ಕರ್ನಾಟಕ

ಕರ್ಣಾಟಕ ಬ್ಯಾಂಕ್‌ಗೆ ಮೆಹುಲ್ ಚೋಕ್ಸಿಯ ಗೀತಾಂಜಲಿ ಜೆಮ್ಸ್ ನಿಂದ 86.5 ಕೋ. ರೂ. ವಂಚನೆ

Pinterest LinkedIn Tumblr

ಬೆಂಗಳೂರು: ಪಿಎನ್‌ಬಿ ವಂಚನೆ ಆರೋಪಿಯಾಗಿರುವ ಮೆಹುಲ್ ಚೋಕ್ಸಿಯ ಗೀತಾಂಜಲಿ ಜೆಮ್ಸ್ ನಿಧಿ ಆಧಾರಿತ ಬಂಡವಾಳದಲ್ಲಿ 86.5 ಕೋ. ರೂ. ವಂಚನೆ ಎಸಗಿದೆ ಎಂದು ಖಾಸಗಿ ಬ್ಯಾಂಕ್ ಆಗಿರುವ ಕರ್ಣಾಟಕ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮಾಹಿತಿ ನೀಡಿದೆ.

ಗೀತಾಂಜಲಿ ಜೆಮ್ಸ್ ಲಿಮಿಟೆಡ್‌ಗೆ ನೀಡಲಾಗಿದ್ದ ದುಡಿಯುವ ಬಂಡವಾಳ ಸಾಲದಲ್ಲಿ ರಫ್ತು ಬಿಲ್ಲುಗಳು ಪಾವತಿಯಾಗದ ನೆಪವೊಡ್ಡಿ ಮತ್ತು ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ತನಗೆ 86.47 ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂದು ಕರ್ಣಾಟಕ ಬ್ಯಾಂಕ್ ಬುಧವಾರ ರಾತ್ರಿ ಶೇರುವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

  ಅದಾಗ್ಯೂ, ಮೆಹುಲ್ ಚೋಕ್ಸಿ ಕಂಪೆನಿಯ ಯಾವುದೇ ತಿಳುವಳಿಕಾ ಪತ್ರ (ಲೆಟರ್ ಆಫ್ ಅಂಡರ್‌ಸ್ಟಾಂಡಿಂಗ್) ನಮ್ಮಲ್ಲಿ ಇಲ್ಲ ಎಂದು ಕರ್ನಾಟಕ ಬ್ಯಾಂಕ್ ಸ್ಪಷ್ಟಪಡಿಸಿದೆ. ಆರ್‌ಬಿಐ ಮಾರ್ಗಸೂಚಿಯಂತೆ ರೂಪಿಸಲಾದ ಸಾಮೂಹಿಕ ವ್ಯವಸ್ಥೆ ಹಾಗೂ ನಿಬಂಧನೆಗಳಂತೆ ಬ್ಯಾಂಕ್ ನಿಧಿ ಆಧಾರಿತ ಬಂಡವಾಳ ಸೌಲಭ್ಯ ವಿಸ್ತರಿಸಲಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಕಂಪೆನಿ ಕಾರ್ಯದರ್ಶಿ ಪ್ರಸನ್ನ ಪಾಟೀಲ್ ಸಲ್ಲಿಸಿದ ದಾಖಲೆಯಲ್ಲಿ ಹೇಳಿದ್ದಾರೆ.

Comments are closed.