ಉಡುಪಿ: ಚುನಾವಣೆ ದಿನ ನಿಗದಿಯಾಗ್ತಾ ಇದ್ದಂತೆ ಚುನಾವಣಾ ಅಯೋಗ ನೀತಿ ಸಂಹಿತೆ ಎನ್ನೋ ಅಸ್ತ್ರವನ್ನು ಜಾರಿ ತರಿಗೆ ತಂದಿದೆ.ನೀತಿ ಸಂಹಿತೆ ರಾಜಾಕಾರಣಿಗಳಿಗೆ ಎಷ್ಟು ಬಿಸಿ ಮುಟ್ಟಿದೆಯೋ ಗೊತ್ತಿಲ್ಲ.? ಆದ್ರೆ ಕರಾವಳಿ ಜನರಿಗಂತೂ ಸಖತ್ತಾಗಿಯೇ ಇದರ ಬಿಸಿ ಮುಟ್ಟಿದೆ.ಇಲ್ಲಿ ನಡೆಯುವ ದೈವಾರಾಧಾನೆ ,ಯಕ್ಷಗಾನ ,ಧಾರ್ಮಿಕ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅಡ್ಡವಾಗಿ ನಿಂತಿದ್ದು,ಇದರಿಂದ ಕರಾವಳಿ ಜನ ಪೇಚಿಗೆ ಸಿಲುಕಿದ್ದಾರೆ.
ಕರಾವಳಿಯಲ್ಲಿ ನೇಮೋತ್ಸವ ಹಾಗೂ ಯಕ್ಷಗಾನ ಕಾರ್ಯಕ್ರಮಗಳ ಸೀಜನ್. ಪ್ರತಿ ವರುಷದಂತೆ ಕರಾವಳಿಯಲ್ಲಿ ನೂರಾರು ಯಕ್ಷಗಾನ ಕಾರ್ಯಕ್ರಮ ಹಾಗೂ ದೈವರಾಧನೆಯ ನೇಮೋತ್ಸವಗಳು ಸಂಪ್ರಾದಾಯಿಕ ವಾಗಿ ನಡೆಯುತ್ತಿರುತ್ತವೆ . ಅದ್ರೆ ಈ ಬಾರಿ ಈ ಎಲ್ಲ ಸಂಪ್ರದಾಯಿಕ ಕಾರ್ಯಕ್ರಮಗಳಿಗೆ ಇದೀಗ ವಿಘ್ನವೊಂದು ಎದುರಾಗಿದೆ.ಅದೇನೆಂದ್ರೆ ಚುನಾವಣೆ ಘೋಷಣೆಯಾಗಿದ್ದರಿಂದ ನೀತಿ ಸಂಹಿತೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದೆ. ಈ ಎಲ್ಲಾ ಕಾರ್ಯಕ್ರಮಗಳು ನಡೆಸಬೇಕಾದ್ರೆ ,ಚುನಾವಣಾಧಿಕಾರಿಗಳ ಅನುಮತಿ ಕಡ್ಡಾಯವಾಗಿ ಪಡೆಯಬೇಕಾಗದ ಪರಿಸ್ಥಿತಿ ಬಂದೊದಗಿದೆ . ಒಂದು ವೇಳೇ ಅನುಮತಿ ಪಡೆದ್ರೂ ಕೂಡ ಧ್ವನಿ ವರ್ಧಕಗಳನ್ನು ಕೂಡ ಬಳಸ ಬಾರದು ,ಬ್ಯಾನರ್ ಹಾಕಬಾರೆಂಬ ಷರತ್ತನ್ನ ವಿಧಿಸಲಾಗುತ್ತಿದೆ. ಒಂದು ವೇಳೆ ಇದನ್ನ ಮೀರಿ ಧ್ವನಿ ವರ್ಧಕಗಳನ್ನು ಬಳಸಿದ್ದೆ ಅದಲ್ಲಿ ಕಾರ್ಯಕ್ರಮ ಆಯೋಜಿಸಿದ ಸಂಘಟಕರ ಮೇಲೆ ಕಾನೂನು ಕ್ರಮ ಕೈ ಗೊಳ್ಳಲಾಗುವುದೆಂದು ಎಚ್ಚರಿಕೆಯನ್ನ ನೀಡಿದೆ.
