ಕರಾವಳಿ

ಬೈಂದೂರು, ಬ್ರಹ್ಮಾವರದಲ್ಲಿ ಸರಗಳ್ಳರ ಕೈಚಳಕ: 2 ಕರಿಮಣಿ ಕಳವು

Pinterest LinkedIn Tumblr

ಉಡುಪಿ: ಬೈಂದೂರು ಹಾಗೂ ಬ್ರಹ್ಮಾವರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಸರಗಳ್ಳರು ಎರಡು ಕರಿಮಣಿ ಎಗರಿಸಿದ್ದಾರೆ.

ಬ್ರಹ್ಮಾವರ ವರದಿ:
ಸುಹಾಸಿನಿ ಎನ್ನುವ ಮಹಿಳೆಯೋರ್ವರು ಹೇರೂರು ಗ್ರಾಮದ ಎಸ್‌. ಎಂ. ಎಸ್‌‌ಪಿ.ಯು ಕಾಲೇಜಿನ ಎದುರುಗಡೆಯಿಂದ ಇವರ ಮನೆಯ ಕಡೆಗೆ ಹೋಗುವ ಕಾಂಕ್ರೀಟ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ಗಂಡಸರು ಅವರ ಮುಂದೆ ಹೋಗಿ ಸ್ವಲ್ಪ ದೂರದಲ್ಲಿ ವಾಹನವನ್ನು ವಾಪಾಸು ತಿರುಗಿಸಿ ಅವರ ಬಳಿ ರಸ್ತೆಯ ಎಡ ಬದಿಯಲ್ಲಿ ಬೈಕ್ ನಿಲ್ಲಿಸಿದ್ದಾರೆ. ಬಳಿಕ ಹಿಂಬದಿಯಲ್ಲಿ ಕುಳಿತ್ತಿದ್ದ ವ್ಯಕ್ತಿ ವಾಹನದಿಂದ ಇಳಿದು ಒಂದು ಚೀಟಿಯನ್ನು ತೋರಿಸಿ ವಿಳಾಸ‌ ಕೇಳಿದ್ದು ಸುಹಾಸಿನಿಯವರು ಆ ಚೀಟಿಯನ್ನು ನೋಡುತ್ತಿದ್ದಾಗ ಆ ವ್ಯಕ್ತಿ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 5 ಪವನ್‌‌ ತೂಕದ ಕರಿಮಣಿ ಸರವನ್ನು ಎಳೆದುಕೊಂಡು ಗುಲಾಬಿ ಬಣ್ಣದಂತೆ ಕಂಡು ಬರುವ ಸ್ಕೂಟಿ ಮಾದರಿಯ ವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಕಡೆಗೆ ವೇಗವಾಗಿ ತೆರಳಿ ಪರಾರಿಯಾಗಿದ್ದಾರೆ. ಅದರ ಅಂದಾಜು ಮೌಲ್ಯ 80,000/- ರೂ ಆಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಬೈಂದೂರು ವರದಿ:
ಉಪ್ಪುಂದ ಮೂಲದ ಗುಲಾಬಿ ಶೆಡ್ತಿ ಎನ್ನುವ 68 ವರ್ಷ ಪ್ರಾಯದ ಮಹಿಳೆ ಕಿರಿಮಂಜೇಶ್ವರ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಕಿರಿಮಂಜೇಶ್ವರ ಹೈಸ್ಕೂಲ್ ಎದುರು ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅವರ ಹಿಂದಿನಿಂದ ಮೋಟಾರ್ ಸೈಕಲ್ಲಿನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಸ್ವಲ್ಪ ಮುಂದೆ ಹೋಗಿ ವಾಪಾಸ್ಸು ಬೈಕನ್ನು ತಿರುಗಿಸಿಕೊಂಡು ಅವರ ಬಳಿ ಬಂದು ಬೈಕನ್ನು ನಿಲ್ಲಿಸಿ ವಿಳಾಸ ಕೇಳಿದ್ದು ಅದಕ್ಕೆ ಗುಲಾಬಿ ಅವರು ತನಗೆ ಗೊತ್ತಿಲ್ಲ ಎಂದು ಹೇಳಿ ಮುಂದೆ ಸಾಗಿದ್ದಾರೆ. ಕೂಡಲೇ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡ ವ್ಯಕ್ತಿ ಒಮ್ಮೇಲೆ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರಕ್ಕೆ ಕೈಹಾಕಿ ಎಳೆದನು ಆಗ ಕರಿಮಣಿ ಸರ ಹರಿದು ಹೋಗಿದ್ದು ಗುಲಾಬಿಯವರು ಮಣ್ಣು ರಸ್ತೆಗೆ ಬಿದ್ದಿರುತ್ತಾರೆ. ಕರಿಮಣಿ ಸರ ಆತನ ಕೈಯಲ್ಲಿ ಹೋಗಿದ್ದು ಬೈಕಿನಲ್ಲಿ ಬಂದವರು ಹೈವೆ ಕಡೆಗೆ ಬೈಕ್ ಸಮೇತ ಪರಾರಿಯಾಗಿದ್ದಾರೆ. ಚಿನ್ನದ ಕರಿಮಣಿ ಸರವು 2 ಎಳೆಯ ಚಿನ್ನದ ಸರವಾಗಿದ್ದು ಅದಕ್ಕೆ ಚಿನ್ನದ ಗುಬ್ಬಿ ತಾಳಿ ಇತ್ತು, 4 ಪವನ್ ತೂಕದ್ದಾಗಿರುವ ಸರದ ಮೌಲ್ಯ 60,000/- ರೂಪಾಯಿ ಆಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.