಯಾರ ಅಜಾಗರುಕತೆ ಎಂಬುದು ಮಾತ್ರ ತಿಳಿದುಬಂದಿಲ್ಲ. ಈ ಬಾರಿ ನೀತಿ ಸಂಹಿತೆ ಬಹಳಷ್ಟು ಕಠಿಣವಾಗಿದ್ದರೂ ಕೂಡ ಇಂತಹ ಬೇಜವವ್ದಾರಿ ನಡೆದಿರುವುದು ಮಾತ್ರ ದುರಂತವೇ ಸರಿ.

Comments are closed.