ಚುನಾವಣಾ ಅಧಿಕಾರಿಗಳ ಈ ನೀತಿ ಕರಾವಳಿ ಜನರ ಅಸಮಾದಾನಕ್ಕೆ ಕಾರಣವಾಗಿದೆ.ತಲಾತಲಾಂತರಗಳಿಂದ ನಡೆಸಿಕೊಂಡು ಬರುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ರೀತಿಯ ನಿರ್ಭಂಧ ಹಾಕುತ್ತಿರುವ ಕ್ರಮಕ್ಕೆ ಭಾರೀ ಅಸಮಾಧಾನ ವ್ಯಕ್ತವಾಗುತ್ತಿದೆ.ದೈವರಾಧನೆಯಂತ ಕಾರ್ಯಕ್ರಮಗಳು ಪೂರ್ವ ನಿಗದಿಯಂತೆ ನಡೆದುಕೊಂಢು ಬರುತ್ತಿರುತ್ತವೆ.ಪ್ರತಿ ಗ್ರಾಮದಲ್ಲೂ ವರ್ಷಂಪ್ರತಿ ನಡೆಯುವ ಕಾರ್ಯಕ್ರಮ ಇದಾಗಿದೆ.ಶಾಲಾ ಕಾಲೇಜುಗಳಿಗೆ ರಜೆ ಇರೋ ಕಾರಣ ಹಾಗೂ ಕೌಟಿಂಬಿಕ ಕಾರ್ಯಕ್ರಮಗಳಲ್ಲಿ ವಿದೇಶಗಳಲ್ಲಿ ನೆಲಸಿರುವವರು ಇದೇ ದೈವ ಧಾರ್ಮಿಕ ಕಾರ್ಯಕ್ರಮಗಳಿಗೆಂದು ಅಗಮಿಸಿರುತ್ತಾರೆ ಹೀಗಾಗಿ ಚುನಾವಣಾ ಹಿನ್ನಲೆಯಲ್ಲಿ ಇದನ್ನ ಮುಂದೂಡಲು ಸಾದ್ಯವಾಗುವುದಿಲ್ಲ ಅನ್ನೋದು ಸ್ಥಳಿಯವರ ವಾದ .
ಅಷ್ಟೇ ಅಲ್ಲದೇ ಕರಾವಳಿ ಗಂಡು ಕಲೆ ಯಕ್ಷಗಾನಕ್ಕೂ ಕೂಡ ನೀತಿ ಸಂಹಿತೆ ಅಡ್ಡ ಬಂದಿರುವುದು ಯಕ್ಷ ಪ್ರೇಮಿಗಳ ಕಣ್ಣು ಕೂಡ ಕೆಂಪಾಗಿಸಿವೆ.ದೇವಸ್ಥಾನದ ಯಕ್ಷಗಾನ ಮಂಡಳಿಗಳಿಗೆ ಹತ್ತಾರು ವರುಷ ಮುಂಗಡವಾಗಿ ಬುಕ್ ಆಗಿರುವ ಹರಕೆ ಯಕ್ಷಗಾನಗಳನ್ನ ಅಲ್ಲಲ್ಲಿ ಪ್ರದರ್ಶನ ಮಾಡಲಾಗುತ್ತಿರುತ್ತವೆ, ಈ ಸಂಧರ್ಭದಲ್ಲಿ ಪರಾವಾನಿಗೆ ಪಡೆದು ಧ್ವನಿ ವರ್ಧಕ ಉಪಯೋಗಿಸದೇ ಯಕ್ಷಗಾನ ನಡೆಸಿ ಅನ್ನೋ ಚುನಾವಣಾ ಆಧಿಕಾರಿಗಳ ಸೂಚನೆ ಎಲ್ಲರ ಆಕ್ರೋಷಕ್ಕೆ ಕಾರಣವಾಗಿದೆ. ಕೌಟುಂಬಿಕ ಕಾರ್ಯಕ್ರಮಗಳಿಗೂ ನೀತಿ ಸಂಹಿತೆ ಬಿಸಿ ಮುಟ್ಟಿಸಿದೆ.ಮದುವೆ ಮುಂಜಿ ಕಾರ್ಯಕ್ರಮಕ್ಕೂ ಕೂಡ ಚುನಾವಣಾ ಅಧಿಕಾರಿಗಳು ಕ್ಯಾಮರ ಹಿಡಿದು ಬಂದು ನಿಲ್ಲುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನೂ ಕರಾವಳಿಯಲ್ಲಿ ನಾಗ ಮಂಡಲ ,ಬ್ರಹ್ಮ ಕಲಶದಂತಹ ಕಾರ್ಯಕ್ರಮಗಳಿಗೂ ಚುನಾವವಣಾ ಅಧಿಕಾರಿಗಳು ಲಾಗಮು ಹಾಕಿವೆ. ಯಾವುದೇ ಬ್ಯಾನರ್ ಬಂಟಿಗ್ಸ್ ಕೂಡ ಕಟ್ಟುವಂತಿಲ್ಲ ರಾಜಕಾರಣಿಗಳು ಬರುವಂತಿಲ್ಲ ಅನ್ನೋ ಸೂಚನೆ ನೀಡಲಾಗಿದೆ .ಒಟ್ಟಿನಲ್ಲಿ ಚುನಾವನಾ ನೀತಿ ಸಂಹಿತೆ ಅನ್ನೋ ಬೂತ ರಾಜಕಾರಣಿಗಳ ಆಟೋಟಕ್ಕೆ ಕಡಿವಾಣ ಹಾಕೋ ಬದಲು ಕರಾವಳಿಯ ಧಾರ್ಮಿಕ ಹಾಗೂ ಜನಪದ ಕಾರ್ಯಕ್ರಮಗಳಿಗೆ ತೊಡಾಕಾಗಿ ಬಿಟ್ಟಿದೆ. ಈ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳು ಕರಾವಳಿ ಜನರ ಧಾರ್ಮಿಕ ಬಾವನೆಗಳಿಗೆ ದಕ್ಕೆ ಆಗದಂತೆ ನೀತಿ ಸಂಹಿತೆಯನ್ನು ಸಡಿಲಗೊಳಿಸಬೇಕು ಅನ್ನೋದು ಕರಾವಳಿ ಜನರ ಆಗ್ರಹವಾಗಿದೆ.
Comments are closed.